ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು..

SCO Summit: ಶಾಂಘೈ ಸಹಕಾರ ಸಂಘಟನೆ ಸ್ಥಾಪಿತವಾಗಿ 20 ವರ್ಷ ಕಳೆದ ಹಿನ್ನೆಲೆಯಲ್ಲಿ ಪ್ರಸಕ್ತ ಬಾರಿಯ ಶೃಂಗಸಭೆ ತುಂಬ ಮಹತ್ವ ಪಡೆದುಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು..
ನರೇಂದ್ರ ಮೋದಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತಕ್ಕೆ ಬಂದು ತಿಂಗಳು ಕಳೆದರೂ, ಉಳಿದ ದೇಶಗಳ ನಾಯಕರು ಕೆಲವು ಹೇಳಿಕೆಗಳನ್ನು ನೀಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಹೆಚ್ಚೇನೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಇಂದು ಎಸ್​ಸಿಒ ಶೃಂಗಸಭೆ (SCO Summit) (ಶಾಂಘೈ ಸಹಕಾರ ಸಂಘಟನೆ)ಯಲ್ಲಿ ಅಫ್ಘಾನಿಸ್ತಾನವನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಈಗಿರುವ ತಾಲಿಬಾನ್​ ಸರ್ಕಾರ ಎಲ್ಲವನ್ನೂ ಒಳಗೊಂಡಿರುವ ಸರ್ಕಾರ ಅಲ್ಲ. ಅಲ್ಲಿ ಯಾವುದೇ ಮಾತುಕತೆ ಇಲ್ಲದೆಯೇ ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ.  

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡಿಲ್ಲ. ಯಾವುದೇ ಮಾತುಕತೆ, ಕ್ರಮದ ಮೂಲಕ ಜಾರಿಗೆ ಬಂದ ಸರ್ಕಾರವೂ ಇದಲ್ಲ.  ನಿರಂತರವಾಗಿ ಪೂರೈಕೆಯಾದ ಮಾದಕವ್ಯಸನಗಳು, ಅಕ್ರಮ ಶಸ್ತ್ರಾಸ್ತ್ರಗಳು, ಮಾನವ ಕಳ್ಳಸಾಗಣೆಗಳು ಅಫ್ಘಾನಿಸ್ತಾನದ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎಂದು ಮೋದಿ ಇಂದಿನ ಶೃಂಗಸಭೆಯಲ್ಲಿ ವ್ಯಾಖ್ಯಾನಿಸಿದರು.  ತೀವ್ರವಾದ, ಉಗ್ರವಾದಗಳು ಹೆಚ್ಚುತ್ತಿರುವುದು ಏಷ್ಯನ್​ ದೇಶಗಳಿಗೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಸೂಕ್ತ ನಿರ್ಧಾರ ಕೈಗೊಳ್ಳುವುದು ತುಂಬ ಮುಖ್ಯ. ವಿಶ್ವಸಂಸ್ಥೆಯ ಕ್ರಮಗಳನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.  ಇದೀಗ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡಬೇಕು. ಹಾಗೇ, ಆ ನೆರವು ಅಫ್ಘಾನರನ್ನು ನೇರವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದೂ ಹೇಳಿದರು.

ಶಾಂಘೈ ಸಹಕಾರ ಸಂಘಟನೆ ಸ್ಥಾಪಿತವಾಗಿ 20 ವರ್ಷ ಕಳೆದ ಹಿನ್ನೆಲೆಯಲ್ಲಿ ಪ್ರಸಕ್ತ ಬಾರಿಯ ಶೃಂಗಸಭೆ ತುಂಬ ಮಹತ್ವ ಪಡೆದುಕೊಂಡಿದೆ. ಈ ಶೃಂಗಸಭೆ ತಜಕೀಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿದ್ದು, ಭಾರತದ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಭೌತಿಕವಾಗಿ ಉಪಸ್ಥಿತರಿದ್ದಾರೆ.  ಅವರಿಂದ ಚೀನಾ ವಿದೇಶಾಂಗ ಸ

ಇದನ್ನೂ ಓದಿ: ನ್ಯೂಜಿಲೆಂಡ್ ಮಾಡಿದ್ದು ಸರಿಯಲ್ಲ, ಪ್ರಧಾನಿ ಮಾತಿಗೂ ಕಿಮ್ಮತ್ತಿಲ್ಲ! ಇದನ್ನು ಐಸಿಸಿ ಮುಂದಿಡಲಿದ್ದೇವೆ; ಪಾಕ್​ ಕ್ರಿಕೆಟ್ ಮಂಡಳಿ

ಸಾವಿನ ಮನೆಗೆ ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಂದ ಖ್ಯಾತ ನಟ; ಅದೇ ತಪ್ಪಾಯ್ತು

Read Full Article

Click on your DTH Provider to Add TV9 Kannada