ಪಂಜಾಬ್, ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಘೋಷಣೆ
ಭಾರತೀಯ ಚುನಾವಣಾ ಆಯೋಗವು ಜುಲೈ 10ರಂದು ನಡೆಯುವ 7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕಗಳನ್ನು ಘೋಷಿಸಿದೆ. ಬಿಹಾರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದು ಕ್ಷೇತ್ರ, ಪಶ್ಚಿಮ ಬಂಗಾಳದ 4 ಕ್ಷೇತ್ರಗಳು ಮತ್ತು ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ತಲಾ 2 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.
ನವದೆಹಲಿ: ಬಿಹಾರ, ತಮಿಳುನಾಡು (Tamil Nadu), ಮಧ್ಯಪ್ರದೇಶ (Madhya Pradesh) ಮತ್ತು ಪಂಜಾಬ್‌ನಲ್ಲಿ (Punjab) ತಲಾ 1 ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮವಾಗಿ 4, 2 ಮತ್ತು 3 ಸ್ಥಾನಗಳಲ್ಲಿ ಉಪಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು (ಜೂನ್ 17) ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗೆ ಮುಂಬರುವ ಉಪಚುನಾವಣೆಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜುಲೈ 10ರಂದು ವಿಧಾನಸಭಾ ಉಪಚುನಾವಣೆ ನಡೆಯಲಿದೆ.
ಬಿಜೆಪಿ ಜಲಂಧರ್ ಪಶ್ಚಿಮ ಕ್ಷೇತ್ರದಿಂದ ಶೀತಲ್ ಅಂಗುರಾಲ್ ಅವರನ್ನು ಕಣಕ್ಕಿಳಿಸಿದೆ. ಪಶ್ಚಿಮ ಬಂಗಾಳದ 4 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಮಾನಸ್ ಕುಮಾರ್ ಘೋಷ್ (ರಾಯಗಂಜ್), ಮನೋಜ್ ಕುಮಾರ್ ಬಿಸ್ವಾಸ್ (ರಣಘಾಟ್ ದಕ್ಷಿಣ), ಬಿನಯ್ ಕುಮಾರ್ ಬಿಸ್ವಾಸ್ (ಬಗ್ಡಾ) ಮತ್ತು ಕಲ್ಯಾಣ್ ಚೌಬೆ ಭಟ್ಟಾಚಾರ್ಯ (ಮಾಣಿಕ್ತಾಲಾ) ಅವರನ್ನು ಕಣಕ್ಕಿಳಿಸಿದೆ.
ವಿಧಾನಸಭಾ ಉಪಚುನಾವಣೆಗೆ ಜುಲೈ 10ರಂದು ಮತದಾನ:
ಜೂನ್ 10ರಂದು ಭಾರತದ ಚುನಾವಣಾ ಆಯೋಗವು ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ದೊಡ್ಡ ಟ್ವಿಸ್ಟ್; 6 ಇಂಡಿಯ ಬ್ಲಾಕ್ ಸಂಸದರಿಗೆ ಕಾನೂನು ಕಂಟಕ!
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಚುನಾವಣೆ ನಡೆಯಲಿರುವ 13 ವಿಧಾನಸಭಾ ಕ್ಷೇತ್ರಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ಜೂನ್ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಜೂನ್ 14ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ನಾಮಪತ್ರಗಳನ್ನು ಜೂನ್ 24ರಂದು ಪರಿಶೀಲಿಸಲಾಗುವುದು ಮತ್ತು ನಾಮಪತ್ರ ಹಿಂಪಡೆಯಲು ಜೂನ್ 26 ಕೊನೆಯ ದಿನಾಂಕವಾಗಿದೆ.
ಇದಲ್ಲದೆ, ಜುಲೈ 10ರಂದು ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜುಲೈ 13ರಂದು ಮತಗಳ ಎಣಿಕೆಯನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ತಯಾರಿ ಶುರು ಮಾಡಿದ ಕಾಂಗ್ರೆಸ್: ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ
ಉಪಚುನಾವಣೆ ನಡೆಯಲಿರುವ ವಿಧಾನಸಭಾ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳದ 4 ಸ್ಥಾನಗಳು, ಹಿಮಾಚಲ ಪ್ರದೇಶದ 3 ಸ್ಥಾನಗಳು ಮತ್ತು ಉತ್ತರಾಖಂಡದ 2 ಸ್ಥಾನಗಳು ಸೇರಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ರುಪೌಲಿ (ಬಿಹಾರ), ರಾಯ್‌ಗಂಜ್ (ಪಶ್ಚಿಮ ಬಂಗಾಳ), ರಣಘಾಟ್ ದಕ್ಷಿಣ (ಪಶ್ಚಿಮ ಬಂಗಾಳ), ಬಗ್ಡಾ (ಪಶ್ಚಿಮ ಬಂಗಾಳ), ಮಾಣಿಕ್ತಾಲಾ (ಪಶ್ಚಿಮ ಬಂಗಾಳ), ವಿಕ್ರವಂಡಿ (ತಮಿಳುನಾಡು), ಅಮರವಾರ (ಮಧ್ಯ ಪ್ರದೇಶ), ಬದರಿನಾಥ್ (ಉತ್ತರಾಖಂಡ), ಮಂಗಳೂರ್ (ಉತ್ತರಾಖಂಡ), ಜಲಂಧರ್ ಪಶ್ಚಿಮ (ಪಂಜಾಬ್), ಡೆಹ್ರಾ (ಹಿಮಾಚಲ ಪ್ರದೇಶ), ಹಮೀರ್‌ಪುರ (ಹಿಮಾಚಲ ಪ್ರದೇಶ), ಮತ್ತು ನಲಗಢ (ಹಿಮಾಚಲ ಪ್ರದೇಶ) 13 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಜುಲೈ 10ರಂದು ಉಪಚುನಾವಣೆ ನಡೆಯಲಿದೆ. ಜುಲೈ 13ರಂದು ಮತ ಎಣಿಕೆ ನಡೆಯಲಿದೆ. ಜುಲೈ 15ಕ್ಕೂ ಮೊದಲು ಉಪಚುನಾವಣೆ ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ