ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಮತ್ತು ತೃಣಮೂಲ ಕಾಂಗ್ರೆಸ್ನ ಲೋಕ ಸಭಾ ಸದಸ್ಯೆ ಮಹಾ ಮೊಯಿತ್ರಾ ಅವರ ನಡುವೆ ಸಂಸತ್ತಿನ ಒಳಗೆ ಮತ್ತು ಹೊರಗೆ ಬುಧವಾರ ಮಾತಿನ ಕಾಳಗ ನಡೆದಿದ್ದು, ಮೊಯಿತಾ ಅವರು ಐಟಿ ಸಮಿತಿಯ ಸಭೆಯೊಂದರಲ್ಲಿ ತನ್ನನ್ನು ಮೂರು ಬಾರಿ ಬಿಹಾರಿ ಗೂಂಡಾ ಅಂತ ನಿಂದಿಸಿದರು ಎಂದು ದುಬೆ ಆರೋಪಿಸಿದ್ದಾರೆ. ದುಬೆ ತಮ್ಮ ಟ್ಚಿಟರ್ ಹ್ಯಾಂಡಲ್ನಲ್ಲಿ ಆರೋಪ ಮಾಡಿರುವುದರಿಂದ ಮೊಯಿತ್ರಾ ಸಹ ಟ್ವಿಟರ್ ಮೂಲಕವೇ ಉತ್ತರ ನೀಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಮೊಯಿತ್ರಾ, ದುಬೆ ಅವರು ಮಾಡಿರುವ ನಿಂದನೆಯ ಆರೋಪ ತನ್ನನ್ನು ವಿಸ್ಮಯಗೊಳಿಸಿದೆ, ಯಾಕೆಂದರೆ ಅವರು ಉಲ್ಲೇಖಸಿರುವ ಸಭೆ ನಡೆಯಲೇ ಇಲ್ಲ ಎಂದಿದ್ದಾರೆ. ಸಭೆಯ ಅಜೆಂಡಾ ಸಾರ್ವಜನಿಕಗೊಳ್ಳುತ್ತಿದೆ ಎಂದು ದೂರಿ ಪ್ರತಿಭಟಿಸಿದ ಬಿಜೆಪಿ ಸಂಸದರು, ಐಟಿ ಸಭೆ ಹಾಜರಾತಿ ಪುಸ್ತಕದಲ್ಲಿ ಸಹಿಯನ್ನು ಸಹ ಮಾಡಲಿಲ್ಲ, ಎಂದು ಮೊಯಿತ್ರಾ ಹೇಳಿದ್ದಾರೆ.
ತೃಣಮೂಲ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್ ಮಾಡಿರುವ ದುಬೆ ಅವರು, ‘ನಿಮ್ಮ ಸಂಸದೆ ನನ್ನನ್ನು ನಿಂದಿಸಿದ ರೀತಿ ನೋಡಿದರೆ, ಉತ್ತರ ಭಾರತೀಯರು ಮತ್ತು ಹಿಂದಿ-ಮಾತನಾಡುವ ಜನರ ವಿರುದ್ಧ ನಿಮ್ಮ ಪಕ್ಷಕ್ಕಿರುವ ದ್ವೇಷದ ಭಾವನೆ ಭಾರತೀಯರಿಗೆ ಸ್ಪಷ್ಟವಾಗುತ್ತದೆ,’ ಎಂದು ಹೇಳಿದ್ದಾರೆ.
तृणमूल @AITCofficial ने बिहारी गुंडा शब्द का प्रयोग कर बिहार के साथ साथ पूरे हिन्दी भाषी लोगों को गाली दी है,@MamataOfficial जी आप के सांसद महुआ मोइत्रा की इस गाली ने उत्तर भारतीय व ख़ासकर हिंदी भाषी लोगों के प्रति आपके पार्टी के नफ़रत को देश के सामने लाया है।
— Dr Nishikant Dubey (@nishikant_dubey) July 28, 2021
ಅವರ ಟ್ವೀಟ್ಗೆ ಉತ್ತರಿಸಿಸಿರುವ ಮೊಯಿತ್ರಾ ಅವರು, ‘ ನಿಂದಿಸಿರುವ ಆರೋಪ ಕೇಳಿ ಕೊಚ ವಿಸ್ಮಿತಳಾಗಿದ್ದೇನೆ. ಕೋರಂನ ಕೊರತೆಯಿಂದಾಗಿ ಐಟಿ ಸಭೆ ನಡೆಯಲಿಲ್ಲ-ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ನನ್ನಿಂದ ನಿಂದನೆಗೊಳಗಾದೆನೆಂದು ಹೇಳುತ್ತಿರುವ ವ್ಯಕ್ತಿ ಆ ಸ್ಥಳದಲ್ಲೇ ಇಲ್ಲದಿರುವಾಗ ನಾನು ಅದನ್ನು ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ, ದಯವಿಟ್ಟು ಹಾಜರಾತಿ ಪುಸ್ತಕವನ್ನೊಮ್ಮೆ ಪರಿಶೀಲಿಸಿರಿ,’ ಎಂದು ಹೇಳಿದ್ದಾರೆ.
Am a bit amused by charges of name-calling.
IT mtng did not happen because NO quorum – members did not attend.How can I call someone a name who was not even present!!
Check attendance sheet!@ShashiTharoor , @KartiPC @NasirHussainINC @MdNadimulHaque6— Mahua Moitra (@MahuaMoitra) July 28, 2021
ಆದರೆ ಮೂಲಗಳ ಪ್ರಕಾರ, ಐಟಿ ಸಭೆಯನ್ನು ಬಿಜೆಪಿ ನಾಯಕರು ಬಹಿಷ್ಕರಿಸಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ನಿರಾಕರಿಸಿದ ನಂತರ ಇಬ್ಬರು ನಾಯಕರ ನಡುವೆ ತೀವ್ರ ಸ್ವರೂಪದ ವಾಗ್ವಾದ ಪಾರ್ಲಿಮೆಂಟ್ನಲ್ಲೇ ಶುರವಾಯಿತು. ಸಭೆಯ ಅಜೆಂಡಾವನ್ನು ಯಾಕೆ ಸಾರ್ವಜನಿಕಗೊಳಿಸಲಾಗುತ್ತಿದೆ ಎಂದು ದುಬೆ ಅವರು ಕೇಳಿದಾಗ, ಮೊಯಿತ್ರಾ ಅವರು, ‘ನೀವು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ನಿರಾಕರಿಸಿರುವುದರಿಂದ, ನೀವು ಸಭೆಗೆ ಗೈರು ಅಂತಾಯ್ತು. ಹಾಗಿದ್ದ ಮೇಲೆ ನೀವು ಪ್ರಶ್ನೆ ಕೇಳುವ ಪ್ರಮೇಯ ಹೇಗೆ ಉದ್ಭವಿಸುತ್ತದೆ?’ ಎಂದು ಕೇಳಿದರು.
ಬುಧವಾರದಂದು ದುಬೆ ಅವರು, ಮಾಹಿತಿ ಮತ್ತು ತಂತ್ರಜ್ಞಾನ ಸ್ಥಾಯ ಸಮಿತಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಸ್ಥಾನದಿಂದ ಸರಿಸಲು ಕೋರಿ ಹಕ್ಕುಚ್ಯುತಿ ನಿಲುವಳಿಯನ್ನು ಮಂಡಿಸಲು ನೋಟೀಸ್ ನೀಡಿದರು. ಸಮಿತಿಯ ಸಭೆಯಲ್ಲಿ ಪೆಗಾಸಸ್ ಗೂಢಚರ್ಯೆ ಬಗ್ಗೆ ಚರ್ಚೆ ನಡೆಸುವುದು ನಿಗದಿಯಾಗಿತ್ತು, ಆದರೆ ಬಿಜೆಪಿ ಸಂಸದರು ಹಾಜರಿ ಪುಸ್ತಕಕ್ಕೆ ಸಹಿ ಮಾಡಲು ನಿರಾಕರಿಸಿದ್ದರಿಂದ ಸಭೆ ನಡೆಯಲಿಲ್ಲ. ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಉತ್ತರಿಸಲು ಸರ್ಕಾರ ತಯಾರಿದ್ದರೂ ಅಧಿವೇಶನ ನಡೆಯಲು ಬಿಡದೆ ಆ ಸಂಗತಿಗಳನ್ನು ಸಮಿತಿ ಸಭೆಯಲ್ಲಿ ಚರ್ಚಿಸಲು ಸಿದ್ಧವಾಗಿದ್ದು ಆಘಾತಕಾರಿಯಾಗಿದೆ ಎಂದು ದುಬೆ ಹೇಳಿದರು.
ಇದನ್ನೂ ಓದಿ: ಸೋನಿಯಾ ಗಾಂಧಿ-ಮಮತಾ ಬ್ಯಾನರ್ಜಿ ಭೇಟಿ, 45 ನಿಮಿಷ ಚರ್ಚೆ; 2024ರ ಹೊತ್ತಿಗೆ ಪ್ರಧಾನಿ ಮೋದಿ V/S ದೇಶ ಎಂದಾಗುತ್ತದೆ ಎಂದ ದೀದಿ