ದೆಹಲಿ: ಪ್ರವಾದಿ ಮೊಹಮ್ಮದ್ (Prophet Muhammad) ಬಗ್ಗೆ ಬಿಜೆಪಿಯ(BJP) ಮಾಜಿ ವಕ್ತಾರರು ನೀಡಿದ ಹೇಳಿಕೆ ವಿವಾದದ ನಡುವೆ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು “ನಿಸ್ಸಂದಿಗ್ಧವಾಗಿ ಖಂಡಿಸಬೇಕು” ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಬುಧವಾರ ಹೇಳಿದ್ದಾರೆ. ಧಾರ್ಮಿಕ ಭಾವನೆಗಳ ಮೇಲಿನ ಗೌರವ ಮತ್ತು ಅದಕ್ಕಾಗಿ ಬೆದರಿಕೆಯೊಡ್ಡುತ್ತಿರುವುದರ ನಡುವಿನ ವೈರುಧ್ಯವನ್ನು ಒತ್ತಿಹೇಳಿದ ಚತುರ್ವೇದಿ, ಯಾವುದೇ ಧರ್ಮವು ಕೆಲವೇ ಕೆಲವು ಮಾತುಗಳಿಂದ ಅವರ ನಂಬಿಕೆಯನ್ನು ಕೆಡಿಸುವಷ್ಟು ದುರ್ಬಲವಾಗಿರುವುದಿಲ್ಲ ಎಂದಿದ್ದಾರೆ. ಅಲ್ ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಂದ ಬೆದರಿಕೆಗಳನ್ನು ಈ ಮಧ್ಯಪ್ರಾಚ್ಯ ರಾಷ್ಟ್ರಗಳು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಒಂದು ವಿಷಯ, ಅದರ ಆಧಾರದ ಮೇಲೆ ಬೆದರಿಕೆಗಳನ್ನು ನೀಡುವುದು ಇನ್ನೊಂದು. ಕೆಲವರ ಮಾತುಗಳು ಅವರ ನಂಬಿಕೆಯನ್ನು ಕೆಡಿಸಬಹುದು ಎಂದು ಹೇಳುವಷ್ಟು ಯಾವುದೇ ಧರ್ಮವು ತುಂಬಾ ದುರ್ಬಲವಾಗಿಲ್ಲ ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ
ಉಪಖಂಡದಲ್ಲಿನ ಭಯೋತ್ಪಾದಕ ಸಂಘಟನೆ ಅಲ್-ಖೈದಾ (AQIS) ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರವನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ನಮ್ಮ ಪ್ರವಾದಿಯ ಘನತೆಗಾಗಿ ಹೋರಾಡಿ ಎಂದು ಪತ್ರದಲ್ಲಿ ಬರೆದಿದೆ. ಅಲ್ ಖೈದಾ ಅಂಗಸಂಸ್ಥೆಯು “ಕೇಸರಿ ಭಯೋತ್ಪಾದಕರು ಈಗ ದೆಹಲಿ ಮತ್ತು ಬಾಂಬೆ ಮತ್ತು ಯುಪಿ ಮತ್ತು ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು” ಎಂದು ಎಚ್ಚರಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Threats from Islamist terror groups such as Al Qaeda should be unequivocally denounced by these Middle East nations as well. Respecting religious sentiments is one thing, issuing threats based on it another. No religion is so fragile that words of a few can bring down their faith
— Priyanka Chaturvedi?? (@priyankac19) June 8, 2022
AQIS ಎಂದರೇನು?
ಯುನೈಟೆಡ್ ಸ್ಟೇಟ್ಸ್- ಮತ್ತು ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದ್ದು, AQIS ಅಲ್-ಖೈದಾದ ಹೊಸ ಅಂಗಸಂಸ್ಥೆಗಳಲ್ಲಿ ಒಂದಾಗಿದೆ, ಇದು 2014 ರಲ್ಲಿ ರೂಪುಗೊಂಡಿತು. ಇದನ್ನು ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಭಯೋತ್ಪಾದಕ ಗುಂಪಿನ ಪ್ರಭಾವವನ್ನು ವಿಸ್ತರಿಸಲು ಇದನ್ನು ಸ್ಥಾಪಿಸಿದರು. ಪ್ರವಾದಿ ಮುಹಮ್ಮದ್ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರತಿಭಟನೆಯೊಂದಿಗೆ ವಿವಾದ ಪ್ರಾರಂಭವಾಯಿತು.ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದ ಉಲ್ಭಣವಾಗುತ್ತಿದ್ದಂತೆ ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರತಿಭಟನೆ ಹಾದಿ ಹಿಡಿದು, ಭಾರತದ ವಿರುದ್ಧ ನಿಂತಿವೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಈ ಪತ್ರವನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಏಜೆನ್ಸಿಗಳು ಪ್ರಯತ್ನಿಸುತ್ತಿವೆ. AQIS, ಅಲ್-ಖೈದಾದ ಅಂಗಸಂಸ್ಥೆ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪು, ಭಾರತದ ಮೇಲೆ ಕಣ್ಣಿಟ್ಟಿದೆ.
ಯುಎನ್ ತನ್ನ ಇತ್ತೀಚಿನ ವರದಿಯಲ್ಲಿ ಸಂಘಟನೆಯು ತನ್ನ ನಿಯತಕಾಲಿಕದ ಹೆಸರನ್ನು ನವಾ-ಎ-ಅಫ್ಘಾನ್ ಜಿಹಾದ್ ನಿಂದ . ನವ- ಇ-ಘಜ್ವಾ-ಎ-ಹಿಂದ್ ಗೆ ಬದಲಾಯಿಸಿದೆ. ಈ ಸಂದರ್ಭದಲ್ಲಿ ಈ ಭಯೋತ್ಪಾದಕ ಗುಂಪು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ