Elon Musk: ಭಾರತ ಭೇಟಿಯನ್ನು ಮುಂದೂಡಿದ ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್, ಯಾಕೆ ಗೊತ್ತಾ?
ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಇಂದು ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ ಟೆಸ್ಲಾದ ಬಗ್ಗೆ ಕೆಲವೊಂದು ಒತ್ತಡದ ಕೆಲಸ ಇರುವ ಕಾರಣ ಇಂದಿನ ಭೇಟಿಯನ್ನು ಮುಂದೂಡಿದ್ದಾರೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ. ಪ್ರಧಾನಿ ಮೋದಿ ಅವರನ್ನು ಕೂಡ ನಾನು ಭೇಟಿ ಮಾಡಬೇಕಿತ್ತು. ಖಂಡಿತ ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಾಳೆ (ಏ.20) ಭಾರತಕ್ಕೆ ಭೇಟಿ ನೀಡಬೇಕಿದ್ದ ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಇಂದು ಬೆಳಿಗ್ಗೆ ನಾನು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಎಕ್ಸ್ ಮೂಲಕ ಟ್ವೀಟ್ ಮಾಡಿದ್ದಾರೆ. ಟೆಸ್ಲಾದ ಬಗ್ಗೆ ಕೆಲವೊಂದು ಕೆಲಸ ಹಾಗೂ ಒತ್ತಡ ಇರುವ ಕಾರಣ ನಾನು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ. ಪ್ರಧಾನಿ ಮೋದಿ ಅವರನ್ನು ಕೂಡ ನಾನು ಭೇಟಿ ಮಾಡಬೇಕಿತ್ತು. ಖಂಡಿತ ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಹಿಂದೆ ಆಸಕ್ತಿಯನ್ನು ತೋರಿಸಿದರು. ಕಳೆದ ವಾರ ಮಸ್ಕ್ ಅವರು “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಎಪ್ರಿಲ್ 21ಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿಕೊಂಡಿದರು. ಆದರೆ ಇದೀಗ ನನ್ನ ಭೇಟಿ ವಿಳಂಬವಾಗಲಿದೆ. ಟೆಸ್ಲಾದ ಕೆಲವೊಂದು ಒತ್ತಡದ ಕೆಲಸ ಬಂದ ಕಾರಣ ನಾನು ಭಾರತಕ್ಕೆ ಏ.21ಕ್ಕೆ ಭೇಟಿ ನೀಡುವುದಿಲ್ಲ ಎಂದು ಇಂದು ಎಕ್ಸ್ ಟ್ವೀಟ್ ಮಾಡಿದ್ದಾರೆ.
ಕಳೆದ ಜೂನ್‌ನಲ್ಲಿ ಯುಎಸ್‌ನಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದರು. ಈ ಸಮಯದಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ, ಹಾಗೂ ಟೆಸ್ಲಾಗೆ ಹೊಸ ಮಾರುಕಟ್ಟೆಯನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದರು. ಇದರ ಜತೆಗೆ ಭಾರತದಲ್ಲಿ $2-3 ಶತಕೋಟಿ (1,66,74,08,00,000) ಹೂಡಿಕೆ ಮಾಡುವುದಾಗಿ ಹೇಳಿದರು.
ಇದನ್ನೂ ಓದಿ: ರಾಹುಲ್ ಅಮೇಥಿಯಂತೆ ವಯನಾಡಿನಲ್ಲೂ ತನ್ನ ನೆಲೆ ಕಳೆದುಕೊಳ್ಳಲಿದ್ದಾರೆ: ಪ್ರಧಾನಿ ಮೋದಿ
ಈಗಾಗಲೇ ಟೆಸ್ಲಾ, ಎಲೆಕ್ಟ್ರಿಕ್ ಕಾರು ತಯಾರಕ, ಯುಎಸ್ ಮತ್ತು ಚೀನಾದಲ್ಲಿ ಮಾರಾಟ ಆಗುತ್ತಿದೆ. ಆದರೆ ಈ ಮಾರಾಟ ನಿಧಾನಗತಿಯಲ್ಲಿದೆ. ಅದಕ್ಕಾಗಿ ಹೊಸ ಮಾರುಕಟ್ಟೆಯನ್ನು ಹುಡುಕುತ್ತಿದೆ. ಇದೀಗ ಭಾರತವು ಟೆಸ್ಲಾಗೆ ಸಂಭಾವ್ಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಸ್ಥಳೀಯವಾಗಿ ಹೂಡಿಕೆ ಮಾಡುವ ಕಂಪನಿಗಳ ಆಮದು ಮಾಡಿಕೊಂಡ ಕಾರುಗಳ ಮೇಲಿನ ತೆರಿಗೆಗಳನ್ನು ಸರ್ಕಾರ ಕಡಿಮೆ ಮಾಡಲಿದೆ. ಇದರ ಜತೆಗೆ ಸ್ಟಾರ್‌ಲಿಂಕ್ ಕೂಡ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.