‘ಲ್ಯಾಂಡ್ಲಾರ್ಡ್’ ಟೀಸರ್ನಲ್ಲಿ ವಿಜಯ್ ಮಾಸ್ ಅವತಾರ; ಜನವರಿ 23ಕ್ಕೆ ರಿಲೀಸ್
'ಲ್ಯಾಂಡ್ಲಾರ್ಡ್' ಸಿನಿಮಾದಲ್ಲಿ ದುನಿಯಾ ವಿಜಯ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಅವರ ಪುತ್ರಿ ರಿತನ್ಯ ಹಾಗೂ ರಚಿತಾ ರಾಮ್ ಕೂಡ ನಟಿಸಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾದ ಟೀಸರ್ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರ ಜನವರಿ 23, 2025 ರಂದು ತೆರೆಗೆ ಬರಲಿದೆ.

ನಟ ವಿಜಯ್ ಕುಮಾರ್ (Vijay Kumar) ಅವರು ಮಾಸ್ ಸಿನಿಮಾಗಳ ಮೂಲಕ ಎಲ್ಲರಿಂದ ಭೇಷ್ ಎನಿಸಿಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಈಗ ಅವರು ‘ಲ್ಯಾಂಡ್ಲಾರ್ಡ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮಗಳು ರಿತನ್ಯ ಕೂಡ ನಟಿಸುತ್ತಿರುವುದು ವಿಶೇಷ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂದು ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡರು.
‘ಲ್ಯಾಂಡ್ಲಾರ್ಡ್’ ಸಿನಿಮಾನ ‘ಸಾರಥಿ ಫಿಲ್ಮ್ಸ್’ ಬ್ಯಾನರ್ ಮೂಲಕ ಹೇಮಂತ್ ಗೌಡ ಕೆ.ಎಸ್. ಮತ್ತು ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ‘ಲ್ಯಾಂಡ್ಲಾರ್ಡ್’ ಸಿನಿಮಾನ ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್ ಕುಮಾರ್ ಅಭಿಮಾನಿಗಳು ಚಿತ್ರದ ರಿಲೀಸ್ಗಾಗಿ ಕಾದಿದ್ದಾರೆ.
ಕನ್ನಡ ರಾಜ್ಯೋತ್ಸವದ ದಿನವೇ ವಿಜಯ್ ಕುಮಾರ್ ಫ್ಯಾನ್ಸ್ಗೆ ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ಈ ಟೀಸರ್ ಸಖತ್ ಮಾಸ್ ಆಗಿದೆ. ಈ ಸಿನಿಮಾ ಮುಂದಿನ ವರ್ಷ ಜನವರಿ 23ರಂದು ರಿಲೀಸ್ ಆಗಲಿದೆ. ಟೀಸರ್ನಲ್ಲಿ ಈ ವಿಷಯವನ್ನು ತಿಳಿಸಲಿದೆ. ‘ಆನಂದ್ ಆಡಿಯೋ’ ಕಂಪನಿ ಇದರ ಆಡಿಯೋ ಹಕ್ಕುಗಳನ್ನು ಪಡೆದಿವೆ.
ಲ್ಯಾಂಡ್ಲಾರ್ಡ್ ಟೀಸರ್
ದುನಿಯಾ ವಿಜಯ್ ಅವರು ಈ ಟೀಸರ್ನಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಈ ಟೀಸರ್ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಅವಿನಾಶ್ ಅವರು ಕೂಡ ಮಾಸ್ ಅವತಾರದಲ್ಲಿ ಇದ್ದಾರೆ. ಮಿತ್ರ ಅವರು ಡಿಫರೆಂಟ್ ಲುಕ್ನಲ್ಲಿ ಇದ್ದಾರೆ. ‘ಆಳಿದವರ ಎದುರು, ಅಳಿಯದೇ ಉಳಿದವ ಮಾರಿಯಾದನು. ತಲೆ ಎತ್ತಿ ಚರಿತ್ರೆ ಆದನು’. ‘ತಲೆ ಬಗ್ಸೋಕೆ, ತಲೆ ಬಾಕ್ಸೋಕೆ ವ್ಯತ್ಯಾಸ ಇದೆ’ ಎಂಬ ಡೈಲಾಗ್ ಗಮನ ಸೆಳೆದಿದೆ.
ಇದನ್ನೂ ಓದಿ: ‘ನನ್ನನ್ನು ಇನ್ನು ಲ್ಯಾಂಡ್ಲಾರ್ಡ್ ಮಗಳು ಅಂತಾರೇನೋ’; ರಿತನ್ಯ ವಿಜಯ್
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ವಿಜಯ್ ಕುಮಾರ್ ಅವರ ಹಿರಿಯ ಮಗಳು ರಿತನ್ಯ ನಟಿಸುತ್ತಿದ್ದಾರೆ. ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಪಾತ್ರವರ್ಗದ ಬಗ್ಗೆ ತಂಡ ಮಾಹಿತಿ ಬಿಟ್ಟುಕೊಟ್ಟಿದೆ. ಜನವರಿ 26ರ ರಜೆ ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







