ಒಡಿಶಾ ರೈಲು ದುರಂತ: ಸಂತ್ರಸ್ತರಿಗೆ 10 ಕೋಟಿ ದೇಣಿಗೆ ಕೊಡ್ತೀನಿ ತಗೊಳೀ -ರೈಲ್ವೆ ಸಚಿವರಿ​​ಗೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮನವಿ

288 ಜನರು ಸಾವನ್ನಪ್ಪಿದ ಒಡಿಶಾ ರೈಲು ದುರಂತದಲ್ಲಿ ಸಂತ್ರಸ್ತರಿಗೆ ದೇಣಿಗೆಯಾಗಿ 10 ಕೋಟಿ ರೂಪಾಯಿಗಳನ್ನು ನೀಡುವೆ ಸ್ವೀಕರಿಸುವಂತೆ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾನೆ.

ಒಡಿಶಾ ರೈಲು ದುರಂತ: ಸಂತ್ರಸ್ತರಿಗೆ 10 ಕೋಟಿ ದೇಣಿಗೆ ಕೊಡ್ತೀನಿ ತಗೊಳೀ -ರೈಲ್ವೆ ಸಚಿವರಿ​​ಗೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮನವಿ
ರೈಲ್ವೆ ಸಚಿವರಿ​​ಗೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮನವಿ
Follow us
ಸಾಧು ಶ್ರೀನಾಥ್​
|

Updated on: Jun 17, 2023 | 6:52 AM

ದೆಹಲಿ: ಜೂನ್ 2 ರಂದು ಒಡಿಶಾ ರೈಲು ದುರಂತದಲ್ಲಿ (Odisha Train Tragedy) 288 ಜನರು ಸಾವನ್ನಪ್ಪಿದ ಕುಟುಂಬಗಳ ಸಂತ್ರಸ್ತರಿಗೆ ದೇಣಿಗೆಯಾಗಿ (Donation) 10 ಕೋಟಿ ರೂಪಾಯಿಗಳನ್ನು ನೀಡುವೆ ಸ್ವೀಕರಿಸಿ ಎಂದು ಬಂಧಿತ ಆರೋಪಿ ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ (Railways Minister Ashwini Vaishnaw) ಪತ್ರ ಬರೆದಿದ್ದಾರೆ. ಈ ಕೊಡುಗೆಯು ನನ್ನ ಕಾನೂನುಬದ್ಧ ಗಳಿಕೆಯ ಮೂಲದಿಂದ ಬಂದ ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿದೆ ಮತ್ತು ರಿಟರ್ನ್ಸ್ ಫೈಲಿಂಗ್‌ಗಳ ಜೊತೆಗೆ ದಾಖಲಾತಿಗಳನ್ನು 10 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ಒದಗಿಸುವೆ ಎಂದು ಚಂದ್ರಶೇಖರ್ ಹೇಳಿದ್ದಾನೆ. ಪ್ರಸ್ತುತ ತಾನು ಮಂಡೋಲಿ ಜೈಲಿನಲ್ಲಿರುವುದಾಗಿ ಆತ ನಿನ್ನೆ ಶುಕ್ರವಾರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ವಂಚಕ ಸುಕೇಶ್ ಚಂದ್ರಶೇಖರ್ ದೆಹಲಿಯ ರಾಜ್ಯಪಾಲ ವಿಕೆ ಸಕ್ಸೇನಾಗೆ ಪತ್ರ ಬರೆದಿದ್ದು. ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಅದ್ದೂರಿ ಪೀಠೋಪಕರಣಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದು, ತನಿಖೆಗೆ ಕೋರಿದ್ದಾನೆ.

ಸರ್ಕಾರವು ಈಗಾಗಲೇ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲವನ್ನು ಒದಗಿಸುತ್ತಿರುವುದರಿಂದ, ನಾನು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕನಾಗಿ ಈ 10 ಕೋಟಿ ರೂಪಾಯಿಗಳ ನಿಧಿಯನ್ನು ನಿರ್ದಿಷ್ಟವಾಗಿ ಆ ಕುಟುಂಬಗಳು/ಮಕ್ಕಳು, ನಮ್ಮ ಭವಿಷ್ಯದ ಯುವಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಬಳಸಲು ನೀಡುತ್ತಿದ್ದೇನೆ. ಮೃತರ ಪ್ರತಿ ಮಗುವಿನ ಶಾಲೆ, ಪ್ರೌಢಶಾಲೆ, ಕಾಲೇಜು ಶಿಕ್ಷಣ ವೆಚ್ಚಗಳಿಗೆ ನಿರ್ದಿಷ್ಟವಾಗಿ ಬಳಸಬೇಕಾದ ಕೊಡುಗೆ ಇದಾಗಿದೆ ಎಂದು ಸುಕೇಶ್ ಚಂದ್ರಶೇಖರ್ ತಿಳಿಸಿದ್ದಾನೆ.

Also Read:  ಜೈಲಿನಲ್ಲಿದ್ದರೂ ನಿಂತಿಲ್ಲ ಸುಕೇಶ್​-ಜಾಕ್ವೆಲಿನ್​ ಪ್ರೇಮಕಥೆ; ಕಾರಾಗೃಹದಿಂದಲೇ ಲವ್​ ಲೆಟರ್​ ರವಾನೆ

ಪ್ರತಿದಿನದ ಆಧಾರದ ಮೇಲೆ ನನ್ನ ಸಂಸ್ಥೆಯಾದ ಶಾರದಾ ಫೌಂಡೇಶನ್, ಚಂದ್ರಶೇಖರ್ ಕ್ಯಾನ್ಸರ್ ಫೌಂಡೇಶನ್, ಎಲ್ಎಸ್ ಶಿಕ್ಷಣ ಸಂಸ್ಥೆಗಳು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮುಖ್ಯವಾಗಿ ಆಹಾರದ ಕೊಡುಗೆಗಾಗಿ ದಕ್ಷಿಣ ಭಾರತದ ಐದು ರಾಜ್ಯಗಳ ನಿರ್ಗತಿಕರಿಗೆ ಕೊಡುಗೆ ನೀಡುತ್ತಿದೆ.

ಸರ್ ನಾನು ವಿನಮ್ರವಾಗಿ ಹೇಳಿದ ಉದ್ದೇಶಕ್ಕಾಗಿ ಕೊಡುಗೆಯನ್ನು ಸ್ವೀಕರಿಸಲು ವಿನಂತಿಸುತ್ತೇನೆ. ಡಿಮ್ಯಾಂಡ್​​ ಡ್ರಾಫ್ಟ್​​ ಸಿದ್ಧಪಡಿಸಬೇಕು. ಆದ್ದರಿಂದ ತಕ್ಷಣವೇ ಆದ್ಯತೆಯ ಮೇಲೆ ಅನುಮತಿ ಕೊಡಿ ಎಂದು ಅವರು ಕೋರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ