Viral Photo: ಎದೆಯೆತ್ತರ ನಿಂತ ನೀರಿನಲ್ಲಿ ಹೆಗಲ ಮೇಲೆ ಶವ ಹೊತ್ತು ನದಿ ದಾಟಿದ ಗ್ರಾಮಸ್ಥರು

ಅನಾರೋಗ್ಯದಿಂದ ಮೃತಪಟ್ಟ ಸಾಂತಾ ರಾಣಾ ಎಂಬ ವ್ಯಕ್ತಿಯ ಸಂಬಂಧಿಕರು ಅವರ ಮೃತದೇಹವನ್ನು ಎದೆಯ ಎತ್ತರ ನಿಂತಿದ್ದ ನದಿ ನೀರಿನಲ್ಲಿ ಸ್ಮಶಾನದ ಮೈದಾನಕ್ಕೆ ಸಾಗಿಸಿದ್ದಾರೆ.

Viral Photo: ಎದೆಯೆತ್ತರ ನಿಂತ ನೀರಿನಲ್ಲಿ ಹೆಗಲ ಮೇಲೆ ಶವ ಹೊತ್ತು ನದಿ ದಾಟಿದ ಗ್ರಾಮಸ್ಥರು
ಶವವನ್ನು ನದಿಯಲ್ಲಿ ಹೆಗಲ ಮೇಲೆ ಹೊತ್ತು ಸಾಗಿದ ಜನರು
Edited By:

Updated on: Aug 12, 2022 | 3:09 PM

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಒಡಿಶಾದ (Odisha Rain) ನದಿಗಳು ಉಕ್ಕಿ ಹರಿಯುತ್ತಿವೆ. ಮಳೆಯಿಂದ ತುಂಬಿ ನಿಂತಿರುವ ಒಡಿಶಾದ ಕಲಹಂಡಿ ಜಿಲ್ಲೆಯ ಗೋಲಮುಂಡಾ ಬ್ಲಾಕ್‌ನಲ್ಲಿರುವ ನದಿಯಲ್ಲಿ ಗ್ರಾಮಸ್ಥರು ಶವವನ್ನು (Dead body) ಹೆಗಲ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ ಕಂಡುಬಂದಿತು. ಬೆಹೆರಗುಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ (Cremation) ಮಾಡಲು ಗ್ರಾಮಸ್ಥರು ಮಳೆಯಲ್ಲಿ ಪರದಾಡಬೇಕಾಯಿತು. ಕೊನೆಗೆ ಎದೆಯ ಮಟ್ಟಕ್ಕೆ ನಿಂತ ನದಿಯ ನೀರಿನಲ್ಲೇ ಹೆಗಲ ಮೇಲೆ ಆ ಶವವನ್ನು ಹೊತ್ತು ಸಾಗಲಾಯಿತು.

ಅನಾರೋಗ್ಯದಿಂದ ಮೃತಪಟ್ಟ ಸಾಂತಾ ರಾಣಾ ಎಂಬ ವ್ಯಕ್ತಿಯ ಸಂಬಂಧಿಕರು ಅವರ ಮೃತದೇಹವನ್ನು ಎದೆಯ ಎತ್ತರ ನಿಂತಿದ್ದ ನದಿ ನೀರಿನಲ್ಲಿ ಸ್ಮಶಾನದ ಮೈದಾನಕ್ಕೆ ಸಾಗಿಸಿದ್ದಾರೆ. ಬಹಳ ದಿನಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದ ಸಾಂತಾ ರಾಣಾ ಮಂಗಳವಾರ ಇಹಲೋಕ ತ್ಯಜಿಸಿದ್ದರು. ಜೋರು ಮಳೆಗೆ ಉಕ್ಕಿ ಹರಿಯುತ್ತಿದ್ದ ಹೊಳೆಯ ಇನ್ನೊಂದು ಬದಿಯಲ್ಲಿ ಶವ ಸಂಸ್ಕಾರ ಮಾಡಬೇಕಾಗಿತ್ತು.

ಇದನ್ನೂ ಓದಿ: Viral Fever: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ; ಬಿರುಗಾಳಿಯಿಂದಾಗಿ ಇನ್ನಷ್ಟು ಹದಗೆಡಲಿದೆ ಆರೋಗ್ಯ

ಆದರೆ, ನದಿಗೆ ಅಡ್ಡಲಾಗಿ ಸೇತುವೆಯಿಲ್ಲದ ಕಾರಣ, ರಾಣಾ ಅವರ ಸಂಬಂಧಿಕರು ಅವರ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿದರು. ಸುರಿಯುವ ಮಳೆಯಿಂದ ಶವವನ್ನು ರಕ್ಷಿಸಲು ಅದರ ಮೇಲೆ ಬಾಳೆ ಎಲೆಗಳನ್ನು ಹಾಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Fri, 12 August 22