ಯಾರು ಯಾರಿಗೂ ಬಲವಂತಪಡಿಸದಿರಿ… ಕೆಲಸದ ಕಾಮೆಂಟ್​ಗಳಿಗೆ ತೆರೆ ಎರೆಯಲು ಇನ್ಫೋಸಿಸ್ ಮೂರ್ತಿ ಯತ್ನ

NR Narayana Murthy's clarification on 70-hour workweek: ದೇಶದ ಅಭಿವೃದ್ಧಿಗಾಗಿ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಎನ್ ಆರ್ ನಾರಾಯಣಮೂರ್ತಿ ನೀಡಿದ ಹೇಳಿಕೆ ಸಾಕಷ್ಟು ವಿವಾದ, ಚರ್ಚೆಗೆ ಎಡೆಯಾಗಿದೆ. ಇದೀಗ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಸಂಸ್ಥಾಪಕರು, ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಯಾರು ಏನು ಮಾಡಬೇಕು, ಏನು ಮಾಡಬಾರದು ಎಂದು ಯಾರೂ ಕೂಡ ಬಲವಂತಪಡಿಸಬಾರದು ಎಂದಿದ್ದಾರೆ.

ಯಾರು ಯಾರಿಗೂ ಬಲವಂತಪಡಿಸದಿರಿ... ಕೆಲಸದ ಕಾಮೆಂಟ್​ಗಳಿಗೆ ತೆರೆ ಎರೆಯಲು ಇನ್ಫೋಸಿಸ್ ಮೂರ್ತಿ ಯತ್ನ
ಎನ್ ಆರ್ ನಾರಾಯಣಮೂರ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2025 | 5:08 PM

ಮುಂಬೈ, ಜನವರಿ 21: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರಿಂದಲೇ ಆರಂಭವಾದ ಕೆಲಸದ ಅವಧಿ ಕುರಿತ ಚರ್ಚೆ ಸಾಕಷ್ಟು ವಿವಾದಗಳ ಸ್ವರೂಪ ಪಡೆಯತೊಡಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣಮೂರ್ತಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ. ದೇಶದ ಅಭ್ಯುದಯಕ್ಕಾಗಿ ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಆ ಬಗ್ಗೆ ಮತ್ತೆ ಮಾತನಾಡಿರುವ ಅವರು, ಯಾರು ಕೂಡ ಯಾವುದನ್ನೂ ಬೇರೆಯವರಿಗೆ ಹೇರಬಾರದು ಎಂದು ಸಲಹೆ ನೀಡಿದ್ದಾರೆ.

ಮುಂಬೈನ ಕಿಲಾಚಂದ್ ಮೆಮೋರಿಯಲ್ ಲೆಕ್ಚರ್​ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಎನ್ ಆರ್ ನಾರಾಯಣಮೂರ್ತಿ ಅವರು ಹಿಂದೆ ತಾವಾಡಿದ್ದ 70 ಗಂಟೆ ಕೆಲಸದ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ‘ನೀವು ಈ ಕೆಲಸ ಮಾಡಬೇಕು, ನೀವು ಈ ಕೆಲಸ ಮಾಡಬಾರದು ಎಂದು ಯಾರೂ ಕೂಡ ಹೇಳಬಾರದು’ ಎಂದು ತಮ್ಮ ಅಭಿಪ್ರಾಯಪಟ್ಟಿದ್ದಾರೆ.

‘ನಾನು ಬೆಳಗ್ಗೆ 6:20ಕ್ಕೆಲ್ಲಾ ಆಫೀಸ್​ಗೆ ಹೋಗುತ್ತಿದ್ದೆ. ಅಲ್ಲಿಂದ ತೆರಳುತ್ತಿದ್ದುದು ರಾತ್ರಿ 8:30ಕ್ಕೆ. ಅದು ನಿಜ. ಹಾಗೆ ಮಾಡುತ್ತಿದ್ದುದು ತಪ್ಪು ಎಂದು ಯಾರೂ ಹೇಳಲು ಆಗೋದಿಲ್ಲ. ಎಷ್ಟು ಅವಧಿ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅದನ್ನು ಸಾರ್ವಜನಿಕ ಚರ್ಚೆಗೆ ತರಬಾರದು’ ಎಂದಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣದ ಬೊಂಬೆಗಳಂತೆ ವಿಶೇಷ ಈ ಏಟಿಕೊಪ್ಪಕ ಆಟಿಕೆ; ಪ್ರಧಾನಿ ಪ್ರಶಂಸೆ ಬಳಿಕ ಮರುಜೀವ ಪಡೆದ ಈ ಬೊಂಬೆ ಕಲೆ

‘ಈ ವಿಚಾರಗಳು ಆತ್ಮವಿಮರ್ಶೆಗೆ ಬಳಕೆ ಆಗಬೇಕು. ಇದರ ಬಗ್ಗೆ ಯೋಚಿಸಿ ಒಬ್ಬ ವ್ಯಕ್ತಿ ತಾನೇನು ಮಾಡಬೇಕು, ಮಾಡಬಾರದು ಎನ್ನುವ ನಿಲುವಿಗೆ ಬರಬೇಕು,’ ಎಂದು ಇನ್ಫೋಸಿಸ್ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

ಕೆಲ ತಿಂಗಳ ಹಿಂದೆ ಯಾವುದೋ ಕಾರ್ಯಕ್ರಮವೊಂದರಲ್ಲಿ ನಾರಾಯಣಮೂರ್ತಿ ಅವರು ಮಾತನಾಡುತ್ತಾ, ಇಂದಿನ ಯುವಕರು ವಾರಕ್ಕೆ 70 ಗಂಟೆಯಾದರೂ ಕೆಲಸ ಮಾಡಬೇಕು ಎಂದು ಹೇಳಿ, ಜಪಾನ್, ಜರ್ಮನಿ ಮೊದಲಾದ ದೇಶಗಳು ಸಾಧಿಸಿದ ಅಭಿವೃದ್ಧಿಯ ನಿದರ್ಶನಗಳನ್ನು ನೀಡಿದ್ದರು.

ನಾರಾಯಣಮೂರ್ತಿ ಅವರ 70 ಗಂಟೆ ಕೆಲಸದ ಸಲಹೆ ಸಾಮಾನ್ಯ ನಾಗರಿಕರಿಗೆ ಅಪಥ್ಯ ಎನಿಸಿದೆ. ಉದ್ಯಮ ವಲಯದಲ್ಲೂ ಭಿನ್ನ ಅನಿಸಿಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲ ಉದ್ಯಮಿಗಳು ಮತ್ತು ಸಿಇಒಗಳು ವರ್ಕ್ ಲೈಫ್ ಬ್ಯಾಲನ್ಸ್ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿದ್ದಾರೆ. ಇನ್ನೂ ಕೆಲ ಸಿಇಒಗಳು ನಾರಾಯಣಮೂರ್ತಿ ಅವರ ಸಲಹೆಯಲ್ಲಿ ಸತ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಹೊಸ ಟ್ರಂಪ್ ಮೀಮ್ ಕಾಯಿನ್, ಪತ್ನಿಯ ಹೊಸ ಕ್ರಿಪ್ಟೋಕಾಯಿನ್; ಏನಿದು ಮೀಮ್ ಕಾಯಿನ್?

ಇತ್ತೀಚೆಗೆ, ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಹ್ಮಣ್ಯನ್ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರವೂ ಬಂದು ಕೆಲಸ ಮಾಡಬೇಕು ಎಂದಿದ್ದರು. ಅಷ್ಟೆ ಅಲ್ಲ, ಮನೆಯಲ್ಲಿ ಕೂತು ಎಷ್ಟು ಹೊತ್ತು ಎಂದು ಹೆಂಡ್ತಿ ಮುಖ ನೋಡಿಕೊಂಡು ಇರುತ್ತೀರಿ ಎಂದು ತಮ್ಮ ಉದ್ಯೋಗಿಗಳನ್ನು ಟ್ರೋಲ್ ಮಾಡಿದ್ದರು. ಅವರ ಈ ಕಾಮೆಂಟ್​ಗಳು ಇಂಟರ್ನೆಟ್​ನಲ್ಲಿ ಟ್ರೋಲ್ ಆಗಿವೆ. ತಮ್ಮಿಂದಲೇ ಶುರುವಾದ ಈ ವಿವಾದಗಳಿಗೆ ನಾರಾಯಣಮೂರ್ತಿಯವರೇ ಇದೀಗ ತೆರೆ ಎಳೆಯಲು ಯತ್ನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ