ನ್ಯೂಜಿಲೆಂಡ್ ಮಾಡಿದ್ದು ಸರಿಯಲ್ಲ, ಪ್ರಧಾನಿ ಮಾತಿಗೂ ಕಿಮ್ಮತ್ತಿಲ್ಲ! ಇದನ್ನು ಐಸಿಸಿ ಮುಂದಿಡಲಿದ್ದೇವೆ; ಪಾಕ್ ಕ್ರಿಕೆಟ್ ಮಂಡಳಿ
ಕಿವಿ ಮಂಡಳಿಯ ಈ ನಿರ್ಧಾರದ ನಂತರ, ರಾಜಾ ಅವರ ಆಕ್ರೋಶ ಭುಗಿಲೆದ್ದಿತು. ನ್ಯೂಜಿಲೆಂಡ್ನ ಈ ನಿರ್ಧಾರವನ್ನು ಐಸಿಸಿಯಲ್ಲಿ ಪ್ರಶ್ನಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಮತ್ತೊಮ್ಮೆ ದೊಡ್ಡ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡ ತನ್ನ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಶುಕ್ರವಾರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನವೇ ಕಿವಿ ತಂಡ ಈ ನಿರ್ಧಾರ ಕೈಗೊಂಡಿದೆ. ಭದ್ರತಾ ಕಾರಣಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನ್ಯೂಜಿಲ್ಯಾಂಡ್ ಸರ್ಕಾರ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ನ ಭದ್ರತಾ ಸಲಹೆಗಾರರ ಸಲಹೆಯನ್ನು ಅನುಸರಿಸಿ ಪಾಕಿಸ್ತಾನದ ಪ್ರವಾಸವನ್ನು ರದ್ದುಗೊಳಿಸುವುದಾಗಿ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರವಾಸದಲ್ಲಿ ನ್ಯೂಜಿಲೆಂಡ್ ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ 20 ಸರಣಿಯನ್ನು ಆಡಬೇಕಿತ್ತು. ಆದರೆ ಈ ಪ್ರವಾಸದಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಾಗುವುದಿಲ್ಲ. ನ್ಯೂಜಿಲ್ಯಾಂಡ್‌ನ ಈ ನಿರ್ಧಾರದ ಮೇಲೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷ ಮತ್ತು ಮಾಜಿ ನಾಯಕ ರಮೀಜ್ ರಾಜಾ ಕೋಪಗೊಂಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಮಾಡಿದ ಮೋಸವನ್ನು ಐಸಿಸಿ ಮುಂದೆ ಇಡಲಾಗುವುದು ಎಂದು ರಾಜಾ ಹೇಳಿದ್ದಾರೆ.
ಸೀಮಿತ ಓವರ್‌ಗಳ ಸರಣಿಯ ಮೊದಲ ಏಕದಿನ ಪಂದ್ಯವು ಶುಕ್ರವಾರ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಸಮಯಕ್ಕೆ ಸರಿಯಾಗಿ ಆರಂಭವಾಗಲಿಲ್ಲ ಜೊತೆಗೆ ಆಟಗಾರರಿಗೂ ಸಹ ಹೋಟೆಲ್ನಿಂದ ಬೊರಬರದಂತೆ ಆದೇಶ ಹೊರಡಿಸಲಾಯಿತು. ಇದರ ನಂತರ, ನ್ಯೂಜಿಲ್ಯಾಂಡ್ ಕ್ರಿಕೆಟ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಹೇಳಿಕೆಯನ್ನು ನೀಡಿದ್ದು, ನ್ಯೂಜಿಲೆಂಡ್ ಸರ್ಕಾರದಿಂದ ಬಂದ ಆದೇಶದ ನಂತರ ಪ್ರವಾಸವನ್ನು ಮುಂದುವರಿಸಲು ಸಾಧ್ಯವಿಲ್ಲ. ಇದು ಪಿಸಿಬಿಗೆ ಒಂದು ಹೊಡೆತ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಆಟಗಾರರ ಸುರಕ್ಷತೆಯು ಅತ್ಯುನ್ನತವಾಗಿದೆ ಆದರೆ ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ ಎಂದರು.
ರಾಜಾ ನ್ಯೂಜಿಲೆಂಡ್ ಮೇಲೆ ಕೋಪಗೊಂಡರು ಕಿವಿ ಮಂಡಳಿಯ ಈ ನಿರ್ಧಾರದ ನಂತರ, ರಾಜಾ ಅವರ ಆಕ್ರೋಶ ಭುಗಿಲೆದ್ದಿತು. ನ್ಯೂಜಿಲೆಂಡ್ನ ಈ ನಿರ್ಧಾರವನ್ನು ಐಸಿಸಿಯಲ್ಲಿ ಪ್ರಶ್ನಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ರಾಜಾ ಟ್ವೀಟ್, ಇದು ತುಂಬಾ ಕೆಟ್ಟ ದಿನವಾಗಿದೆ. ನಮ್ಮ ಆಟಗಾರರು ಮತ್ತು ಅಭಿಮಾನಿಗಳ ಬಗ್ಗೆ ನನಗೆ ಬೇಸರವಾಗಿದೆ. ಭದ್ರತೆಯ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಪ್ರವಾಸದಿಂದ ಹಿಂದೆ ಸರಿಯುವುದು, ಅದೂ ಕೂಡ ಮಾಹಿತಿಯನ್ನು ಹಂಚಿಕೊಳ್ಳದೆ, ನಿರಾಶಾದಾಯಕವಾಗಿದೆ. ನ್ಯೂಜಿಲೆಂಡ್ ಯಾವ ಜಗತ್ತಿನಲ್ಲಿ ವಾಸಿಸುತ್ತಿದೆ ? ಎಂದು ಪ್ರಶ್ನಿಸಿದ್ದಾರೆ.
Crazy day it has been! Feel so sorry for the fans and our players. Walking out of the tour by taking a unilateral approach on a security threat is very frustrating. Especially when it’s not shared!! Which world is NZ living in??NZ will hear us at ICC.
— Ramiz Raja (@iramizraja) September 17, 2021
ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಹೇಳಿಕೆಯಲ್ಲಿ ನ್ಯೂಜಿಲ್ಯಾಂಡ್‌ಗಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದೆ. ದೇಶದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಕೂಡ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಜೊತೆ ಮಾತನಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಸರ್ಕಾರವು ಎಲ್ಲಾ ಭೇಟಿ ನೀಡುವ ತಂಡಗಳಿಗೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡುತ್ತಿದೆ. ನಾವು ಅದರ ಬಗ್ಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ಗೆ ಭರವಸೆ ನೀಡಿದ್ದೇವೆ. ಪಾಕಿಸ್ತಾನದ ಪ್ರಧಾನಿ (ಇಮ್ರಾನ್ ಖಾನ್) ವೈಯಕ್ತಿಕವಾಗಿ ಪ್ರಧಾನಿಯವರೊಂದಿಗೆ ಮಾತನಾಡಿದರು. ಜೊತೆಗೆ ನಮ್ಮಲ್ಲಿ ವಿಶ್ವದ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಇದೆ ಮತ್ತು ಭೇಟಿ ನೀಡುವ ತಂಡಕ್ಕೆ ಯಾವುದೇ ರೀತಿಯ ಭದ್ರತಾ ಬೆದರಿಕೆ ಇಲ್ಲ ಎಂದು ಹೇಳಿದರು. ಆದರೂ ಕೂಡ ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದಿದೆ ಎಂದಿದ್ದಾರೆ.