ಎನ್ಎಸ್ಜಿ ಕಮಾಂಡೋಗಳು ಅಂದ್ರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ದೃಢವಾಗಿರುವವರು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಕೊರೊನಾ ಮಾರಿ ಅಂತಹವರನ್ನೂ ಬಿಟ್ಟಿಲ್ಲ. ಮೊದಲ ಬಾರಿಗೆ ಎನ್ಎಸ್ಜಿ ಕಮಾಂಡೋ ಒಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ. ಅದೇನು ದುರಾದೃಷ್ಟವೋ ಅಥವಾ ದೇಶಕ್ಕೇ ಅಂಥಾ ಗತಿ ಬಂದಿದೆಯೋ.. ಎನ್ಎಸ್ಜಿ ಕಮಾಂಡೋಗೂ ಸಕಾಲಕ್ಕೆ ವೆಂಟಿಲೇಟರ್ ಆಂಬುಲೆನ್ಸ್ ಸಿಗಲಿಲ್ಲ. ಹಾಗಾಗಿ ಅವರು ಕೊನೆಯುಸಿರೆಳೆದಿದ್ದಾರೆ.
ಗ್ರೂಪ್ ಕಮಾಂಡರ್ ಆಗಿದ್ದ ಬಿ ಕೆ ಝಾ (54 ವರ್ಷ) ಅವರಿಗೆ ಏಪ್ರಿಲ್ 19ರಂದು ಕೊರೊನಾ ಸೋಂಕು ತಗುಲಿತ್ತು. ಗ್ರೇಟರ್ ನೋಯ್ಡಾದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಆಸ್ಪತ್ರೆಯಲ್ಲಿ (CAPF Hospital) ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ ಅಲ್ಲಿ ಅವರಿಗೆ ಎರಡು ಕಾರ್ಯನಿರ್ವಹಿಸದ ವೆಂಟಿಲೇಟರ್ಗಳು ಸ್ವಾಗತ ಕೋರಿದ್ದವು. ಅಲ್ಲಿಂದ ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಜೀವರಕ್ಷಕ ಆಂಬುಲೆನ್ಸ್ ಸಹ ಸಿಗಲಿಲ್ಲ.
ಕೊನೆಗೆ ಅದುಹೇಗೋ ವೆಂಟಿಲೇರ್ ಪ್ರಾಪ್ತಿಯಾಗಿತ್ತು. ಆದರೆ ಆ ವೇಳೆಗೆ ಗೋಲ್ಡನ್ ಅವರ್ ಅಂದ್ರೆ ಅಮೂಲ್ಯ ಸಮಯ ಕಳೆದಿತ್ತು. ಹೃದಯ ಸ್ತಂಭನದಿಂದಾಗಿ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಭಯೋತ್ಪಾದಕರನ್ನು ಸದೆಬಡಿಯುವ ಅತ್ಯುನ್ನತ ಸಶಸ್ತ್ರ ಪಡೆಯಾದ National Security Guard (NSG) ಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ. ಅಂದಹಾಗೆ NSG ಪಡೆಯಲ್ಲಿ ಇದುವರೆಗೂ 4,00ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 60 ಪ್ರಕರಣಗಳು ಸಕ್ರಿಯವಾಗಿವೆ.
ಬಿಹಾರ ಮೂಲದ ಬಿ ಕೆ ಝಾ ಅವರು 1993ರಲ್ಲಿ ಗಡಿ ಭದ್ರತಾ ಪಡೆಗೆ (Border Security Force -BSF) ಆಯ್ಕೆಗೊಂಡಿದ್ದರು. 2018ರಲ್ಲಿ ಡೆಪ್ಯುಟೇಶನ್ ಮೇಲೆ NSG ಪಡೆ ಸೇರಿಕೊಂಡಿದ್ದರು. ಈ ಬಗ್ಗೆ NSG ಪಡೆ ಟ್ವೀಟ್ ಮಾಡಿದ್ದು, ಹಿರಿಯ ಯೋಧನ ಸಾವಿಗೆ ಕಂಬನಿ ಮಿಡಿದಿದೆ.
DG and all ranks of NSG mourn his death and remember his distinguished service to the Nation.May Almighty rest his noble soul in eternal peace and give strength to his family to bear the loss.@BSF_India @PIBHomeAffairs @crpfindia @CISFHQrs @DGSSB @official_dgar
— National Security Guard (@nsgblackcats) May 5, 2021
(NSG commando BK Jha died of Covid 19 precious time lost in arranging ventilator ambulance)
ಇದನ್ನೂ ಓದಿ:
ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ
Published On - 9:50 am, Thu, 6 May 21