ಒಡಿಶಾ: ದೇವಸ್ಥಾನದಿಂದ ಶ್ರೀಕೃಷ್ಣನ ಆಭರಣಗಳನ್ನು ಕದ್ದು 9 ವರ್ಷಗಳ ನಂತರ ತಪ್ಪೊಪ್ಪಿಗೆ ಟಿಪ್ಪಣಿಯೊಂದಿಗೆ ಮರಳಿಸಿದ ಕಳ್ಳ

2014 ರಲ್ಲಿ, ಯಜ್ಞಶಾಲೆಯಲ್ಲಿ (ಯಜ್ಞದ ಆಚರಣೆ ನಡೆಯುವ ಸ್ಥಳದಲ್ಲಿ) ಯಜ್ಞದ ಸಮಯದಲ್ಲಿ, ನಾನು ಈಆಭರಣಗಳನ್ನು ತೆಗೆದುಕೊಂಡಿದ್ದೇನೆ.ಕಳೆದ 9 ವರ್ಷಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಹಾಗಾಗಿ ನಾನು ನು ಅವುಗಳನ್ನು ಒಪ್ಪಿಸುತ್ತೇನೆ ಎಂಬ ಟಿಪ್ಪಣಿ ಜತೆ ಕಳ್ಳ ಆಭರಣಗಳನ್ನು ಮರಳಿಸಿದ್ದಾನೆ.

ಒಡಿಶಾ: ದೇವಸ್ಥಾನದಿಂದ ಶ್ರೀಕೃಷ್ಣನ ಆಭರಣಗಳನ್ನು ಕದ್ದು 9 ವರ್ಷಗಳ ನಂತರ ತಪ್ಪೊಪ್ಪಿಗೆ ಟಿಪ್ಪಣಿಯೊಂದಿಗೆ ಮರಳಿಸಿದ ಕಳ್ಳ
ಶ್ರೀಕೃಷ್ಣನ ಆಭರಣ
Image Credit source: India Today
ರಶ್ಮಿ ಕಲ್ಲಕಟ್ಟ

Updated on: May 17, 2023 | 6:03 PM

ಒಡಿಶಾದ (Odisha) ಗೋಪಿನಾಥಪುರದ(Gopinathpur) ಗೋಪಿನಾಥ ದೇಗುಲದಲ್ಲಿ ಶ್ರೀಕೃಷ್ಣನ ಆಭರಣಗಳನ್ನು ಕದ್ದ ಕಳ್ಳನೊಬ್ಬ 9 ವರ್ಷಗಳ ನಂತರ ಅವುಗಳನ್ನು ಹಿಂದಿರುಗಿಸಿದ್ದಾನೆ. ತಾನು ಕದ್ದಂದಿನಿಂದ ದುಃಸ್ವಪ್ನಗಳು ಕಾಡುತ್ತಿವೆ ಎಂಬ ಟಿಪ್ಪಣಿಯೊಂದಿಗೆ ಈತ ಆಭರಣಗಳನ್ನು ಮರಳಿಸಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆ ವ್ಯಕ್ತಿ ಇತ್ತೀಚೆಗೆ ಭಗವದ್ಗೀತೆಯನ್ನು ಓದಿದ್ದು,ತನ್ನ ತಪ್ಪಿನ ಅರಿವಾಗಿದೆ.ಈ ಆಭರಣಗಳು ದೇವಾಲಯದ ಪ್ರಧಾನ ದೇವತೆಗಳಾದ ಕೃಷ್ಣ ಮತ್ತು ರಾಧೆಯರಿಗೆ ಸೇರಿದ್ದು, ಲಕ್ಷಗಟ್ಟಲೆ ಬೆಲೆಬಾಳುವಂಥದ್ದು,

2014 ರಲ್ಲಿ, ಯಜ್ಞಶಾಲೆಯಲ್ಲಿ (ಯಜ್ಞದ ಆಚರಣೆ ನಡೆಯುವ ಸ್ಥಳದಲ್ಲಿ) ಯಜ್ಞದ ಸಮಯದಲ್ಲಿ, ನಾನು ಈಆಭರಣಗಳನ್ನು ತೆಗೆದುಕೊಂಡಿದ್ದೇನೆ.ಕಳೆದ 9 ವರ್ಷಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಹಾಗಾಗಿ ನಾನು ನು ಅವುಗಳನ್ನು ಒಪ್ಪಿಸುತ್ತೇನೆ ಎಂಬ ಟಿಪ್ಪಣಿ ಜತೆ ಕಳ್ಳ ಆಭರಣಗಳನ್ನು ಮರಳಿಸಿದ್ದಾನೆ. ಕಳ್ಳತನವಾಗಿದ್ದ ಶಿರಸ್ತ್ರಾಣ, ಕಿವಿಯೋಲೆ, ಬಳೆ, ಕೊಳಲು ಇದ್ದ ಬ್ಯಾಗ್‌ನ ಆಭರಣಗಳನ್ನು ದೇವಸ್ಥಾನದ ಮುಂಬಾಗಿಲ ಬಳಿ ಬಿಟ್ಟು ಅರ್ಚಕ ದೇಬೇಶ್ ಚಂದ್ರ ಮೊಹಂತಿ ಹೆಸರನ್ನು ಟಿಪ್ಪಣಿಯಲ್ಲಿ ಬರೆದಿದ್ದಾನೆ. ಈ ಆಭರಣಗಳ ಜೊತೆಗೆ ಹೆಚ್ಚುವರಿಯಾಗಿ 300 ರೂ.ಗಳನ್ನು ಇರಿಸಿದ್ದಾನೆ.

ಶ್ರೀಕೃಷ್ಣನ ಬೋಧನೆಯಿಂದ ಪ್ರೇರಿತನಾದ ಕಳ್ಳನು ಕದ್ದ ಆಭರಣಗಳನ್ನು ದೇವಾಲಯಕ್ಕೆ ಹಿಂದಿರುಗಿಸಲು ನಿರ್ಧರಿಸಿದನು ಎಂದು ಅವನು ತನ್ನ ಟಿಪ್ಪಣಿಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್

ಕಳ್ಳತನವಾದ ಚಿನ್ನಾಭರಣಗಳು ವಾಪಸ್ ಬಂದಿರುವುದು ದೇವಸ್ಥಾನದ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಸಂತಸ ತಂದಿದೆ. ಪಶ್ಚಾತ್ತಾಪ ಪಡುವ ಕಳ್ಳನ ಕೃತ್ಯ ಮತ್ತು ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಅವನು ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Wed, 17 May 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us