ನುಹ್‌ನಲ್ಲಿ ಶೋಭಾ ಯಾತ್ರೆಗೆ ಅನುಮತಿ ನಿರಾಕರಣೆ, ಮೆರವಣಿಗೆ ಮಾಡೇ ಮಾಡುತ್ತೇವೆಂದು ಪಟ್ಟು ಹಿಡಿದ ಹಿಂದೂ ಪರ ಸಂಘಟನೆಗಳು
ಸೂಕ್ಷ್ಮ ಜಿಲ್ಲೆಯಾದ ನುಹ್‌ನಲ್ಲಿ ಶೋಭಾ ಯಾತ್ರೆಗೆ ಅನುಮತಿ ನೀಡದಿದ್ದರೂ ತಮ್ಮ ಯಾತ್ರೆಯನ್ನು ಮುಂದುವರೆಸುವುದಾಗಿ ಹಿಂದೂ ಪರ ಸಂಘಟನೆಗಳು ತಿಳಿಸಿವೆ. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿತ್ತು, ಮುಸ್ಲಿಂ ಸಂಖ್ಯೆ ಹೆಚ್ಚಿರುವ ನುಹ್‌ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.

ಸೂಕ್ಷ್ಮ ಜಿಲ್ಲೆಯಾದ ನುಹ್‌ನಲ್ಲಿ ಶೋಭಾ ಯಾತ್ರೆಗೆ ಅನುಮತಿ ನೀಡದಿದ್ದರೂ ತಮ್ಮ ಯಾತ್ರೆಯನ್ನು ಮುಂದುವರೆಸುವುದಾಗಿ ಹಿಂದೂ ಪರ ಸಂಘಟನೆಗಳು ತಿಳಿಸಿವೆ. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿತ್ತು, ಮುಸ್ಲಿಂ ಸಂಖ್ಯೆ ಹೆಚ್ಚಿರುವ ನುಹ್‌ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಮಂದಿ ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.
ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ, ಹರಿಯಾಣ ಸರ್ಕಾರವು 1,900 ಹರಿಯಾಣ ಪೊಲೀಸ್ ಸಿಬ್ಬಂದಿ ಮತ್ತು 24 ಕಂಪನಿ ಅರೆಸೇನಾ ಪಡೆಗಳನ್ನು ಅಂತರ-ರಾಜ್ಯ ಮತ್ತು ಅಂತರ-ಜಿಲ್ಲಾ ಗಡಿಗಳಲ್ಲಿ ನಿಯೋಜಿಸುವ ಮೂಲಕ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ. ಸೆಪ್ಟೆಂಬರ್ 3 ರಿಂದ 7 ರವರೆಗೆ ನುಹ್‌ನಲ್ಲಿ ಜಿ 20 ಶೆರ್ಪಾ ಗ್ರೂಪ್ ಸಭೆ ಮತ್ತು ಜುಲೈ 31 ಹಿಂಸಾಚಾರದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯತೆಯಿಂದಾಗಿ ರಾಜ್ಯ ಆಡಳಿತವು ಯಾತ್ರೆಗೆ ಅನುಮತಿ ನಿರಾಕರಿಸಿದೆ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೊರಗಿನವರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ ಮತ್ತು ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜುಲೈನಲ್ಲಿ ಕೋಮು ಘರ್ಷಣೆಯನ್ನು ಕಂಡ ಜಿಲ್ಲೆಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳಲಾಗಿದೆ.
ಮತ್ತಷ್ಟು ಓದಿ: G20 ಸಿದ್ಧತೆ ನಡುವೆ ಕೋಮು ಗಲಭೆ ಆತಂಕ: ಹರಿಯಾಣದ ನುಹ್‌ನಲ್ಲಿ ಮತ್ತೆ ಸೆಕ್ಷನ್ 144 ಜಾರಿ
ಹರ್ಯಾಣ ಪೊಲೀಸರು ಟೋಲ್ ಮೂಲಕ ಹಾದುಹೋಗುವ ಪ್ರತಿಯೊಂದು ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಅನುಮತಿ ನಿರಾಕರಿಸಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಬದಲು ಸಮೀಪದ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಜನರಿಗೆ ಸಲಹೆ ನೀಡಿದ್ದಾರೆ. ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 393 ಜನರನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ