AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಪಬ್​, ಬಾರ್​ಗಳಲ್ಲಿ ಮದ್ಯ ಸೇವಿಸಲು ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

ಪುಣೆಯಲ್ಲಿ ಸಂಭವಿಸಿದ ಪೋರ್ಷೆ ಕಾರು ಅಪಘಾತದ ಬಳಿಕ ಎಚ್ಚೆತ್ತಿರುವ ಮಹಾರಾಷ್ಟ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನುಮುಂದೆ ಬಾರ್​ ಹಾಗೂ ಪಬ್​ಗಳಲ್ಲಿ ಇನ್ನುಮುಂದೆ ಸರ್ಕಾರಿ ಗುರುತಿನ ಚೀಟಿ ಕಡ್ಡಾಯ ಎಂದು ಹೇಳಲಾಗಿದೆ.

ಇನ್ಮುಂದೆ ಪಬ್​, ಬಾರ್​ಗಳಲ್ಲಿ ಮದ್ಯ ಸೇವಿಸಲು ಸರ್ಕಾರಿ ಗುರುತಿನ ಚೀಟಿ ಕಡ್ಡಾಯ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ನಯನಾ ರಾಜೀವ್
|

Updated on:Jun 17, 2024 | 12:47 PM

Share

ಇನ್ನಮುಂದೆ ಪಬ್​ ಹಾಗೂ ಬಾರ್​ಗಳಲ್ಲಿ ಮದ್ಯಪಾನ ಮಾಡಲು ಸರ್ಕಾರಿ ಗುರುತಿನ ಚೀಟಿ ಇರಲೇಬೇಕೆಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮದ್ಯ ಪ್ರಿಯರಿಗಾಗಿ ಸರಕಾರ ಈಗ ನಿಯಮ ರೂಪಿಸಿದೆ. ಸರ್ಕಾರದಂತೆಯೇ ಪಬ್, ಬಾರ್ ಮಾಲೀಕರೂ ಕೂಡ ಮುತುವರ್ಜಿ ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪುಣೆ ನಗರದಲ್ಲಿ ನಡೆದ ಪೋರ್ಷೆ ಕಾರು ಅಪಘಾತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ಆಡಳಿತದ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪಬ್ ಮತ್ತು ಬಾರ್ ನಿರ್ವಾಹಕರು ಇದೀಗ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿವೆ.

ಇದರಿಂದಾಗಿ ಮುಂಬೈ ಮತ್ತು ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ ಸೇವಿಸುವವರಿಗೆ ವಯಸ್ಸಿನ ಪ್ರಮಾಣ ಪತ್ರ ಅಗತ್ಯವಾಗಲಿದೆ. ಪುಣೆ, ಮುಂಬೈ, ನಾಗ್ಪುರದಂತಹ ದೊಡ್ಡ ನಗರಗಳಲ್ಲಿ ಅಪ್ರಾಪ್ತ ವಯಸ್ಕರು ಮದ್ಯಪಾನ ಮಾಡಿ ಅತಿವೇಗದಲ್ಲಿ ವಾಹನ ಚಲಾಯಿಸುವ ಅನೇಕ ಪ್ರಕರಣಗಳಿವೆ. ಹಾಗಾಗಿ ಈಗ ಮುಂಬೈ ಪುಣೆಯಲ್ಲಿ ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಸೇವಿಸುವ ಮುನ್ನ ವಯಸ್ಸಿನ ಪ್ರಮಾಣ ಪತ್ರವನ್ನು ಪರಿಶೀಲಿಸಲಾಗುವುದು.

ಮತ್ತಷ್ಟು ಓದಿ: ಪುಣೆ ಪೋರ್ಷೆ ಕಾರು ಅಪಘಾತ: ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನೆಲಸಮ

ಇದಕ್ಕಾಗಿ ಸರಕಾರಿ ಗುರುತಿನ ಚೀಟಿಯಲ್ಲಿ ದಾಖಲಾಗಿರುವ ವಯೋಮಿತಿಯನ್ನು ನೋಡಲಾಗುತ್ತದೆ. ಅಪ್ರಾಪ್ತ ವಯಸ್ಕರು ಬಾರ್ ಮತ್ತು ಪಬ್‌ಗಳಿಗೆ ಪ್ರವೇಶಿಸುವುದನ್ನು ತಡೆಯಲು, ಪ್ರವೇಶದ್ವಾರದಲ್ಲಿಯೇ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ. ವೈನ್ ಮತ್ತು ಬಿಯರ್ ಕುಡಿಯಲು 21 ವರ್ಷ ಮತ್ತು ಮದ್ಯ ಸೇವಿಸಲು 25 ವರ್ಷ ವಯಸ್ಸು ಕಡ್ಡಾಯವಾಗಿರುತ್ತದೆ.

ಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಂದೆ ವಿಶಾಲ್ ಅಗರ್ವಾಲ್‌ಗೆ ಸಂಕಷ್ಟ ಹೆಚ್ಚಿದೆ. ವಿಶಾಲ್ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:46 pm, Mon, 17 June 24