AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ರಕರ್ತರನ್ನೂ ಕೂಡ ಮುಂಚೂಣಿಯಲ್ಲಿರುವ ಕೊವಿಡ್​ ವಾರಿಯರ್ಸ್​ ಎಂದು ಘೋಷಿಸಿದ ಒಡಿಶಾ ಸರ್ಕಾರ

ಪತ್ರಕರ್ತರನ್ನು ಮುಂಚೂಣಿ ಕೊವಿಡ್​ 19 ವಾರಿಯರ್ಸ್​ ಎಂದು ಪರಿಗಣಿಸಿದ್ದರಿಂದ ಒಡಿಶಾದ ಸುಮಾರು 6944 ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ.

ಪತ್ರಕರ್ತರನ್ನೂ ಕೂಡ ಮುಂಚೂಣಿಯಲ್ಲಿರುವ ಕೊವಿಡ್​ ವಾರಿಯರ್ಸ್​ ಎಂದು ಘೋಷಿಸಿದ ಒಡಿಶಾ ಸರ್ಕಾರ
ಮುಖ್ಯಮಂತ್ರಿ ನವೀನ್​ ಪಟ್ನಾಯಕ್​
Lakshmi Hegde
|

Updated on: May 02, 2021 | 6:15 PM

Share

ಭುವನೇಶ್ವರ್​: ಪತ್ರಕರ್ತರನ್ನು ಕೂಡ ಮುಂಚೂಣಿಯಲ್ಲಿರುವ ಕೊವಿಡ್​ 19 ವಾರಿಯರ್ಸ್​ ಎಂದು ಪರಿಗಣಿಸುವುದಾಗಿ ಒಡಿಶಾ ಸರ್ಕಾರ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿಯೂ ಹೆದರದೆ ವರದಿ ಬಿತ್ತರಿಸುತ್ತಿರುವ ಪತ್ರಕರ್ತರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಬೇಕು ಎಂಬ ಪ್ರಸ್ತಾವನೆಗೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಸಿಕ್ಕಿದೆ.

ಕೊವಿಡ್ 19 ಸೋಂಕಿನ ಬಗ್ಗೆ ನಿರಂತರವಾಗಿ ವರದಿ, ಸುದ್ದಿ ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಹೀಗೆ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಿಂದ ನಮಗೆ ಇನ್ನಷ್ಟು ಸುಲಲಿತವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. ಎಲ್ಲೆಲ್ಲಿ ಏನಾಗುತ್ತದೆ ಎಂಬ ಸಮಗ್ರ ಮಾಹಿತಿಯೂ ಸಿಗುತ್ತದೆ ಎಂದು ಮುಖ್ಯಂತ್ರಿ ನವೀನ್ ಪಟ್ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ.

ಪತ್ರಕರ್ತರನ್ನು ಮುಂಚೂಣಿ ಕೊವಿಡ್​ 19 ವಾರಿಯರ್ಸ್​ ಎಂದು ಪರಿಗಣಿಸಿದ್ದರಿಂದ ಒಡಿಶಾದ ಸುಮಾರು 6944 ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ಒಂದೊಮ್ಮೆ ಯಾರಾದರೂ ಪತ್ರಕರ್ತರು ಕೊವಿಡ್​ನಿಂದ ಮೃತಪಟ್ಟರೆ ಅವರ ಸಂಬಂಧಿಗೆ 15 ಲಕ್ಷ ರೂ.ಪರಿಹಾರ ಸಿಗಲಿದೆ.

ಇದನ್ನೂ ಓದಿ: ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ತಾಯಿಯ ಮೃತದೇಹವನ್ನು ಮಗ ಬೈಕ್‌ನಲ್ಲಿ ಶವಾಗಾರಕ್ಕೆ ಸಾಗಿಸಿದ್ದಾನೆ…

‘ಇದು ಬಂಗಾಳದ ಗೆಲುವು..’ ಎಂದು ನಗೆ ಬೀರಿದ ಮಮತಾ ಬ್ಯಾನರ್ಜಿ; ಇಂದು ಸಂಜೆ 6ಗಂಟೆಗೆ ಸುದ್ದಿಗೋಷ್ಠಿ