ಕಾನೂನು ವಿವಿ ವಿದ್ಯಾರ್ಥಿಗಳ ಸಾರಾಸಗಟು ತೇರ್ಗಡೆ: ಕರ್ನಾಟಕ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ

| Updated By: guruganesh bhat

Updated on: Jul 09, 2021 | 7:19 PM

ಈ ಮೊದಲು, 2020ರ ನವೆಂಬರ್ ತಿಂಗಳಲ್ಲಿ ಈ ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು. ಎನ್​ಎಲ್​ಎಸ್​ಐಯುನಲ್ಲಿ ಕಾನೂನು ವಿದ್ಯಾರ್ಥಿಯಾಗಿರುವ ಪಿ.ಬಿ. ಹೃದಯ್ ಒಂದು ವಿಷಯದಲ್ಲಿ ಅನುತ್ತೀರ್ಣರಾದ್ದರಿಂದ ಆತನನ್ನು ಮುಂದಿನ ತರಗತಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಕಾನೂನು ವಿಶ್ವವಿದ್ಯಾಲಯ ತಿಳಿಸಿತ್ತು.

ಕಾನೂನು ವಿವಿ ವಿದ್ಯಾರ್ಥಿಗಳ ಸಾರಾಸಗಟು ತೇರ್ಗಡೆ: ಕರ್ನಾಟಕ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ
ಸುಪ್ರೀಂ​ ಕೋರ್ಟ್
Follow us on

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮೂರನೇ ವರ್ಷದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯನ್ನು ನಾಲ್ಕನೇ ವರ್ಷಕ್ಕೆ ತೇರ್ಗಡೆ ಮಾಡಬೇಕೆಂಬ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ರಾಷ್ಟ್ರೀಯ ಕಾನೂನು ಶಾಲೆಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಈ ಕೇಸಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಯನ್ನು ತನ್ನ ಮುಂದಿಡುವಂತೆ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಆಧಾರದ ಮೇಲೆ ಬೇರೆ ಯಾರಾದರೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮುಂದಿನ ವರ್ಷಕ್ಕೆ ಪ್ರವೇಶ ಪಡೆಯುವಂತಿಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್​ನಲ್ಲಿ ಕಾನೂನು ವಿಶ್ವವಿದ್ಯಾಲಯದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಾಜನ್ ಪೂವಯ್ಯ, ಕರ್ನಾಟಕ ಹೈಕೋರ್ಟ್​ನ ಆದೇಶವನ್ನು ಈ ವಿಚಾರದಲ್ಲಿ ಪ್ರಮುಖವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಬೇಕಾಗಿ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರ ನ್ಯಾಯಪೀಠದ ಮುಂದೆ ಮನವಿ ಮಾಡಿದರು. ಈ ವಿದ್ಯಾರ್ಥಿಯಂತೆ ಇನ್ನೂ ಹಲವು ವಿದ್ಯಾರ್ಥಿಗಳು ಕೂಡ ಫೇಲ್​ ಆಗಿದ್ದಾರೆ. ಅದನ್ನು ಪರಿಗಣಿಸಿ ಆದೇಶ ನೀಡಬೇಕೆಂದು ವಕೀಲ ಸಾಜನ್ ಪೂವಯ್ಯ ಮನವಿ ಮಾಡಿದರು

ಈ ಬಗ್ಗೆ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್​ ನ್ಯಾಯಪೀಠ, ಇದೀಗ ಅರ್ಜಿಯಲ್ಲಿ ಚರ್ಚಿತವಾಗಿರುವ ಕಾನೂನು ವಿದ್ಯಾರ್ಥಿಗೆ ಮಾತ್ರ ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಅವಕಾಶ ನೀಡುವಂತೆ ಮಧ್ಯಂತರ ಆದೇಶ ನೀಡುವುದಾಗಿ ಹೇಳಿದೆ. ಹಾಗೇ, ಈ ಆದೇಶ ಬೇರೆ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂದು ಕೂಡ ತಿಳಿಸಿದೆ.

ಕಾನೂನು ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ನೀಡಬೇಕು ಎಂಬ ಸೂಚನೆ ನೀಡಿದ್ದ ಕರ್ನಾಟಕ ಹೈಕೋರ್ಟ್​ ವಿರುದ್ಧ ಕಾನೂನು ವಿಶ್ವವಿದ್ಯಾಲಯ (NLSIU) ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಅರ್ಜಿ ಸಲ್ಲಿಸಿತ್ತು. ಆ ವಿಶೇಷ ಅರ್ಜಿಗೆ ಸುಪ್ರೀಂಕೋರ್ಟ್​ ನೋಟಿಸ್ ಜಾರಿ ಮಾಡಿದೆ. ಈ ಮೊದಲು ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಕಾನೂನು ವಿದ್ಯಾರ್ಥಿಯಾಗಿರುವ A LLB (Hons) ನಾಲ್ಕನೇ ವರ್ಷದ ದಾಖಲಾತಿ ಮಾಡಿಕೊಳ್ಳಲು ಎನ್​ಎಲ್​​ಎಸ್​​ಐಯು ನಿರಾಕರಿಸಿತ್ತು. ಆ ಕುರಿತು ಹೈಕೋರ್ಟ್ ವಿಚಾರಣೆ ನಡೆಸಿತ್ತು.

ಈ ಮೊದಲು, 2020ರ ನವೆಂಬರ್ ತಿಂಗಳಲ್ಲಿ ಈ ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು. ಎನ್​ಎಲ್​ಎಸ್​ಐಯುನಲ್ಲಿ ಕಾನೂನು ವಿದ್ಯಾರ್ಥಿಯಾಗಿರುವ ಪಿ.ಬಿ. ಹೃದಯ್ ಒಂದು ವಿಷಯದಲ್ಲಿ ಅನುತ್ತೀರ್ಣರಾದ್ದರಿಂದ ಆತನನ್ನು ಮುಂದಿನ ತರಗತಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಕಾನೂನು ವಿಶ್ವವಿದ್ಯಾಲಯ ತಿಳಿಸಿತ್ತು.

ಆದರೆ, ವಿದ್ಯಾರ್ಥಿ ಹೃದಯ್ ವಾದ ಬೇರೆಯದೇ ಆಗಿತ್ತು. ಮಕ್ಕಳ ಹಕ್ಕುಗಳ ಕಾನೂನು ವಿಷಯದಲ್ಲಿ 2020ರ ಮಾರ್ಚ್​ ತಿಂಗಳಲ್ಲಿ ಪರೀಕ್ಷೆ ನಡೆದಿತ್ತು. ಆ ಪರೀಕ್ಷೆಯಲ್ಲಿ ನನ್ನನ್ನು ಅನುತ್ತೀರ್ಣಗೊಳಿಸಲಾಗಿದೆ. ನಾನು ಪ್ರಾಜೆಕ್ಟ್ ವರ್ಕ್ ಅನ್ನು ನಕಲಿ ಮಾಡಿದ್ದೇನೆ ಎಂದು ಆರೋಪಿಸಿ ನನ್ನನ್ನು ಅನುತ್ತೀರ್ಣಗೊಳಿಸಲಾಗಿತ್ತು. ಅದಾದ ಬಳಿಕ ನನಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಕೊರೋನಾ ನೆಪ ಹೇಳಿ ಪರೀಕ್ಷೆಗೆ ಕಾಲೇಜು ಅನುಮತಿ ನೀಡಿಲ್ಲ. ಹೀಗಾಗಿ, ಮೂರನೇ ವರ್ಷದ ಮೂರನೇ ಸೆಮಿಸ್ಟರ್​​ನಿಂದ ಮುಂದಿನ ಸೆಮಿಸ್ಟರ್​ಗೆ ನನ್ನನ್ನು ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ಆದೇಶ ನೀಡಬೇಕೆಂದು ಹೃದಯ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: 

ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ಆಳಲ್ಪಡುತ್ತಿರುವುದು ಕಾನೂನುಗಳಿಂದ ಹೊರತು ಶಾಸ್ತ್ರಗಳಿಂದಲ್ಲ: ಉತ್ತರಾಖಂಡ ಹೈಕೋರ್ಟ್​

NLSIU: ನ್ಯಾಷನಲ್​ ಲಾ ಸ್ಕೂಲ್​ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್​

(No other students be promoted based on Karnataka High Court order says Supreme Court on NLSIU )