
ಹೈದರಾಬಾದ್, ನವೆಂಬರ್ 1: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿಯ ದಿನವಾದ ಇಂದು ದುರಂತವೊಂದು ನಡೆದಿದೆ. ಕಾಲ್ತುಳಿತವು (Stampede) ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 9 ಜನರನ್ನು ಬಲಿ ತೆಗೆದುಕೊಂಡಿತು. ಪ್ಲಾನಿಂಗ್, ಸುರಕ್ಷತೆ ಮತ್ತು ಜನಸಂದಣಿಯ ನಿರ್ವಹಣೆಯಲ್ಲಿ ಉಂಟಾದ ಗಂಭೀರ ಲೋಪಗಳು ದೇವಸ್ಥಾನದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು ಎಂದು ತನಿಖೆಗಳು ಬಹಿರಂಗಪಡಿಸಿವೆ.
ಇಂದು ಕಾಲ್ತುಳಿತ ನಡೆದ ದೇವಸ್ಥಾನ ಖಾಸಗಿ ದೇವಾಲಯವಾಗಿದೆ. ಇದನ್ನು ರಾಜ್ಯದ ದತ್ತಿ ಇಲಾಖೆಯ ಅಡಿಯಲ್ಲಿ ನೋಂದಾಯಿಸಿರಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರ ಪರಿಣಾಮವಾಗಿ, ಯಾವುದೇ ಸರ್ಕಾರಿ ಅನುಮತಿಗಳು ಅಥವಾ ಸುರಕ್ಷತಾ ಅನುಮತಿಗಳಿಲ್ಲದೆ ಕಾರ್ಯಕ್ರಮವನ್ನು ನಡೆಸಲಾಯಿತು. ಏಕಾದಶಿಗೆ ನಿಗದಿಯಾಗಿರುವ ದೊಡ್ಡ ಸಭೆಯ ಬಗ್ಗೆ ಸಂಘಟಕರು ರಾಜ್ಯ ಆಡಳಿತಕ್ಕೆ ತಿಳಿಸಲು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
VIDEO | Andhra Pradesh: Stampede reported at Venkateswara Temple in Kashibugga in Srikakulam district; several devotees injured, rushed to hospital. More details are awaited.
(Source: Third Party)#AndhraPradesh pic.twitter.com/dOJxEI4JHC
— Press Trust of India (@PTI_News) November 1, 2025
ಇದನ್ನೂ ಓದಿ: ಕರೂರು ಕಾಲ್ತುಳಿತ ಘಟನೆ: ಸಿಬಿಐಗೆ ತನಿಖೆ ಹೊಣೆ ವಹಿಸಿದ ಸುಪ್ರೀಂಕೋರ್ಟ್
ಭಕ್ತರು ಸೇರುವ ಪ್ರದೇಶವು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಬೃಹತ್ ಜನಸಂದಣಿಗೆ ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ. ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದರೂ ಈ ದೇವಾಲಯಕ್ಕೆ ಭಕ್ತರಿಗೆ ಅನುಮತಿ ನೀಡಲಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಯಕ್ರಮವನ್ನು ನಡೆಸಲು ಯಾವುದೇ ಅನುಮತಿಗಳನ್ನು ಕೋರಿರಲಿಲ್ಲ. ಇದರಿಂದ ಜಿಲ್ಲಾಡಳಿತಕ್ಕೆ ಈ ದೇವಾಲಯದಲ್ಲಿ ಸೇರುವ ಜನರ ಪ್ರಮಾಣದ ಬಗ್ಗೆ ತಿಳಿದಿರಲಿಲ್ಲ.
ಸಣ್ಣ ತಿರುಪತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯದಲ್ಲಿ ಸುಮಾರು 10,000ರಿಂದ 15,000 ಭಕ್ತರು ಸೇರುತ್ತಾರೆ. ಆದರೆ, ಇಂದು ಏಕಾದಶಿಯಾಗಿರುವುದರಿಂದ ಸುಮಾರು 25,000 ಭಕ್ತರು ಆಗಮಿಸಿದ್ದರು. ಮಹಿಳೆಯರ ಸರದಿಯಲ್ಲಿ ಸ್ಥಳಕ್ಕಾಗಿ ಭಕ್ತರ ನಡುವೆ ನೂಕುನುಗ್ಗಲು ಉಂಟಾದಾಗ ಕಾಲ್ತುಳಿತ ಪ್ರಾರಂಭವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ: ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇಗುಲದಲ್ಲಿ ಕಾಲ್ತುಳಿತ, 9 ಮಂದಿ ಸಾವು
ಈ ದುರಂತದ ಹಿಂದಿನ ಪ್ರಮುಖ ಕಾರಣವೆಂದರೆ, ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿತ್ತು. ಭಕ್ತರು ನೂಕು ನುಗ್ಗಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಗೊಂದಲ ಮತ್ತು ದಟ್ಟಣೆ ಇನ್ನಷ್ಟು ಹದಗೆಟ್ಟಿತು. ಬಿದ್ದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಕೆಲವು ಕುಟುಂಬದ ಸದಸ್ಯರು ಕೂಡ ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡರು. ಒಂದೇ ಪ್ರವೇಶ ದ್ವಾರ ಇದ್ದುದರಿಂದ ಜನರು ಆಚೆ ಹೋಗಲು ಸಾಧ್ಯವಾಗದೆ ಪರಿಸ್ಥಿತಿ ಹದಗೆಟ್ಟಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ