ಮೋದಿ ‘ದಿಲ್ ಕಿ ಬಾತ್’; ಛತ್ತೀಸ್‌ಗಢದಲ್ಲಿ ಹೃದಯ ಕಾಯಿಲೆಯಿಂದ ಚೇತರಿಸಿಕೊಂಡ 2,500 ಮಕ್ಕಳೊಂದಿಗೆ ಪ್ರಧಾನಿ ಸಂವಾದ
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಜ್ಯದ 25ನೇ ಸಂಸ್ಥಾಪನಾ ದಿನವನ್ನು ಗುರುತಿಸಲು ಛತ್ತೀಸ್‌ಗಢಕ್ಕೆ ಭೇಟಿ ನೀಡಿದರು ಮತ್ತು 14,260 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಸರಣಿಯನ್ನು ಪ್ರಾರಂಭಿಸಿದರು. ಅವರ ಭೇಟಿಯ ಸಮಯದಲ್ಲಿ, ಅವರು ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚೇತರಿಸಿಕೊಂಡ ಮಕ್ಕಳೊಂದಿಗೆ ವಿಶೇಷ ಸಂವಾದ ನಡೆಸಿದರು. ಇಂದು ಮೋದಿ 'ಜೀವನದ ಉಡುಗೊರೆ' ಉಪಕ್ರಮದಡಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಸುಮಾರು 2,500 ಮಕ್ಕಳನ್ನು ಭೇಟಿಯಾದರು.
ಛತ್ತೀಸ್ಗಢ, ನವೆಂಬರ್ 1: ಛತ್ತೀಸ್‌ಗಢದ ನವ ರಾಯ್‌ಪುರದ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯಲ್ಲಿ ಹುಟ್ಟುವಾಗಲೇ ಹೃದಯ ಕಾಯಿಲೆಯನ್ನು ಹೊಂದಿ, ಅದರಿಂದ ಯಶಸ್ವಿಯಾಗಿ ಚೇತರಿಸಿಕೊಂಡ 2,500ಕ್ಕೂ ಹೆಚ್ಚು ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂವಾದ ನಡೆಸಿದ್ದಾರೆ. ಛತ್ತೀಸ್ಗಢ ರಾಜ್ಯದ 25ನೇ ಸಂಸ್ಥಾಪನಾ ದಿನಾಚರಣೆಯೊಂದಿಗೆ ‘ದಿಲ್ ಕಿ ಬಾತ್’ ಕಾರ್ಯಕ್ರಮದ ಭಾಗವಾಗಿ ಈ ಹೃದಯಸ್ಪರ್ಶಿ ಸಂವಾದ ನಡೆಯಿತು. ಈ ಸಂವಾದದ ತುಣುಕುಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಈ ದಿನ ಈ ಮಕ್ಕಳೊಂದಿಗೆ ಅರ್ಥಪೂರ್ಣ ಕ್ಷಣಗಳನ್ನು ಕಳೆದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

