ಹಾರ್ವರ್ಡ್ ವಿಶ್ವವಿದ್ಯಾಲಯದ ಹೆಸರು ಹೇಳಿ ಪತ್ರಕರ್ತೆ ನಿಧಿ ರಜ್ದಾನ್ಗೆ ವಂಚನೆ
ಕಳೆದ ಜೂನ್ ತಿಂಗಳಲ್ಲಿ ನಿಧಿ ಟ್ವೀಟ್ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.
ಹಿರಿಯ ಪತ್ರಕರ್ತೆ ಹಾಗೂ ನ್ಯೂಸ್ ಆ್ಯಂಕರ್ ನಿಧಿ ರಜ್ದಾನ್ ಫಿಶಿಂಗ್ (phishing) ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ನಿಧಿಗೆ ಮೋಸ ಮಾಡಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ನಿಧಿ ಟ್ವೀಟ್ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪಾಠ ಮಾಡಲು ಅವಕಾಶ ನೀಡುತ್ತಿದ್ದೇವೆ. ನೀವು ಸಹಾಯಕ ಪ್ರಾಧ್ಯಾಪಕಿಯಾಗಿ ಸೇರ್ಪಡೆಯಾಗಿ ಎಂದು ಕಳೆದ ವರ್ಷ ನಿಧಿ ಅವರಿಗೆ ಇ-ಮೇಲ್ ಮೂಲಕ ಕೋರಲಾಗಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯದವರೇ ಇದನ್ನು ಕಳುಹಿಸಿದ್ದಾರೆ ಎಂದು ನಂಬಿದ ನಿಧಿ, ಆಫರ್ ಒಪ್ಪಿಕೊಂಡಿದ್ದರು. ಅಲ್ಲದೆ, ಇ-ಮೇಲ್ ಕಳುಹಿಸಿದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು.
ಆಫರ್ ಲೆಟರ್ ಸಿಕ್ಕ ಬೆನ್ನಲ್ಲೇ ನಿಧಿ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 2020ರಂದು ಇವರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಜಾಯಿನ್ ಆಗಲು ಸೂಚಿಸಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ತರಗತಿಗಳು ಜನವರಿ 2021ರವರೆಗೆ ಮುಂದೂಡಲ್ಪಟ್ಟಿವೆ ಎಂದು ನಿಧಿಗೆ ಇ-ಮೇಲ್ ಮೂಲಕ ತಿಳಿಸಲಾಗಿತ್ತು.
I have been the victim of a very serious phishing attack. I’m putting this statement out to set the record straight about what I’ve been through. I will not be addressing this issue any further on social media. pic.twitter.com/bttnnlLjuh
— Nidhi Razdan (@Nidhi) January 15, 2021
ಈಗ ಮತ್ತೆ ವಿಚಾರಣೆ ಮಾಡಿದಾಗ, ತರಗತಿಗೆ ಆರಂಭ ಆಗೋದು ಕೊಂಚ ವಿಳಂಬವಾಗಬಹುದು ಎಂದು ಆ ಕಡೆಯಿಂದ ಉತ್ತರ ಬಂದಿತ್ತು. ಈ ವೇಳೆ ಅನುಮಾನಗೊಂಡ ನಿಧಿ, ನೇರವಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಆ ರೀತಿಯ ಯಾವುದೇ ಆಫರ್ ಕೊಟ್ಟಿಲ್ಲ ಎನ್ನುವ ವಿಚಾರ ಬಯಲಾಗಿದೆ. ಅಲ್ಲದೆ, ನಿಧಿ ಅವರ ಖಾಸಗಿ ಮಾಹಿತಿ ಕೂಡ ಕದ್ದಿರುವ ವಿಚಾರ ಕೂಡ ಹೊರ ಬಿದ್ದಿದೆ. ಸದ್ಯ, ನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಫಿಶಿಂಗ್ ವಂಚನೆ ಕೆಲ ಕಂಪೆನಿ ಹೆಸರನ್ನು ಅಥವಾ ವ್ಯಕ್ತಿ ಬಳಕೆ ಮಾಡಿಕೊಂಡು ನಡೆಸುವ ವಂಚನೆ. ಖಾಸಗಿ ಮಾಹಿತಿ ಕದಿಯಲು ಈ ತಂತ್ರ ಬಳಕೆ ಮಾಡಲಾಗುತ್ತದೆ.
I’ve been overwhelmed by the calls & messages of support including the DMs here. I apologise for not writing back immediately. I’m taking a well earned break from social media for a few days & will return refreshed and as good as new. In the mean time keep safe everyone.
— Nidhi Razdan (@Nidhi) January 15, 2021
ವಿವಾದಿತ ‘ಕೊವ್ಯಾಕ್ಸಿನ್’ ಲಸಿಕೆ ಸ್ವೀಕರಿಸಿದ ಪತ್ರಕರ್ತೆ.. ನೀವೂ ಲಸಿಕೆ ಸ್ವೀಕರಿಸಿ ಎಂದು ಜನಸಾಮಾನ್ಯರಿಗೆ ಕರೆ