ದೆಹಲಿಯಲ್ಲಿ 4 ದಿನಗಳಿಂದ ಕೊರೊನಾದಿಂದ ಒಬ್ಬರೂ ಮೃತಪಟ್ಟಿಲ್ಲ; 24 ಗಂಟೆಯಲ್ಲಿ 55 ಕೇಸ್ ದಾಖಲು
Covid 19: ದೆಹಲಿಯಲ್ಲಿ ಸದ್ಯ ಪಾಸಿಟಿವಿಟಿ ರೇಟ್ ಶೇ.0.08ಗಳಷ್ಟಿದ್ದು, ಮಂಗಳವಾರ 28, ಬುಧವಾರ 36, ಗುರುವಾರ 39 ಮತ್ತು ಶುಕ್ರವಾರ 35 ಕೊರೊನಾ ಕೇಸ್ಗಳು ದಾಖಲಾಗಿದ್ದವು.
ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೊವಿಡ್ 19 ಸೋಂಕಿ (Covid 19 Virus)ನಿಂದ ಒಬ್ಬರೂ ಮೃತಪಟ್ಟಿಲ್ಲ. ಈ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕೊವಿಡ್ 19 ವೈರಸ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 25,082ರಲ್ಲೇ ನಿಂತಿದೆ. ಸತತ ನಾಲ್ಕು ದಿನಗಳಿಂದ ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು ಹೇಳಿದೆ. ಇನ್ನೂ ಒಂದು ಸಮಾಧಾನಕರ ಸಂಗತಿಯೆಂದರೆ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಕೇವಲ 55 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದು, 63 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ರಾಷ್ಟ್ರರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,37,929ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ ಸದ್ಯ ಪಾಸಿಟಿವಿಟಿ ರೇಟ್ ಶೇ.0.08ಗಳಷ್ಟಿದ್ದು, ಮಂಗಳವಾರ 28, ಬುಧವಾರ 36, ಗುರುವಾರ 39 ಮತ್ತು ಶುಕ್ರವಾರ 35 ಕೊರೊನಾ ಕೇಸ್ಗಳು ದಾಖಲಾಗಿದ್ದವು. ಆದರೆ ಒಂದೂ ಸಾವಿನ ವರದಿಯಾಗಿರಲಿಲ್ಲ. ಇಷ್ಟು ದಿನಕ್ಕೆ ಹೋಲಿಸಿದರೆ ಇಂದು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಾಗೇ, 80ಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಅಲ್ಲೀಗ ಚೇತರಿಕೆ ಪ್ರಮಾಣ ಶೇ. 98.23ರಷ್ಟಿದೆ.
ಕೊವಿಡ್19 ಸಂಭವನೀಯ ಮೂರನೇ ಅಲೆ ವಿರುದ್ಧ ಯುದ್ಧ ಶುರುಮಾಡಿದ್ದಾಗಿ ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಅದರಲ್ಲಿ ಯಶಸ್ವಿ ಕೂಡ ಆಗುತ್ತಿದೆ. ಅಲ್ಲಿ ಈಗಾಗಲೇ 9-12 ನೇ ತರಗತಿವರೆಗೆ ಶಾಲೆಗಳೂ ತೆರೆದಿವೆ. ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ವಿಚಾರದಲ್ಲಿ ಎಲ್ಲರೀತಿಯ ಅಗತ್ಯ ಕ್ರಮಗಳನ್ನೂ ಕೈಗೊಳ್ಳುವುದಾಗಿ ದೆಹಲಿ ಸರ್ಕಾರ ಭರವಸೆ ನೀಡಿದೆ.
ಇದನ್ನೂ ಓದಿ: Crop Relief Fund: ಬೆಳೆಹಾನಿಯಾದ 45,586 ರೈತರಿಗೆ 38.64 ಕೋಟಿ ಬೆಳೆ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್ ಘೋಷಣೆ
ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು
(No Covid 19 Related Death For 4th Straight Day In Delhi)