179 ಸಮುದಾಯಗಳನ್ನು ಎಸ್​ಸಿ, ಎಸ್​ಟಿ, ಒಬಿಸಿ ಪಟ್ಟಿಗೆ ಸೇರಿಸಲು ನೀತಿ ಆಯೋಗದ ಸಮಿತಿ ಶಿಫಾರಸು

|

Updated on: Jan 21, 2025 | 4:47 PM

ಭಾರತದ ಮಾನವಶಾಸ್ತ್ರೀಯ ಸಮೀಕ್ಷೆ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಮೊದಲ ಬಾರಿಗೆ 268 ಅಧಿಸೂಚಿತ, ಅರೆ-ಅಲೆಮಾರಿ ಮತ್ತು ಅಲೆಮಾರಿ ಬುಡಕಟ್ಟುಗಳನ್ನು ಸಮಗ್ರವಾಗಿ ವರ್ಗೀಕರಿಸಿವೆ. ನೀತಿ ಆಯೋಗದ ಸಮಿತಿಯ ವರದಿ ಬಾಕಿ ಇದ್ದು, ಆ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸಮೀಕ್ಷೆಗಳು ನಡೆದಿವೆ.

179 ಸಮುದಾಯಗಳನ್ನು ಎಸ್​ಸಿ, ಎಸ್​ಟಿ, ಒಬಿಸಿ ಪಟ್ಟಿಗೆ ಸೇರಿಸಲು ನೀತಿ ಆಯೋಗದ ಸಮಿತಿ ಶಿಫಾರಸು
Niti Aayog
Follow us on

ನವದೆಹಲಿ: ಒಂದು ಮಹತ್ವದ ಜನಾಂಗೀಯ ಅಧ್ಯಯನದಲ್ಲಿ ಭಾರತದ ಮಾನವಶಾಸ್ತ್ರೀಯ ಸಮೀಕ್ಷೆ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಮೊದಲ ಬಾರಿಗೆ ಭಾರತದಾದ್ಯಂತ 268 ಡಿನೋಟಿಫೈಡ್, ಅರೆ-ಅಲೆಮಾರಿ ಮತ್ತು ಅಲೆಮಾರಿ ಬುಡಕಟ್ಟುಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿವೆ. ನೀತಿ ಆಯೋಗ ಸಮಿತಿಯಿಂದ ಮಾಡಲಾದ ಈ 3 ವರ್ಷಗಳ ಅಧ್ಯಯನವು ದೀರ್ಘಕಾಲದಿಂದ ಕಡೆಗಣಿಸಲ್ಪಟ್ಟ ಸಮುದಾಯಗಳನ್ನು ಮುಂಚೂಣಿಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಪಟ್ಟಿಗಳಿಗೆ 179 ಸಮುದಾಯಗಳನ್ನು ಸೇರಿಸಲು ಈ ನೀತಿ ಆಯೋಗದ ಸಮಿತಿಯ ವರದಿಯು ಶಿಫಾರಸು ಮಾಡುತ್ತದೆ. ಇವುಗಳಲ್ಲಿ 85 ಹೊಸ ಸೇರ್ಪಡೆಗಳಾಗಿವೆ. 46 ಸಮುದಾಯಗಳನ್ನು OBC ಸ್ಥಾನಮಾನಕ್ಕಾಗಿ, 29 ಸಮುದಾಯಗಳನ್ನು SC ಸ್ಥಾನಮಾನಕ್ಕಾಗಿ ಮತ್ತು 10 ಸಮುದಾಯಗಳನ್ನು ST ಸ್ಥಾನಮಾನಕ್ಕಾಗಿ ಪ್ರಸ್ತಾಪಿಸಲಾಗಿದೆ. ಉತ್ತರ ಪ್ರದೇಶವು 19 ಹೊಸ ಸೇರ್ಪಡೆಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ತಲಾ 8 ಸೇರ್ಪಡೆಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ: ದೇಶದಲ್ಲಿ ಪ್ರಸ್ತುತ 144 ಕೋಟಿ ಜನಸಂಖ್ಯೆ ಇದ್ದರೂ ಭಾರತ ಏಕೆ ಇನ್ನೂ ಹೆಚ್ಚು ಮಕ್ಕಳು ಬೇಕೆಂದು ಬಯಸುತ್ತಿದೆ?

9 ಸಮುದಾಯಗಳನ್ನು ಮರುವರ್ಗೀಕರಣಕ್ಕಾಗಿ ಗುರುತಿಸಲಾಗಿದೆ. ಆದರೆ, ಇತರ ಹಲವು ಸಮುದಾಯಗಳನ್ನು ಭಾಗಶಃ ಸೇರಿಸಲಾಗಿದೆ ಎಂದು ಕಂಡುಬಂದಿದೆ. ಕೆಲವು ರಾಜ್ಯಗಳಲ್ಲಿ ಅಥವಾ ಸೀಮಿತ ಕೇಂದ್ರ ದಾಖಲೆಗಳಲ್ಲಿ ಮಾತ್ರ ಪಟ್ಟಿ ಮಾಡಲಾಗಿದೆ. ಫೆಬ್ರವರಿ 2020ರಲ್ಲಿ ಪ್ರಾರಂಭಿಸಲಾದ ಈ ಅಧ್ಯಯನ ಒಡಿಶಾ, ಗುಜರಾತ್ ಮತ್ತು ಅರುಣಾಚಲ ಪ್ರದೇಶದ TRIಗಳಿಂದ ಪರಿಣತಿಯನ್ನು ಪಡೆದುಕೊಂಡಿತು.

ಇದನ್ನೂ ಓದಿ: ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಶೇ. 48; ಜಿಡಿಪಿಗೆ ಕೊಡುಗೆ ಶೇ. 18 ಮಾತ್ರ; ಸರ್ಕಾರಕ್ಕೆ ಮಹಿಳಾ ಅಂತರ ತಗ್ಗಿಸುವ ಗುರಿ

ನಾಲ್ಕನೇ ಮತ್ತು ಅಂತಿಮ ಹಂತವು ಆಗಸ್ಟ್ 2022ರಲ್ಲಿ ಮುಕ್ತಾಯಗೊಂಡಿತು. ಇದು ಪೂರ್ಣಗೊಂಡಿದ್ದರೂ ಸಂಶೋಧನೆಗಳು ನೀತಿ ಆಯೋಗ ಸಮಿತಿಯ ಪರಿಶೀಲನೆಯಲ್ಲಿವೆ. ಆದರೆ, ಸಾಮಾಜಿಕ ನ್ಯಾಯ ಸಚಿವಾಲಯವು ಇನ್ನೂ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿಲ್ಲ. ಆದರೆ, ಈ ಅಧ್ಯಯನವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಜನಸಂಖ್ಯೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ