AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೂರು ಕಾಲ್ತುಳಿತ ಪ್ರಕರಣದಲ್ಲಿ ವಿಜಯ್​ನ ಬೆಂಬಲಿಸಿದ ಅಜಿತ್

ಕರೂರು ಕಾಲ್ತುಳಿತ ಪ್ರಕರಣದಲ್ಲಿ ನಟ ವಿಜಯ್‌ಗೆ ಅಜಿತ್ ಬೆಂಬಲ ಸೂಚಿಸಿದ್ದಾರೆ. 41 ಜನರ ಸಾವಿಗೆ ವಿಜಯ್ ಒಬ್ಬರೇ ಕಾರಣರಲ್ಲ ಎಂದು ಅಜಿತ್ ಹೇಳಿದರು. ನಟರು ಜನಪ್ರಿಯತೆಗಾಗಿ ಮಾಡುವ ತ್ಯಾಗ ಮತ್ತು ಅಭಿಮಾನಿಗಳ ಪ್ರೀತಿಯನ್ನು ಪ್ರದರ್ಶಿಸುವ ಸರಿಯಾದ ಮಾರ್ಗಗಳ ಕುರಿತು ಅಜಿತ್ ಮಾತನಾಡಿದ್ದಾರೆ.

ಕರೂರು ಕಾಲ್ತುಳಿತ ಪ್ರಕರಣದಲ್ಲಿ ವಿಜಯ್​ನ ಬೆಂಬಲಿಸಿದ ಅಜಿತ್
ಅಜಿತ್
ರಾಜೇಶ್ ದುಗ್ಗುಮನೆ
|

Updated on: Nov 01, 2025 | 8:43 PM

Share

ನಟ ಹಾಗೂ ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತದಿಂದ 41 ಜನರು ನಿಧನ ಹೊಂದಿದರು. ತಮಿಳುನಾಡಿನ ಕರೂರ್​ನಲ್ಲಿ ಈ ಘಟನೆ ನಡೆದಿತ್ತು. ವಿಜಯ್ ಅವರೇ ಇದಕ್ಕೆ ನೇರ ಕಾರಣ ಎಂದು ಅನೇಕರು ಹೇಳಿದ್ದರು. ಆದಾಗ್ಯೂ ಕೆಲವರು ವಿಜಯ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ವಿಶೇಷ ಎಂದರೆ ವಿಜಯ್ ಅವರನ್ನು ಅಜಿತ್ ಬೆಂಬಲಿಸಿದ್ದಾರೆ.

ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಯಾವಾಗಲೂ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಆದರೆ, ನಿಜಕ್ಕೂ ಇವರ ಮಧ್ಯೆ ವೈಮನಸ್ಸು ಇದೆಯೇ? ಈಗ ಅಜಿತ್ ಕೊಟ್ಟ ಉತ್ತರ ನೋಡಿದರೆ ಒಬ್ಬರ ಮೇಲೆ ಒಬ್ಬರಿಗೆ ಒಳ್ಳೆಯ ಭಾವನೆ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.

‘ನಾನು ಈ ವಿಷಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಯಾರನ್ನೂ ಕೀಳಾಗಿ ಕಾಣಲು ಬಯಸುವುದಿಲ್ಲ. ಇಂದು ತಮಿಳುನಾಡಿನಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಕರೂರ್ ಅಲ್ಲಿ ಕಾಲ್ತುಳಿತ ಸಂಭವಿಸಿದೆ. ಆ ವ್ಯಕ್ತಿ (ವಿಜಯ್) ಅದಕ್ಕೆ ಜವಾಬ್ದಾರನಲ್ಲ. ನಾವೆಲ್ಲರೂ ಜವಾಬ್ದಾರರು. ಇದರಲ್ಲಿ ಮಾಧ್ಯಮಗಳ ಪಾತ್ರವೂ ಇದೆ’ ಎಂದಿದ್ದಾರೆ ಅಜಿತ್.

ಇದನ್ನೂ ಓದಿ
Image
ಬಿಗ್ ಬಾಸ್​ನಲ್ಲಿ ಕನ್ನಡದ ಕಂಪು; ವಿಶ್ ತಿಳಿಸಿದ ಸುದೀಪ್
Image
ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
Image
‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  
Image
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

‘ಜನರನ್ನು ಒಂದೆಡೆ ಸೇರಿಸಬೇಕು ಎಂಬ ಗೀಳು ಬಂದಿದೆ. ಇದೆಲ್ಲವೂ ಕೊನೆಗೊಳ್ಳಬೇಕು. ನನ್ನ ಪ್ರಕಾರ, ಕ್ರಿಕೆಟ್ ಪಂದ್ಯಗಳಿಗೂ ಜನರು ಹೋಗುತ್ತಾರೆ. ಆದರೆ, ಇದು ಯಾರ ಗಮನಕ್ಕೂ ಬರುತ್ತಿಲ್ಲ. ಇದು ಸೆಲೆಬ್ರಿಟಿಗಳಿಗೆ ಮಾತ್ರ ಆಗುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಮಾತ್ರ ಏಕೆ ಕಾಣುತ್ತಾರೆ? ಇದು ಇಡೀ ಚಲನಚಿತ್ರೋದ್ಯಮವನ್ನು ಕೆಟ್ಟದಾಗಿ ತೋರಿಸುತ್ತದೆ’ ಎಂದಿದ್ದಾರೆ ಅಜಿತ್.

ಇದನ್ನೂ ಓದಿ: ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್​ಫ್ಲಿಕ್ಸ್

‘ನಾವು ಈ ರೀತಿ ಆಗಲಿ ಎಂದು ಯಾವಾಗಲೂ ಬಯಸುವುದಿಲ್ಲ. ನಮಗೆ ಆ ಪ್ರೀತಿ ಬೇಕು. ಇದಕ್ಕಾಗಿಯೇ ನಾವು ಕೆಲಸ ಮಾಡುತ್ತೇವೆ. ಕುಟುಂಬದಿಂದ ದೂರವಿರುವುದು, ಸೆಟ್‌ಗಳಲ್ಲಿ ದೀರ್ಘಕಾಲ ಕೆಲಸ ಮಾಡುವುದು ಜನರ ಪ್ರೀತಿಗಾಗಿ. ಶೂಟ್ ಮಾಡುವಾಗ ಗಾಯ ಆಗುತ್ತದೆ, ನಿದ್ದೆ ಇಲ್ಲದಂತೆ ಆಗುತ್ತದೆ. ಇದೆಲ್ಲ ಮಾಡೋದು ಯಾವುದಕ್ಕಾಗಿ? ಜನರ ಪ್ರೀತಿಗಾಗಿ. ಆದರೆ ಆ ಪ್ರೀತಿಯನ್ನು ತೋರಿಸಲು ಒಂದು ಮಾರ್ಗವಿದೆ’ ಎಂದು ಅಜಿತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್