GST: ಸದ್ಯ ಪೆಟ್ರೋಲ್ ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

| Updated By: guruganesh bhat

Updated on: Sep 17, 2021 | 9:46 PM

Nirmala Sitharaman: ಈಕುರಿತು ಕೇರಳ ಹೈಕೋರ್ಟ್​ಗೆ ಮಾಹಿತಿ ನೀಡಬೇಕಾಗಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

GST: ಸದ್ಯ ಪೆಟ್ರೋಲ್ ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ದೆಹಲಿ: ಸದ್ಯ ಪೆಟ್ರೋಲ್ ಮತ್ತು ಡೀಸೆಲ್​ಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವ ವಿಚಾರ ಸದ್ಯ ಕೇರಳ ಹೈಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಈಕುರಿತು ಕೇರಳ ಹೈಕೋರ್ಟ್​ಗೆ ಮಾಹಿತಿ ನೀಡಬೇಕಾಗಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೊವಿಡ್ ಸಂಬಂಧಿತ ಔಷಧಗಳಿಗೆ ಡಿಸೆಂಬರ್ 31ರವರೆಗೆ ವಿನಾಯಿತಿ ಮುಂದುವರಿಸಲಾಗಿದೆ. ಆಂಫೋಟೆರಿಸಿನ್, ಟೋಸಿಲಿಜುಮಾಬ್ ಮೇಲೆ ಜಿಎಸ್ಟಿ ಇಲ್ಲ. ರೆಮ್ಡಿಸಿವಿರ್, ಹೆಪರಿನ್ ಮೇಲೆ ಶೇ. 5ರಷ್ಟು ಜಿಎಸ್‌ಟಿ, ಇಟೋಲಿಜುಮಾಬ್, ಪೋಸಕೋಜೋಲ್, ಪವಿಪಿರವಿರ್, ಕಾಸಿರಿವಿಮಬ್, ಇಂಡಿವಿಮಬ್, ಡಿಯೋಕ್ಸಿ ಡಿ ಗ್ಲೂಕೋಸ್, ಮೇಲಿನ ಜಿಎಸ್‌ಟಿ ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಕ್ಯಾನ್ಸರ್ ಔಷಧ ಮತ್ತು ಬಯೋ ಡೀಸೆಲ್ ಮೇಲಿನ ಜಿಎಸ್ಟಿಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ. ಆಮದಾಗುವ ವೈಮಾನಿಕ ಸಾಮಗ್ರಿಗೆ IGSTಯಿಂದ ವಿನಾಯಿತಿ ನೀಡಲಾಗಿದ್ದು, ಪೆನ್ಗಳ ಮೇಲೆ ಶೇಕಡಾ 18ರಷ್ಟು ಜಿಎಸ್ಟಿ ವಿಧಿಸಲಾಗಿದೆ.

ತೆಂಗಿನ ಎಣ್ಣೆ ಮೇಲೆ ಜಿಎಸ್​ಟಿ ವಿಧಿಸುವ ವಿಚಾರವಾಗಿ ಹೆಚ್ಚಿನ ಅಧ್ಯಯನಕ್ಕೆ ಪ್ರಸ್ತಾವನೆಯನ್ನು ಜಿಎಸ್​ಟಿ ಮಂಡಳಿ ತಡೆ ಹಿಡಿಯಿತು. ಒಂದು ಲೀಟರ್​ಗಿಂತ  ಕಡಿಮೆ ತೆಂಗಿನ ಎಣ್ಣೆಗೆ ಕೂದಲಿಗೆ ಹಚ್ಚುವ ಎಣ್ಣೆ ಎಂದು ವರ್ಗಿಕರಿಸಿ ಶೇಕಡಾ 18 ಜಿಎಸ್​ಟಿ, ಒಂದು ಲೀಟರ್​ಗಿಂತ ಹೆಚ್ಚಿನ ತೆಂಗಿನ ಎಣ್ಣೆಗೆ ಶೇಕಡಾ 5 ಜಿಎಸ್​ಟಿ ವಿಧಿಸಲು ಮಂಡಳಿ ನಿರ್ಧರಿಸಿತು. ಹಣ್ಣಿನ ಜ್ಯೂಸ್‌ಗಳ ಮೇಲೆ ಶೇ.12ರಷ್ಟು ಪರಿಹಾರದೊಂದಿಗೆ ಜಿಎಸ್‌ಟಿ ಶೇಕಡಾ 28ಕ್ಕೆ ಏರಿಸಲು ನಿರ್ಣಯಿಸಲಾಯಿತು.

ಇದನ್ನೂ ಓದಿ:

 ಪೆಟ್ರೋಲ್ ಡೀಸೆಲ್​ಗಳನ್ನು ಜಿಎಸ್​ಟಿ ಅಡಿ ತರಬಾರದು: ಸಿದ್ದರಾಮಯ್ಯ ಆಗ್ರಹ

Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ

(Nirmala Sitharaman says did not bring petrol and diesel under GST because of Kerala High Court hearing)

Published On - 9:13 pm, Fri, 17 September 21