Petrol Price Today: ಮೇ ತಿಂಗಳಿನಲ್ಲಿ ಸತತವಾಗಿ 3ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
Petrol Diesel Price in Bangalore: ಇಂದು ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.01 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 86.31 ರೂಪಾಯಿ ಆಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 30 ಪೈಸೆ ಏರಿಕೆಯಾಗಿದೆ.
ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 3ನೇ ದಿನ ಏರಿಕೆಯಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 30 ಪೈಸೆ ಏರಿಕೆಯಾಗಿದೆ. ಅದಾದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.99 ರೂಪಾಯಿಯಷ್ಟಾಗಿದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 81.42ರೂಪಾಯಿಯಷ್ಟಾಗಿದೆ.
ನಿನ್ನೆ ಬುಧವಾರವೂ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 22 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 39 ಪೈಸೆ ಏರಿಕೆಯಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.74 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 81.12 ರೂಪಾಯಿ ಆಗಿತ್ತು. ಇಂದು ಗುರವಾರವೂ ದರ ಏರಿಕೆಯ ನಂತರ ಪ್ರತಿ ಲೀಟರ್ ಪೆಟ್ರೋಲ್ ದರ 90.99 ರೂಪಾಯಿಗೆ ಏರಿಕೆಯಾಗಿದೆ.
ದರ ಏರಿಕೆಯ ನಂತರದಲ್ಲಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಿದೆ ಎಂಬುದನ್ನು ಗಮನಿಸೋಣ. ಮುಂಬೈನಲ್ಲಿ ದರ ಏರಿಕೆಯ ಬಳಿಕ ನಿನ್ನೆ ಪ್ರತಿ ಲೀಟರ್ ಪೆಟ್ರೋಲ್ ದರ 97.20 ರೂಪಾಯಿ ಇತ್ತು. ಇಂದೂ ತೈಲ ದರ ಏರಿಕೆಯ ನಂತರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.34 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ ನಿನ್ನೆ 88.19 ರೂಪಾಯಿ ಇದ್ದು ಇಂದು 88.49 ರೂಪಾಯಿಗೆ ಏರಿಕೆಯಾಗಿದೆ.
Price of petrol & diesel in #Delhi at Rs 90.99 per litre and Rs 81.42 per litre respectively today
Petrol & diesel prices per litre – Rs 97.34 & Rs 88.49 in #Mumbai, Rs 92.90 & Rs 86.35 in #Chennai and Rs 91.14 & Rs 84.26 in #Kolkata
(file photo) pic.twitter.com/oNbZLUATAl
— ANI (@ANI) May 6, 2021
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ನಿನ್ನೆ 90.92 ರೂಪಾಯಿಗೆ ಏರಿಕೆಯಾಗಿದ್ದು, ಇಂದೂ ಕೂಡಾ ತೈಲ ಬೆಲೆ ಏರಿಕೆ ಕಂಡಿದ್ದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 91.14 ರೂಪಾಯಿಗೆ ಏರಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ 83.98 ರೂಪಾಯಿಯಿಂದ 84.26 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ನಿನ್ನೆ 92.70 ರೂಪಾಯಿಗೆ ಏರಿಕೆಯಾಗಿತ್ತು. ಇಂದು ಮತ್ತೆ ದರ ಏರಿಕೆ ಕಂಡಿದ್ದರಿಂದ 92.90 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್ ದರವೂ ಸಹ 86.09ರಿಂದ 86.35 ರೂಪಾಯಿಗೆ ಏರಿಕೆಯಾಗಿದೆ.
ಪಂಚ ರಾಜ್ಯಗಳ ಚುಣಾವಣಾ ಫಲಿತಾಂಶದ ಬಳಿಕ ಪೆಟ್ರೋಲ್ನಲ್ಲಿ 2 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 3 ರೂಪಾಯಿ ಏರಿಕೆ ಕಾಣುತ್ತದೆ ಎಂಬ ಮಾಹಿತಿಗಳು ತಿಳಿದು ಬಂದಿದ್ದವು. ಇದಕ್ಕಿಂತಲೂ ಹೆಚ್ಚು ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ದರ ಏರಿಕೆಯ ನಂತರ ಪ್ರತಿ ಲೀಟರ್ ಪೆಟ್ರೋಲ್ ದರ 93.77 ರೂಪಾಯಿಗೆ ಏರಿಕೆಯಾಗಿತ್ತು. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ 86.01 ರೂಪಾಯಿಗೆ ಏರಿಕೆಯಾಗಿತ್ತು. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.01 ರೂಪಾಯಿ ಆಗಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 86.31 ರೂಪಾಯಿ ಆಗಿದೆ.
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html