ಒಡಿಶಾ: 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನಾಲ್ವರು ಸಾವು
50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿಯಲ್ಲಿ ಶುಕ್ರವಾರ ತಡರಾತ್ರಿ (ಏ.19) ನಡೆದಿದೆ. ಇದೀಗ ನಾಪತ್ತೆಯಾಗಿರುವವರನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಝಾರ್ಸುಗುಡಾ, ಏ.20: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಒಡಿಶಾದ (Odisha boat capsize) ಝಾರ್ಸುಗುಡಾ ಜಿಲ್ಲೆಯ ಮಹಾನದಿಯಲ್ಲಿ ಶುಕ್ರವಾರ ತಡರಾತ್ರಿ (ಏ.19) ನಡೆದಿದೆ ಎಂದು ಹೇಳಲಾಗಿದೆ. ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಚಿಂತಾಮಣಿ ಪ್ರಧಾನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೋಟ್ ಬರ್ಗಢ್ ಜಿಲ್ಲೆಯ ಬಂಧಿಪಾಲಿ ಪ್ರದೇಶದಿಂದ ಪ್ರಯಾಣಿಕರನ್ನು ಸಾಗಿಸುತ್ತಿತ್ತು. ಈ ಸಮಯದಲ್ಲಿ ಅನೀರಿಕ್ಷಿತವಾಗಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ದೋಣಿ ಜಾರ್ಸುಗುಡಾದ ಶಾರದಾ ಘಾಟ್ ಬಳಿ ಮುಳುಗಿದೆ ಎಂದು ಹೇಳಲಾಗಿದೆ. ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕಾರ್ತಿಕೇಯ ಗೋಯಲ್, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಜಾರ್ಸುಗುಡಾ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Jharsuguda, Odisha | Visuals of rescue and search operation that is underway after a boat capsized in Mahanadi River, yesterday evening.
One dead, 7 missing and 48 people rescued so far pic.twitter.com/T5KFT4V24z
— ANI (@ANI) April 20, 2024
ಈ ಕಾರ್ಯಾಚರಣೆಯಲ್ಲಿ ಭುವನೇಶ್ವರದಿಂದ ಸ್ಕೂಬಾ ಡೈವರ್‌ಗಳು ಕೂಡ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇದುವರೆಗೆ ನಾವು ಸುಮಾರು 48 ಜನರನ್ನು ರಕ್ಷಿಸಿದ್ದೇವೆ. ಅವರನ್ನು ಅವರ ಊರುಗಳಿಗೆ ಸಾಗಿಸಲಾಗಿದೆ. ರಾತ್ರಿಯ ಸಮಯದಲ್ಲಿ ಈ ನದಿಯಲ್ಲಿ ಕಾರ್ಯಾಚರಣೆ ಮಾಡುವುದು ತುಂಬಾ ಅಪಾಯಕಾರಿಯಾಗಿತ್ತಿ. ಅದರೂ ಅದನ್ನು ಲೆಕ್ಕಿಸದೆ, ಕಾರ್ಯಾಚರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ, 21 ಮಂದಿಗೆ ಗಾಯ
ರಾತ್ರಿ ಕಾರ್ಯಾಚರಣೆ ನಡೆಸಲು ಲೈಟ್ ಮತ್ತು ಪತ್ತೆ ಮಾಡಲು ಬೇಕಾದ ಎಲ್ಲ ಸಹಕಾರವನ್ನು ಜಿಲ್ಲಾಡಳಿತ ರಕ್ಷಣಾ ಸಿಬ್ಬಂದಿಗಳಿಗೆ ನೀಡಲಾಗಿದೆ ಎಂದು ಹೇಳಿದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಸಂಬಂಧಿಕರಿಗೆ 4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಈ ನದಿಯಲ್ಲಿ ಪ್ರಯಾಣಿಸಲು ಯಾವುದೇ ಮಾನ್ಯವಾದ ಪರವಾನಗಿ ಇಲ್ಲ ಎಂದು ಸ್ಥಳೀಯ ಬಿಜೆಪಿ ಮುಖಂಡ ಸುರೇಶ್ ಪೂಜಾರಿ ಆರೋಪಿಸಿದ್ದಾರೆ.
ದಕ್ಕೆ ಸಂಬಂಧಿಸಿದ ಅಧಿಕಾರಿಗಳು ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಿಲ್ಲ ಮತ್ತು ಆ ದೋಣಿಯಲ್ಲಿ ಯಾವುದೇ ರಕ್ಷಣಾ ಸೌಕರ್ಯಗಳು ಇರಲಿಲ್ಲ ಎಂದು ಹೇಳಲಾಗಿದೆ. ಈ ದೋಣಿಯಲ್ಲಿ ಮೀತಿಗಿಂತ ಹೆಚ್ಚಿನ ಜನರನ್ನು ಹಾಕಲಾಗಿದೆ ಎಂದು ಹೇಳಲಾಗಿದೆ. ಇನ್ನು ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.