ನನ್ನ ಮೇಲೆ ಕೊರೊನಾ ವ್ಯಾಕ್ಸಿನ್​ ಪರಿಣಾಮ ಬೀರಿಲ್ಲ; ಮೋಸ ಮಾಡಿದ್ದಾರೆ ಎಂದು ಪೊಲೀಸ್​ ಕಂಪ್ಲೇಟ್​ ಕೊಟ್ಟ ವ್ಯಕ್ತಿ!

|

Updated on: Jun 01, 2021 | 10:02 AM

Covishield vaccine antibody: ಮೇ 21ರಂದು ಐಸಿಎಂಆರ್ ನಿರ್ದೇಶಕ ಬಲರಾಮ್​ ಭಾರ್ಗವ ಅವರು ದೂರದರ್ಶನದಲ್ಲಿ ಮಾತನಾಡುತ್ತಾ ವ್ಯಾಕ್ಸಿನ್ ಹಾಕಿಸಿಕೊಂಡರೆ ಉತ್ತಮ ಪ್ರಮಾಣದಲ್ಲಿ ಪ್ರತಿಕಾಯ ಉತ್ಪತ್ತಿಯಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಆದರೆ ಅವರ ಮಾತಿನಲ್ಲಿ ಹುರುಳಿಲ್ಲ ಎಂಬುದು ನನ್ನ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಪ್ರತಾಪ್​ ಚಂದ್ರ ದೂರಿದ್ದಾರೆ.

ನನ್ನ ಮೇಲೆ ಕೊರೊನಾ ವ್ಯಾಕ್ಸಿನ್​ ಪರಿಣಾಮ ಬೀರಿಲ್ಲ; ಮೋಸ ಮಾಡಿದ್ದಾರೆ ಎಂದು ಪೊಲೀಸ್​ ಕಂಪ್ಲೇಟ್​ ಕೊಟ್ಟ ವ್ಯಕ್ತಿ!
ನನ್ನ ಮೇಲೆ ಕೊರೊನಾ ವ್ಯಾಕ್ಸಿನ್​ ಪರಿಣಾಮ ಬೀರಿಲ್ಲ; ಮೋಸ ಮಾಡಿದ್ದೀರಿ ಎಂದು ಪೊಲೀಸ್​ ಕಂಪ್ಲೇಟ್​ ದಾಖಲು!
Follow us on

ಲಖ್ನೋ: ಕೊರೊನಾ ಸೋಂಕಿನ ವಿರುದ್ಧ ನನಗೆ ಲಸಿಕೆ ಹಾಕಿದ್ದಾರೆ. ಆದರೆ ಅದು ಪರಿಣಾಮ ಬೀರಿಲ್ಲ; ನನ್ನ ದೇಹದಲ್ಲಿ ಪ್ರತಿಕಾಯ ಅಂದ್ರೆ antibody ಬಂದಿಲ್ಲ. ಇದರಿಂದ ನನಗೆ ಮೋಸ ಮಾಡಿದಂತಾಗಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್​ ದೂರು​ ದಾಖಲಿಸಿದ್ದಾರೆ! ಉತ್ತರ ಪ್ರದೇಶದ ಲಖ್ನೋ ನಗರದ ಆಶಿಯಾನಾ ಬಡಾವಣೆಯ ನಿವಾಸಿ ವ್ಯಾಕ್ಸಿನೇಶನ್​ ಹೆಸರಿನಲ್ಲಿ ನನಗೆ ವಂಚನೆ ಮಾಡಲಾಗಿದೆ ಎಂದು ದೂರಿ, ಪ್ರತಾಪ್​ ಚಂದ್ರ ಎಂಬುವವರು ಪೊಲೀಸ್​ ಕಂಪ್ಲೇಟ್ ಕೊಟ್ಟಿದ್ದಾರೆ.

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್​ 8 ರಂದೇ ನಾನು ಕೊರೊನಾ ಲಸಿಕೆ ಹಾಕಿಸಿಕೊಂಡೆ. 28 ದಿನಗಳ ಬಳಿಕ ನಾನು ಎರಡನೆಯ ಡೋಸ್​ ಹಾಕಿಸಿಕೊಳ್ಳಬೇಕಿತ್ತು. ಆದ್ರೆ ಹೊಸ ಮಾರ್ಗಸೂಚಿ ಪ್ರಕಾರ ಅದು ವಿಳಂಬವಾಯ್ತು. ಈ ಮಧ್ಯೆ ಮೊದಲ ಲಸಿಕೆ ಹಾಕಿಸಿಕೊಂಡ ಬಳಿಕ ನಾನು ಕಾಯಿಲೆಗೆ ಬಿದ್ದೆ ಎಂದು ಟ್ರಾವೆಲ್​ ಏಜೆನ್ಸಿ ನಡೆಸುವ ಪ್ರತಾಪ್​ ಚಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೇ 21ರಂದು ಐಸಿಎಂಆರ್ ನಿರ್ದೇಶಕ ಬಲರಾಮ್​ ಭಾರ್ಗವ ಅವರು ದೂರದರ್ಶನದಲ್ಲಿ ಮಾತನಾಡುತ್ತಾ ವ್ಯಾಕ್ಸಿನ್ ಹಾಕಿಸಿಕೊಂಡರೆ ಉತ್ತಮ ಪ್ರಮಾಣದಲ್ಲಿ ಪ್ರತಿಕಾಯ (antibody) ಉತ್ಪತ್ತಿಯಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಆದರೆ ಅವರ ಮಾತಿನಲ್ಲಿ ಹುರುಳಿಲ್ಲ ಎಂಬುದು ನನ್ನ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಪ್ರತಾಪ್​ ಚಂದ್ರ ದೂರಿದ್ದಾರೆ.

ಅದಾದ ಬಳಿಕ ಮೇ 25ರಂದು ಎರಡನೆಯ ಲಸಿಕೆ ಹಾಕಿಸಿಕೊಂಡೆ. ಮೇ 27ರಂದು ಟೆಸ್ಟ್ ವರದಿ ನೆಗೆಟೀವ್​ ಅಂತಾ ಬಂತು. ಅದರರ್ಥ ವ್ಯಾಕ್ಸಿನ್​ ಲಸಿಕೆ ಹಾಕಿಸಿಕೊಂಡ ಬಳಿಕವೂ ನನ್ನಲ್ಲಿ ಪ್ರತಿಕಾಯ ಅಂದ್ರೆ antibody ಉತ್ಪತ್ತಿಯಾಗಿಲ್ಲ. ಬದಲಿಗೆ ಬ್ಲಡ್​ ಪ್ಲೇಟ್​​ಲೆಟ್​ 3 ಕ್ಷ ಇದ್ದಿದ್ದು 1.5 ಲಕ್ಷಕ್ಕೆ ಇಳಿಯಿತು. ಇದರಿಂದ ಲಸಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿರುವುದು ದೃಢಪಡುತ್ತದೆ. ಇದರಿಂದ ನನ್ನ ಜೀವ ಅಪಾಯದಲ್ಲಿದೆ ಎಂದು ಆತ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರತಾಪ್​ ಚಂದ್ರ ತಮ್ಮ ದೂರಿನಲ್ಲಿ ಲಸಿಕೆ ತಯಾರಿಕಾ ಕಂಪನಿ ಮಾಲೀಕ, ಕೇಂದ್ರ ಸರ್ಕಾರದ ಜಂಟಿ ಆರೋಗ್ಯ ಕಾರ್ಯದರ್ಶಿ, ಐಸಿಎಂಆರ್ ನಿರ್ದೇಶಕ, ರಾಷ್ಟ್ರೀಯ ಆರೋಗ್ಯ ಯೋಜನೆಯ ನಿರ್ದೇಶಕ ಮತ್ತು ಕೊನೆಗೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರನ್ನೂ ಹೆಸರಿಸಿದ್ದಾರೆ.

(no antibody developed even after Covishield vaccine jab complaints lucknow resident Pratap Chandra)

Corona Vaccine: ಎರಡನೇ ಡೋಸ್​ ಕೊವಿಶೀಲ್ಡ್​, ಕೊವ್ಯಾಕ್ಸಿನ್ ಲಸಿಕೆ​ ಪಡೆಯುವವರಿಗೆ ಶುಭಸುದ್ದಿ

Published On - 10:01 am, Tue, 1 June 21