Corona Vaccination: ಇಂದು 2 ಕೋಟಿ ಡೋಸ್​​ಗೂ ಅಧಿಕ ಕೊರೊನಾ ಲಸಿಕೆ ನೀಡಿ ದಾಖಲೆ ಬರೆದ ಭಾರತ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ (Covid 19 Vaccination) ಅಭಿಯಾನ ಅದ್ಭುತ ಗುರಿ ಸಾಧಿಸಿದೆ. ಇಂದು ಒಂದೇ ದಿನ 2 ಕೋಟಿಗೂ ಅಧಿಕ ಡೋಸ್​ಗಳಷ್ಟು ಕೊವಿಡ್​ 19 ಲಸಿಕೆಯನ್ನು ನೀಡಲಾಗಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಜನವರಿಯಲ್ಲಿ ಶುರು ಮಾಡಲಾಗಿದ್ದು, ಆಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 2 ಕೋಟಿ ಡೋಸ್​ ಗಡಿ ದಾಟಿದ್ದು ದಾಖಲೆಯನ್ನು ನಿರ್ಮಿಸಿದಂತಾಗಿದೆ. ಅಂದಹಾಗೆ ಇವತ್ತು ಬರೋಬ್ಬರಿ 2,11,28,784  ಡೋಸ್​ಗಳನ್ನು ನೀಡಿದ್ದಾಗಿ ಕೊವಿನ್​ ಪೋರ್ಟಲ್​​ನಲ್ಲಿ ದಾಖಲಾಗಿದೆ. ಮಧ್ಯಾಹ್ನ 1.30ರ […]

Corona Vaccination: ಇಂದು 2 ಕೋಟಿ ಡೋಸ್​​ಗೂ ಅಧಿಕ ಕೊರೊನಾ ಲಸಿಕೆ ನೀಡಿ ದಾಖಲೆ ಬರೆದ ಭಾರತ
ಆರೋಗ್ಯ ಸಚಿವಾಲಯ ಟ್ವೀಟ್​ ಮಾಡಿದ ಫೋಟೋ
Follow us
TV9 Web
| Updated By: Lakshmi Hegde

Updated on:Sep 17, 2021 | 6:48 PM

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ (Covid 19 Vaccination) ಅಭಿಯಾನ ಅದ್ಭುತ ಗುರಿ ಸಾಧಿಸಿದೆ. ಇಂದು ಒಂದೇ ದಿನ 2 ಕೋಟಿಗೂ ಅಧಿಕ ಡೋಸ್​ಗಳಷ್ಟು ಕೊವಿಡ್​ 19 ಲಸಿಕೆಯನ್ನು ನೀಡಲಾಗಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಜನವರಿಯಲ್ಲಿ ಶುರು ಮಾಡಲಾಗಿದ್ದು, ಆಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 2 ಕೋಟಿ ಡೋಸ್​ ಗಡಿ ದಾಟಿದ್ದು ದಾಖಲೆಯನ್ನು ನಿರ್ಮಿಸಿದಂತಾಗಿದೆ. ಅಂದಹಾಗೆ ಇವತ್ತು ಬರೋಬ್ಬರಿ 2,11,28,784  ಡೋಸ್​ಗಳನ್ನು ನೀಡಿದ್ದಾಗಿ ಕೊವಿನ್​ ಪೋರ್ಟಲ್​​ನಲ್ಲಿ ದಾಖಲಾಗಿದೆ. ಮಧ್ಯಾಹ್ನ 1.30ರ ಹೊತ್ತಿಗೇ ಲಸಿಕೆ 1 ಕೋಟಿ ಡೋಸ್​ ಗಡಿ ದಾಟಿತ್ತು. 

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಕೊವಿಡ್​ 19 ಲಸಿಕಾ ಬೃಹತ್​ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಒಂದೇದಿನ 2 ಕೋಟಿ ಡೋಸ್​ ಗಡಿ ದಾಟುವ ಮೂಲಕ ದೇಶ ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.

ಇನ್ನು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಫುಲ್​ ಖುಷಿಯಾಗಿದ್ದಾರೆ. ಇಂದಿನ ಲಸಿಕಾ ಮೇಳ ತುಂಬ ವೇಗವಾಗಿ ನಡೆಯಿತು. ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಲೇಬೇಕು ಎಂದು ಹೇಳಿದ್ದಾರೆ. ಮಧ್ಯಾಹ್ನ 1.30ರ ಹೊತ್ತಿಗೆ ಒಂದು ಕೋಟಿ ಡೋಸ್​ ಮೀರಿದಾಗಲೇ ಟ್ವೀಟ್ ಮಾಡಿದ್ದ ಅವರು,  ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂತು ದೇಶ 1 ಕೋಟಿ ಡೋಸ್​ ಕೊವಿಡ್ 19 ಲಸಿಕೆಯನ್ನು ನೀಡಿದೆ. ಇನ್ನೂ ಸಂಜೆಯವರೆಗೆ ಸಮಯವಿದೆ. ಇಂದು ಕೊರೊನಾ ಲಸಿಕೆ ನೀಡುವುದರಲ್ಲಿ ನಾವು ಖಂಡಿತ ದಾಖಲೆ  ಬರೆಯುತ್ತೇವೆ. ಇದೇ ಪ್ರಧಾನಿ ಮೋದಿಯವರಿಗೆ ನೀಡುವ ಉಡುಗೊರೆ ಎಂದು ಹೇಳಿದ್ದರು.

ಭಾರತದಲ್ಲಿ ಜನವರಿಯಿಂದ ಕೊವಿಡ್​ 19 ಲಸಿಕಾ ಅಭಿಯಾನ ಶುರುವಾಗಿದ್ದರೂ ಕೆಲವು ಅಡಚಣೆಗಳ ಕಾರಣದಿಂದ ಮಧ್ರ ಸ್ವಲ್ಪ ದಿನ ತೊಡಕಾಗಿತ್ತು. ಆದರೆ ಈಗ ಅಭಿಯಾನ ವೇಗ ಪಡೆದುಕೊಂಡಿದೆ. ಇಲ್ಲಿಯವರೆಗೆ ಆಗಸ್ಟ್​ 27, ಆಗಸ್ಟ್​ 31 ಮತ್ತು ಸೆಪ್ಟೆಂಬರ್​ 6ರಂದು 1 ಕೋಟಿಗೂ ಹೆಚ್ಚು ಡೋಸ್​ಗಳಷ್ಟು ಕೊರೊನಾ ಲಸಿಕೆ ನೀಡಲಾಗಿತ್ತು.

ಇದನ್ನೂ ಓದಿ: Vaccination: ದೇಶದಲ್ಲಿ ಇಂದು ಬೃಹತ್ ಲಸಿಕೆ ಮೇಳ; ಈಗಾಗಲೇ 1 ಕೋಟಿ ಡೋಸ್ ಲಸಿಕೆ ನೀಡಿ ದಾಖಲೆ

ದುರ್ಗಾಮಾತೆ ಪರಮಭಕ್ತ ಪ್ರಧಾನಿ ಮೋದಿ ನಾಲ್ಕು ದಶಕಗಳಿಂದ ನವರಾತ್ರಿ ಉಪವಾಸ ವ್ರತ ಅಚರಿಸಿಕೊಂಡು ಬಂದಿದ್ದಾರೆ!

ಬಿಗ್​ ಬಾಸ್​ ಮನೆಯಲ್ಲಿ ಶಮಿತಾ ಜತೆಗೆ ಸಲಿಗೆ; ಮೌನ ಮುರಿದ ರಾಕೇಶ್​ ಬಾಪಟ್​ ಮಾಜಿ ಪತ್ನಿ  

Published On - 6:36 pm, Fri, 17 September 21

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ