ರವೀಂದ್ರನಾಥ ಟ್ಯಾಗೋರ್ ಕೈಬರಹದ ರಾಷ್ಟ್ರಗೀತೆಯ ಅನುವಾದ ಪಠ್ಯ ಹಂಚಿಕೊಂಡ ನೊಬೆಲ್ ಸಮಿತಿ

"'ಜನ ಗಣ ಮನ' ಎಂಬುದು ಭಾರತದ ರಾಷ್ಟ್ರಗೀತೆಯಾಗಿದ್ದು, ಮೂಲತಃ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ. ಚಿತ್ರ: ಟಾಗೋರ್ ಅವರ ಜನ ಗಣ ಮನದ ಇಂಗ್ಲಿಷ್ ಅನುವಾದ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ರವೀಂದ್ರನಾಥ ಟ್ಯಾಗೋರ್ ಕೈಬರಹದ ರಾಷ್ಟ್ರಗೀತೆಯ ಅನುವಾದ ಪಠ್ಯ ಹಂಚಿಕೊಂಡ ನೊಬೆಲ್ ಸಮಿತಿ
ರವೀಂದ್ರನಾಥ ಟ್ಯಾಗೋರ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 15, 2024 | 8:47 PM

ದೆಹಲಿ ಆಗಸ್ಟ್ 15: ಭಾರತವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು (78th Independence Day) ಆಚರಿಸುತ್ತಿರುವಾಗ, ನೊಬೆಲ್ ಸಮಿತಿಯು ದೇಶದ ರಾಷ್ಟ್ರಗೀತೆಯನ್ನು ರಚಿಸಿದ ವ್ಯಕ್ತಿಯನ್ನು ನೆನಪಿಸಿಕೊಂಡಿದೆ. ನೊಬೆಲ್ ಪ್ರಶಸ್ತಿ ಹ್ಯಾಂಡಲ್, ತಮ್ಮ ಎಕ್ಸ್ ಪೋಸ್ಟ್ ನಲ್ಲಿ ರವೀಂದ್ರನಾಥ ಟ್ಯಾಗೋರ್ (Rabindranath Tagore) ಅವರೇ ಬರೆದ ‘ಜನ ಗಣ ಮನ’ದ ಇಂಗ್ಲಿಷ್ ಅನುವಾದವನ್ನು ಹಂಚಿಕೊಂಡಿದೆ. ಈ ಟಿಪ್ಪಣಿಯು ಖ್ಯಾತ ಬಂಗಾಳಿ ಕವಿಮತ್ತು ಸಮಾಜ ಸುಧಾರಕ ಟ್ಯಾಗೋರ್ ಅವರ ಪ್ರತಿಭೆಯನ್ನು ತೋರಿಸಿತ್ತದೆ. ರಬೀಂದ್ರರ ಪದಪ್ರಯೋಗದಲ್ಲಿ ಅವರಪಾಂಡಿತ್ಯವನ್ನು ಕಾಣಬಹುದು.

“‘ಜನ ಗಣ ಮನ’ ಎಂಬುದು ಭಾರತದ ರಾಷ್ಟ್ರಗೀತೆಯಾಗಿದ್ದು, ಮೂಲತಃ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ. ಚಿತ್ರ: ಟಾಗೋರ್ ಅವರ ಜನ ಗಣ ಮನದ ಇಂಗ್ಲಿಷ್ ಅನುವಾದ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಮೂಲತಃ ಡಿಸೆಂಬರ್ 1911 ರಲ್ಲಿ ಬಂಗಾಳಿ ಭಾಷೆಯಲ್ಲಿ ‘ಭಾರತೋ ಭಾಗ್ಯೋ ಬಿಧಾತ’ ಎಂದು ರಚಿಸಲಾಯಿತು. ಹಾಡಿನ ಮೊದಲ ಚರಣವನ್ನು ಜನವರಿ 1950 ರಲ್ಲಿ ಭಾರತೀಯ ಸಂವಿಧಾನವು ರಾಷ್ಟ್ರಗೀತೆಯಾಗಿ ಅಂಗೀಕರಿಸಿತು.

ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಕೈಬರಹದ ಅನುವಾದದಲ್ಲಿ ನೋಡಿದಂತೆ ‘ಭಾರತೋ ಭಾಗ್ಯೋ ಬಿಧಾತ’ ಎಂಬ ಇಂಗ್ಲಿಷ್ ಹೆಸರು ‘ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ’. ಇದೇ ವೇಳೆ ‘ಜನ ಗಣ ಮನ’ ಅನ್ನು ‘ನೀನು ಎಲ್ಲ ಜನರ ಮನಸ್ಸಿನ ಅಧಿಪತಿ’ ಎಂದು ಅನುವಾದಿಸಲಾಯಿತು.

ಇದನ್ನೂ ಓದಿ: Rahul Gandhi: ಸ್ವಾತಂತ್ರ್ಯವೇ ನಮ್ಮ ದೊಡ್ಡ ರಕ್ಷಣಾ ಕವಚ; ರಾಹುಲ್ ಗಾಂಧಿ

ಈ ಟ್ವೀಟ್ ಸುಮಾರು 179,000 ಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.. ಇದನ್ನು 1300 ಬಾರಿ ರೀಟ್ವೀಟ್ ಮಾಡಲಾಗಿದೆ. ರವೀಂದ್ರನಾಥ ಟ್ಯಾಗೋರ್ ಅವರು ಕವಿ, ಗೀತರಚನೆಕಾರ, ಬರಹಗಾರ, ವರ್ಣಚಿತ್ರಕಾರ, ನಾಟಕಕಾರ, ಸಂಯೋಜಕ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ, ಅವರು ಬಂಗಾಳಿ ಸಾಹಿತ್ಯ ಮತ್ತು ಸಂಗೀತವನ್ನು ಮರುರೂಪಿಸಿದರು. ಅವರಿಗೆ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಮಹತ್ತರ ಪ್ರಶಸ್ತಿಯನ್ನು ಗೆದ್ದ ಯುರೋಪಿಯನ್ ಅಲ್ಲದ ಮೊದಲ ಗೀತರಚನೆಕಾರರಾಗಿದ್ದಾರೆ ಟ್ಯಾಗೋರ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ