ದೆಹಲಿ: ಒಡಿಶಾದ (Odisha Train Accident) ಬಾಲಸೋರ್‌ನಲ್ಲಿ ಕಳೆದ ರಾತ್ರಿ ಮೂರು ರೈಲುಗಳು ಡಿಕ್ಕಿ ಹೊಡೆದು 230 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 900 ಮಂದಿಗೆ ಗಾಯಗಳಾಗಿವೆ. ಇದೆಲ್ಲದರ ನಡುವೆ ಗಮನಿಸಬೇಕಾದ ಸಂಗತಿ ಎಂದರೆ ಚಾಲಕನ ತಪ್ಪು ಅಥವಾ ಇತರ ಕಾರಣಗಳಿಂದ ರೈಲು ಅಪಘಾತಗಳನ್ನು ತಡೆಗಟ್ಟಲು ಭಾರತೀಯ ರೈಲ್ವೇ(Indian Railways )ಅಭಿವೃದ್ಧಿಪಡಿಸಿದ ವ್ಯವಸ್ಥೆ ಕವಚ್ ಈ ದಾರಿಯಲ್ಲಿ ಇರಲಿಲ್ಲ ಎಂಬುದು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ನಾವು ಮರುಸ್ಥಾಪನೆ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆಯು (Kavach System) ಲಭ್ಯವಿರಲಿಲ್ಲ ಎಂದು ಭಾರತೀಯ ರೈಲ್ವೇ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.
ಸಂಜೆ 7 ಗಂಟೆಗೆ ಬಾಲಸೋರ್‌ನಲ್ಲಿ ರೈಲಿನ ಒಂದು ಬೋಗಿ ಹಳಿತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದವು. ಕವಚ್ ಎಂಬುದು ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯಾಗಿದ್ದು, ರಿಸರ್ಚ್ ಡಿಸೈನ್ ಆಂಡ್ ಸ್ಟ್ಯಾಂಡರ್ಡ್ ಆರ್ಗನೈಸೇಷನ್ ಮೂರು ಭಾರತೀಯ ಸಂಸ್ಥೆಗಳೊಂದಿಗೆ ಸೇರಿ ಇದನ್ನು ಅಭಿವೃದ್ಧಿಪಡಿಸಿದೆ. ಕವಚ್ ಲೊಕೊಮೊಟಿವ್ ಡ್ರೈವರ್‌ಗಳಿಗೆ ಅಪಾಯದ ಸಂಕೇತಗಳನ್ನು ತಪ್ಪಿಸದೇ ಇರುವಂತೆ ಸಹಾಯ ಮಾಡುವುದಲ್ಲ ಮತ್ತು ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ರೈಲುಗಳು ಸುರಕ್ಷಿತವಾಗಿ ಓಡುವುದನ್ನು ಖಚಿತಪಡಿಸುತ್ತದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಖುದ್ದು ‘ಕವಚ್’ ವ್ಯವಸ್ಥೆಯನ್ನು ಪರೀಕ್ಷಿಸಿದ್ದರು. ಹಿಂಭಾಗಕ್ಕೆ ಬಡಿದ ಪರೀಕ್ಷೆ ಯಶಸ್ವಿಯಾಗಿದೆ. ಮುಂಭಾಗದಲ್ಲಿ 380 ಮೀಟರ್‌ಗಿಂತ ಮುಂಚಿತವಾಗಿ ಕವಚ್ ಸ್ವಯಂಚಾಲಿತವಾಗಿ ಇಂಜಿನ್ ಅನ್ನು ನಿಲ್ಲಿಸಿತು ಎಂದು ವೈಷ್ಣವ್ ಕಳೆದ ವರ್ಷ ಮಾರ್ಚ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
Rear-end collision testing is successful.
Kavach automatically stopped the Loco before 380m of other Loco at the front.#BharatKaKavach pic.twitter.com/GNL7DJZL9F— Ashwini Vaishnaw (@AshwiniVaishnaw) March 4, 2022
ಚಾಲಕನು ಸರಿಯಾದ ಸಮಯಕ್ಕೆ ಬ್ರೇಕ್ ಹಾಕಲು ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್ ಮಾಡುವ ಮೂಲಕ ಕವಚ್ ರೈಲಿನ ವೇಗವನ್ನು ನಿಯಂತ್ರಿಸುತ್ತದೆ.
23 ಮಾರ್ಚ್ 2022 ರಂದು, ರೈಲ್ವೇ ಸಚಿವಾಲಯವು ಕವಚ್ ಎಂಬ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ಭಾರತದಲ್ಲಿ ರೈಲು ಕಾರ್ಯಾಚರಣೆಗಳ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಘೋಷಿಸಿತು. ಕವಚ್ ಭಾರತೀಯ ರೈಲ್ವೇಗಳಿಗೆ ರಾಷ್ಟ್ರೀಯ ATP ವ್ಯವಸ್ಥೆಯಾಗಿ ಅಳವಡಿಸಲಾಗಿದೆ.
ಕವಚ್ ಅನ್ನು ಲೋಕೋಮೋಟಿವ್ ಪೈಲಟ್‌ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ (Signal Passing At Danger- SPAD) ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಾಚರಣೆಗಳಿಗೆ ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ ಮತ್ತು ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.
ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ; ಗಾಯಾಳುಗಳಿಗಾಗಿ ಮಿಡಿದ ಹೃದಯಗಳು, ರಕ್ತ ನೀಡಲು ಮುಂದೆ ಬಂದ ಸಾಲು ಸಾಲು ಜನ
ಲೊಕೊಮೊಟಿವ್ ಪೈಲಟ್ ಕಾರ್ಯನಿರ್ವಹಿಸಲು ವಿಫಲವಾದಲ್ಲಿ ಸ್ವಯಂಚಾಲಿತ ಬ್ರೇಕ್ ಹಾಕುವುದು, ಮಂಜು ಕವಿದು ಮಸುಕಾಗಿದ್ದಾಗ ಮತ್ತು ಹೆಚ್ಚಿನ ವೇಗದಲ್ಲಿ ಸುಧಾರಿತ ಗೋಚರತೆಗಾಗಿ ಕ್ಯಾಬಿನ್‌ನಲ್ಲಿ ಲೈನ್-ಸೈಡ್ ಸಿಗ್ನಲ್ ಪ್ರದರ್ಶನವನ್ನು ಒದಗಿಸುವುದು, ಚಲನೆಯ ನಿರಂತರ ನವೀಕರಣ, , ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸ್ವಯಂಚಾಲಿತ ವಿಸಿಲಿಂಗ್, ನೇರ ಲೊಕೊ-ಟು-ಲೊಕೊ ಸಂವಹನದ ಮೂಲಕ ಘರ್ಷಣೆ ತಪ್ಪಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ರೈಲುಗಳನ್ನು ನಿಯಂತ್ರಿಸಲು SOS ವೈಶಿಷ್ಟ್ಯವನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ