AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವದ್ಗೀತೆಯಲ್ಲೂ ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್ ಬೋಧನೆ ಮಾಡಿದ್ದ; ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ನೀಡಿದ ಸ್ಪಷ್ಟನೆಯೇನು?

ಜಿಹಾದ್ ಹಿಂದೂ ಮತ್ತು ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಾತ್ರ ಅಸ್ತಿತ್ವದಲ್ಲಿಲ್ಲ. ಇದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥದಲ್ಲಿಯೂ ಇದೆ ಎಂದು ಶಿವರಾಜ್ ಪಾಟೀಲ್ ಆರೋಪಿಸಿದ್ದರು.

ಭಗವದ್ಗೀತೆಯಲ್ಲೂ ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್ ಬೋಧನೆ ಮಾಡಿದ್ದ; ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ನೀಡಿದ ಸ್ಪಷ್ಟನೆಯೇನು?
ಶಿವರಾಜ್ ಪಾಟೀಲ್
TV9 Web
| Updated By: ಸುಷ್ಮಾ ಚಕ್ರೆ|

Updated on:Oct 21, 2022 | 12:08 PM

Share

ನವದೆಹಲಿ: ಕುರಾನ್​ನಲ್ಲಿ ಮಾತ್ರವಲ್ಲ, ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯಲ್ಲೂ (Bhagavad Gita) ಶ್ರೀಕೃಷ್ಣ ಜಿಹಾದ್ ಬಗ್ಗೆ ಉಲ್ಲೇಖಿಸಿದ್ದ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಸರ್ಕಾರದ ಮಾಜಿ ಸಚಿವ ಶಿವರಾಜ್ ಪಾಟೀಲ್ (Shivaraj Patil) ವಿವಾದಕ್ಕೀಡಾಗಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದಾರೆ. ಖಂಡನೆ ಬಳಿಕ ಎಚ್ಚೆತ್ತ ಕಾಂಗ್ರೆಸ್​​ ನಾಯಕ ಶಿವರಾಜ್ ಪಾಟೀಲ್, ನಾನು ಶ್ರೀಕೃಷ್ಣನ ಬಗ್ಗೆ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ದುರ್ಯೋಧನ ಜಿಹಾದ್ (Jihad) ಮಾದರಿಯ​ ​ನೀತಿಯನ್ನು ಅನುಸರಿಸಿದ್ದ ಎಂದು ನಾನು ಹೇಳಿದ್ದೆ. ಆ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಶಿವರಾಜ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಈ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ‘ಜಿಹಾದ್’ ಪರಿಕಲ್ಪನೆಯು ಭಗವದ್ಗೀತೆಯ ಒಂದು ಭಾಗವಾಗಿದೆ. ಅದನ್ನು ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧನೆ ಮಾಡಿದ್ದ ಎಂದು ಹೇಳಿದ್ದರು. ಈ ಬಗ್ಗೆ ಇಂದು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಜಿಹಾದ್ ಎಂದು ನೀವೆಲ್ಲ ಏನನ್ನು ಕರೆಯುತ್ತಿದ್ದೀರೋ ಅದು ಸತ್ಯವಲ್ಲ. ಹಾಗಾದರೆ, ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಬೋಧಿಸಿದ್ದನ್ನು ಜಿಹಾದ್ ಎಂದು ಕರೆಯಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004-2008ರ ನಡುವೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಶಿವರಾಜ್ ಪಾಟೀಲ್, ಕಾಂಗ್ರೆಸ್ ನಾಯಕಿ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆಯ ಬಿಡುಗಡೆಯ ಸಂದರ್ಭದಲ್ಲಿ ಗುರುವಾರ ದೆಹಲಿಯಲ್ಲಿ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇಸ್ಲಾಂ ಧರ್ಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ಪಷ್ಟ ಮನಸ್ಸಿನಿಂದ ಕೈಗೊಂಡ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಮಾತ್ರ ಜಿಹಾದ್ ಹೊರಹೊಮ್ಮುತ್ತದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಮುಸ್ಲಿಮರು ಪೂಜಿಸುತ್ತಿದ್ದ ದೇವರಕಟ್ಟೆಗೆ ಬೆಂಕಿ, ಕುರಾನ್, ಪೂಜಾ ಸಾಮಗ್ರಿಗಳಿಗೆ ಹಾನಿ

ಜಿಹಾದ್ ಪರಿಕಲ್ಪನೆಯು ಕುರಾನ್‌ಗೆ ಸೀಮಿತವಾಗಿರದೆ ಮಹಾಭಾರತದ ಭಾಗವಾದ ಭಗವದ್ಗೀತೆಯಲ್ಲೂ ಇದೆ. ಕುರುಕ್ಷೇತ್ರದಲ್ಲಿ ಪಾಂಡವರು ಮತ್ತು ಕೌರವರ ನಡುವಿನ ಧರ್ಮಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಬೋಧಿಸಿದ್ದ. ಭಗವಾನ್ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಜಿಹಾದ್ ಬಗ್ಗೆ ಕಲಿಸಿದನು. ಜಿಹಾದ್ ಹಿಂದೂ ಮತ್ತು ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಾತ್ರ ಅಸ್ತಿತ್ವದಲ್ಲಿಲ್ಲ. ಇದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥದಲ್ಲಿಯೂ ಇದೆ ಎಂದು ಶಿವರಾಜ್ ಪಾಟೀಲ್ ಆರೋಪಿಸಿದ್ದರು.

ಶಿವರಾಜ್ ಪಾಟೀಲ್ ಅವರು 2004ರಿಂದ 2008ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. 1991ರಿಂದ 1996ರವರೆಗೆ ಲೋಕಸಭೆಯ 10ನೇ ಸ್ಪೀಕರ್ ಆಗಿದ್ದರು. ಅವರು ಪಂಜಾಬ್ ರಾಜ್ಯದ ರಾಜ್ಯಪಾಲರೂ ಆಗಿದ್ದರು. 2010ರಿಂದ 2015ರವರೆಗೆ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಗಾರರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Fri, 21 October 22