ಭಾರತದ ಕೊವಿಡ್ ಲಸಿಕೆ ಪ್ರಕ್ರಿಯೆಯನ್ನು ಬೆಂಬಲಿಸಲು ಅಮೆರಿಕದಿಂದ 2.5 ಕೋಟಿ ಅಮೆರಿಕನ್ ಡಾಲರ್ ನೆರವು ಘೋಷಣೆ

TV9 Digital Desk

| Edited By: Rashmi Kallakatta

Updated on: Jul 28, 2021 | 10:58 PM

COVID-19 Vaccination: ಅಮೆರಿಕವು 20 ಕೋಟಿ ಡಾಲರ್​ಗಳಿಗಿಂತ ಹೆಚ್ಚು ಮೌಲ್ಯದ ಕೊವಿಡ್ ಸಹಾಯವನ್ನು ನೀಡಿದೆ. ಭಾರತದಾದ್ಯಂತ ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ಬೆಂಬಲಿಸಲು ಅಮೆರಿಕ ಸರ್ಕಾರವು ಹೆಚ್ಚುವರಿ 2.5 ಕೋಟಿ ಡಾಲರ್​ಗಳನ್ನು ಕಳುಹಿಸುತ್ತದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಭಾರತದ ಕೊವಿಡ್ ಲಸಿಕೆ ಪ್ರಕ್ರಿಯೆಯನ್ನು ಬೆಂಬಲಿಸಲು ಅಮೆರಿಕದಿಂದ 2.5 ಕೋಟಿ ಅಮೆರಿಕನ್ ಡಾಲರ್ ನೆರವು ಘೋಷಣೆ
ಎಸ್.ಜೈಶಂಕರ್- ಆಂಟನಿ ಬ್ಲಿಂಕೆನ್

ದೆಹಲಿ: ಭಾರತದಾದ್ಯಂತ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಬೆಂಬಲಿಸಲು ಅಮೆರಿಕ 2.5 ಕೋಟಿ ಡಾಲರ್ ನೆರವು ನೀಡುವುದಾಗಿ ಬುಧವಾರ ಘೋಷಿಸಿದೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಲಸಿಕೆ ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವ ಮೂಲಕ, ತಪ್ಪು ಮಾಹಿತಿ, ಲಸಿಕೆ ಹಿಂಜರಿಕೆಯನ್ನು ಪರಿಹರಿಸುವ ಮೂಲಕ ಮತ್ತು ಹೆಚ್ಚಿನ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಸಹಾಯ ಮಾಡುವ ಮೂಲಕ ಜೀವ ಉಳಿಸಲು ಈ ಹಣವು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಅಮೆರಿಕವು 20 ಕೋಟಿ ಡಾಲರ್​ಗಳಿಗಿಂತ ಹೆಚ್ಚು ಮೌಲ್ಯದ ಕೊವಿಡ್ ಸಹಾಯವನ್ನು ನೀಡಿದೆ. ಭಾರತದಾದ್ಯಂತ ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ಬೆಂಬಲಿಸಲು ಅಮೆರಿಕ ಸರ್ಕಾರವು ಹೆಚ್ಚುವರಿ 2.5 ಕೋಟಿ ಡಾಲರ್​ಗಳನ್ನು ಕಳುಹಿಸುತ್ತದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬ್ಲಿಂಕೆನ್ ಘೋಷಿಸಿದರು.

“ಈ ಹಣವು ಲಸಿಕೆ ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವ ಮೂಲಕ, ತಪ್ಪು ಮಾಹಿತಿ, ಲಸಿಕೆ ಹಿಂಜರಿಕೆಯನ್ನು ಪರಿಹರಿಸುವ ಮೂಲಕ ಮತ್ತು ಹೆಚ್ಚಿನ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಸಹಾಯ ಮಾಡುವ ಮೂಲಕ ಜೀವ ಉಳಿಸಲು ಸಹಾಯ ಮಾಡುತ್ತದೆ. ಭಾರತ ಮತ್ತು ಅಮೆರಿಕದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕಲು ನಾವು ನಿರ್ಧರಿಸಿದ್ದೇವೆ. ಇದಕ್ಕಾಗಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದಿದ್ದಾರೆ ಬ್ಲಿಂಕೆನ್.

ಕೊವಿಡ್ ಸಾಂಕ್ರಾಮಿಕವು ಅಮೆರಿಕ ಮತ್ತು ಭಾರತದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಬ್ಲಿಂಕೆನ್ ಹೇಳಿದರು. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಭಾರತವು ನಮಗೆ ನೀಡಿದ ನೆರವು ಮತ್ತು ಸಹಾಯವನ್ನು ಮರೆಯುವುದಿಲ್ಲ. ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇವೆ. ನಾವು ಆ ನೆರವಿಗೆ ಪ್ರತಿಯಾಗಿ ಅದನ್ನು ಅನ್ನು ಹಿಂದಿರುಗಿಸಬಹುದೆಂದು ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಲಸಿಕೆ ಕಚ್ಚಾ ಸಾಮಗ್ರಿ ಪೂರೈಕೆ ಸರಪಳಿಯನ್ನು ಮುಕ್ತವಾಗಿಡಲು ಅಮೆರಿಕದ ಪ್ರಯತ್ನಗಳನ್ನು ಭಾರತ ಒಪ್ಪಿಕೊಂಡಿದೆ ಎಂದು ಜೈಶಂಕರ್ ಹೇಳಿದರು.

“ಕೈಗೆಟುಕುವ ಲಸಿಕೆಗಳ ಜಾಗತಿಕ ಲಭ್ಯತೆಯ ಅಗತ್ಯವನ್ನು ನಾವು ಚರ್ಚಿಸಿದ್ದೇವೆ. ಭಾರತೀಯ ಪ್ರಯಾಣಿಕರ ಬಗ್ಗೆ ಅಮೆರಿಕ ಸಹಾನುಭೂತಿಯ ದೃಷ್ಟಿಕೋನವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದ ಜೈಶಂಕರ್, ಲಸಿಕೆ ಲಭ್ಯತೆ ಮತ್ತು ಉತ್ಪಾದನೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಜೈಶಂಕರ್ ಮತ್ತು ಬ್ಲಿಂಕೆನ್ ಅವರು ಸಭೆಯಲ್ಲಿ ಅಫ್ಘಾನಿಸ್ತಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.

ಜೈಶಂಕರ್  ಜತೆಗಿನ ಸಭೆ ನಂತರ ಬ್ಲಿಂಕೆನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ ಅಮೆರಿಕ  ವಿದೇಶಾಂಗ ಕಾರ್ಯದರ್ಶಿಯನ್ನು ಇಂದು ಭೇಟಿಮಾಡಿದೆ.  ನಾವು ಹಂಚಿಕೊಂಡಿರುವ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಗಟ್ಟಿ ನಂಬಿಕೆ ಇರುವ  ಮತ್ತು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿರುವ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಅಧ್ಯಕ್ಷ ಬಿಡೆನ್ ಅವರ ಬಲವಾದ ಬದ್ಧತೆಯನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ‘ಕೆಲವು ಸಂಬಂಧಗಳು ಹೆಚ್ಚು ಮಹತ್ವದ್ದಾಗಿದೆ, ಸಾಂಕ್ರಾಮಿಕದ ಆರಂಭದಲ್ಲಿ ಭಾರತದ ಸಹಾಯವನ್ನು ಅಮೆರಿಕ ಮರೆಯುವುದಿಲ್ಲ: ಆಂಟನಿ ಬ್ಲಿಂಕೆನ್‌

ಇದನ್ನೂ ಓದಿ:  ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್​ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ

(United States announces USD 25 million assistance to support COVID-19 vaccination in India)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada