ನವದೆಹಲಿ, (ಏಪ್ರಿಲ್ 16): ಲೋಕಸಭೆ ಚುನಾವಣೆ (lok sabha election 2024) ರಂಗೇರಿದ್ದು, ಏಫ್ರಿಲ್ 26ರಂದು ಮೊದಲ ಹಂತದಲ್ಲಿ ಮತದಾನದೊಂದಿಗೆ ಪಾಂಚಜನ್ಯ ಮೊಳಗಲಿದೆ. ದೇಶದಲ್ಲಿ ಒಟ್ಟು 7 ಹಂತದಲ್ಲಿ ಮತದಾನ ನಡೆಯಲಿದ್ದು, ಕದನ ಕಲಿಗಳ ಭವಿಷ್ಯ ಜೂನ್ 4ರಂದು ಹೊರಬೀಳಲಿದೆ. ಆದ್ರೆ ಅದಕ್ಕೂ ಮುನ್ನವೇ ಮತದಾನ ಪೂರ್ವ ನಡೆಸಲಾದ ಸಮೀಕ್ಷೆಗಳಲ್ಲಿ(poll Survey ) ರೋಚಕ ಮಾಹಿತಿ ಹೊರಬಿದ್ದಿದೆ. ಟಿವಿ9 ನೆಟ್ವರ್ಕ್ (Tv9 Network), ಪೀಪಲ್ಸ್ ಇನ್‌ಸೈಟ್(People’s Insight), ಪೋಲ್‌ಸ್ಟ್ರಾಟ್ (Polstrat), ಈ ಮೂರು ಸಂಸ್ಥೆಗಳು ದೇಶಾದ್ಯಂತ ಚುನಾವಣಾ ಸಮೀಕ್ಷೆ ನಡೆಸಿದೆ. ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳ ಸುಮಾರು 25ಲಕ್ಷಕ್ಕೂ ಅಧಿಕ ಜನರಿಂದ ಮಾದರಿ ಸಂಗ್ರಹಿಸಲಾಗಿದೆ. 4123 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆದಿದ್ದು, ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ ವ್ಯೂವಿಂಗ್ ಮೂಲಕ ಜನರ ಅಭಿಪ್ರಾಯ ಪಡೆಯಲಾಗಿದೆ. ಇದು ಏಪ್ರಿಲ್ 1ರಿಂದ ಏಪ್ರಿಲ್ 13 ರವರೆಗೆ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಸಿಕ್ಕಂತ ದತ್ತಾಂಶ ಏನು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಅದರಂತೆ ದೇಶಾದ್ಯಂತ 543 ಕ್ಷೇತ್ರದಲ್ಲಿ ಅಧಿಕಾರಕ್ಕೇರಲು 272 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಎಲ್ಲಾ ರಾಜ್ಯಗಳ ಚಿತ್ರಣವನ್ನ ತೆರೆದಿಟ್ಟಿರುವ ಸಮೀಕ್ಷೆಯೇ ಅಂತಿಮವಾಗಿದೆ. ಎನ್ಡಿಎಗೆಷ್ಟು? ಇಂಡಿಯಾ ಮೈತ್ರಿ ಕೂಟಕ್ಕೆ ಎಷ್ಟು ಮಹಾ ಭವಿಷ್ಯವನ್ನೇ ನುಡಿದಿದೆ. 543 ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿ ಕೂಟ ಒಟ್ಟು 362 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಪೈಕಿ ಬಿಜೆಪಿ ಸಿಂಗಲ್ ಹ್ಯಾಂಡೆಡ್ ಆಗಿ 319 ಕ್ಷೇತ್ರ ಗೆಲ್ಲಲಿದೆ ಅಂದಿದ್ರೆ. ಮೈತ್ರಿ ಪಕ್ಷಗಳು 43 ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ಅಂದಾಜಿಸಿದೆ. ಇನ್ನು ಇಂಡಿಯಾ ಮೈತ್ರಿ ಕೂಟ 149 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಹೇಳಿದೆ. ಇದರಲ್ಲಿ ಕಾಂಗ್ರೆಸ್ 49 ಸ್ಥಾನ ಗೆಲ್ಲಲಿದೆ ಅಂದಿದ್ರೆ. ಮೈತ್ರಿ ಪಕ್ಷಗಳು 100 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಯಾವ ರಾಜ್ಯದಲ್ಲಿ ಯಾರು ಎಷ್ಟ ಸ್ಥಾನ ಗೆಲ್ಲಲಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಕರ್ನಾಟಕ ಪ್ರತಿಷ್ಠಯ ಕಣವಾಗಿದೆ. ಇಂತಹ ಅಖಾಡದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಕೂಟ ಎನ್ಡಿಎ ಅತಿಹೆಚ್ಚು ಸ್ಥಾನಗಳಿಸುತ್ತೆ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 20, ಜೆಡಿಎಸ್ಗೆ 3 ಸ್ಥಾನ ಸಿಗಬಹುದು. ಇನ್ನು ಕಾಂಗ್ರೆಸ್ 5 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ)
ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ 32 ಸ್ಥಾನ, ಎನ್ಡಿಎಗೆ 5 ಸ್ಥಾನ, AIADMK-02 ಸ್ಥಾನ ಗೆಲ್ಲಬಹುದು ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಆಂಧ್ರ ಪ್ರದೇಶದಲ್ಲಿ ಎನ್ಡಿಎ 12 ಸ್ಥಾನ, YSRCP 13 ಸ್ಥಾನ, ಇಂಡಿಯಾ ಮೈತ್ರಿ ಕೂಟ ಶೂನ್ಯ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ)
ಇನ್ನು ತೆಲಂಗಾಣದಲ್ಲಿ ಎನ್ಡಿಎ 7 ಸ್ಥಾನ, ಇಂಡಿಯಾ ಮೈತ್ರಿ ಕೂಟ 8 ಸ್ಥಾನ, ಬಿಆರ್ಎಸ್ 1 ಸ್ಥಾನ, ಎಐಎಂಐಎಂ 1 ಸ್ಥಾನದಲ್ಲಿ ಗೆಲ್ಲೋ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಕೇರಳದಲ್ಲಿ ಎನ್ಡಿಎ 3 ಸ್ಥಾನ, ಯಡಿಎಫ್ 14 ಸ್ಥಾನ. ಎಲ್ಡಿಎಫ್ 3 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಹೇಳಿದೆ)
ಮಹಾರಾಷ್ಟ್ರದಲ್ಲಿ ಎನ್ಡಿಎ 28 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 20 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ)
ಮಮತಾ ಬ್ಯಾನರ್ಜಿ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಕ್ಷೇತ್ರಗಳಲ್ಲಿ ಎನ್ಡಿಎ 20 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನ, ಇನ್ನು ಮಮತಾ ಬ್ಯಾನರ್ಜಿಯ ಟಿಎಂಸಿ 21 ಸ್ಥಾನ ಗೆಲ್ಲಿದೆ ಎಂದು ಸಮೀಕ್ಷೆ ಹೇಳಿದೆ.
ಒಟ್ಟು 40 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಹಾರದಲ್ಲಿ ಎನ್ಡಿಎ 31 ಸ್ಥಾನ, ಇಂಡಿಯಾ ಮೈತ್ರಿ ಕೂಟ 8 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಮಧ್ಯ ಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ. 29 ಕ್ಷೇತ್ರಕ್ಕೆ 29ರಲ್ಲೂ ಎನ್ಡಿಎ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ)
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲೂ ಸಹ ಎನ್ಡಿಎ ಕ್ಲೀನ್ ಸ್ವೀಪ್ ಮಾಡಲಿದೆ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಒಟ್ಟು 26 ಕ್ಷೇತ್ರದಲ್ಲಿ 29 ಸ್ಥಾನಗಳನ್ನು ಎನ್ಡಿಎ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಲ್ಲಿ ಎನ್ಡಿಎ 19 ಸ್ಥಾನ, ಇಂಡಿಯಾ ಮೈತ್ರಿ ಕೂಟ 5 ಸ್ಥಾನ, ಇತರೆ 1 ಸ್ಥಾನ ಗೆಲ್ಲಲಿದೆ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಪಂಜಾಬ್ನಲ್ಲಿ 13 ಕ್ಷೇತ್ರಗಳಿದ್ದು, ಇದರಲ್ಲಿ ಎನ್ಡಿಎ 4 ಸ್ಥಾನ, ಆಪ್ 8 ಸ್ಥಾನದಲ್ಲಿ ಗೆಲ್ಲಬಹುದೆಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ಹೇಳಿದೆ.
ಜಾರ್ಖಂಡ್: 14 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ಜಾರ್ಖಂಡ್ನಲ್ಲಿ ಎನ್ಡಿಎ 12 ಸ್ಥಾನ, ಇಂಡಿಯಾ 1 ಸ್ಥಾನ, ಇತರೆಗೆ 1 ಸ್ಥಾನ ಗೆಲ್ಲಬಹುದೆಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಛತ್ತೀಸ್ಗಢ: 11 ಕ್ಷೇತ್ರ ಇರುವ ಛತ್ತೀಸ್ಗಢದಲ್ಲಿ ಎನ್ಡಿಎ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಎನ್ಡಿಎ 11 ಕ್ಷೇತ್ರದಲ್ಲಿ ಗೆಲ್ಲಬಹುದೆಂದು ಎಂದು ಸಮೀಕ್ಷೆ ಹೇಳಿದೆ.
ಅಸ್ಸಾಂ: ಅಸ್ಸಾಂನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದುಮ ಈ ಪೈಕಿ ಎನ್ಡಿಎ 12 ಸ್ಥಾನ, ಇಂಡಿಯಾ ಮೈತ್ರಿ ಕೂಟಕ್ಕೆ 1 ಸ್ಥಾನ, ಇತರೆ 1 ಸ್ಥಾನ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಒಡಿಶಾ: 21 ಲೋಕಸಭಾ ಕ್ಷೇತ್ರಗಳಿರುವ ಒಡಿಶಾದಲ್ಲಿ ಎನ್ಡಿ 14 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನ, ಬಿಜೆಡಿ 6 ಸ್ಥಾನ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನಡಿದಿದೆ.
ಹರಿಯಾಣ: ಹರಿಯಾಣದಲ್ಲಿ 10 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಎನ್ಡಿಎ 9 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನಡಿದಿದೆ.
ದೆಹಲಿ:– 7 ಕ್ಷೇತ್ರ ಇರುವ ದೆಹಲಿಯಲ್ಲಿ ಎನ್ಡಿಎ 6 ಸ್ಥಾನ, ಇಂಡಿಯಾ ಮೈತ್ರಿ ಕೂಟದ ಭಾಗವಾದ ಆಪ್ 1 ಸ್ಥಾನದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಹಿಮಾಚಲಪ್ರದೇಶ-4 ಕ್ಷೇತ್ರ: ಹಿಮಾಚಲ ಪ್ರದೇಶದಲ್ಲಿ ಎನ್ಡಿಎ ಕ್ಲೀನ್ ಸ್ಪೀಪ್ ಮಾಡಲಿದೆ ಎನ್ನಲಾಗ್ತಿದೆ. ಎನ್ಡಿಎ 4 ಕ್ಷೇತ್ರದಲ್ಲೂ ಗೆಲ್ಲಬಹುದೆಂದು ಸಮೀಕ್ಷೆ ಹೊರಬಿದ್ದಿದೆ.
ಉತ್ತರಾಖಂಡ್- 05 ಕ್ಷೇತ್ರ: ಉತ್ತರಾಖಂಡದಲ್ಲೂ ಎನ್ಡಿಎ ಕ್ಲೀನ್ ಸ್ವೀಪ್ ಮಾಡಲಾಗುತ್ತೆ ಎನ್ನಲಾಗ್ತಿದೆ. ಎನ್ಡಿಎ 5 ಸ್ಥಾನದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶ-80 ಕ್ಷೇತ್ರ: ಉತ್ತರ ಪ್ರದೇಶದಲ್ಲಿ ಎನ್ಡಿಎ 68 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 12 ಸ್ಥಾನ ಗೆಲ್ಲಬಹುದು ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ)
ಜಮ್ಮು-ಕಾಶ್ಮೀರ- 05 ಕ್ಷೇತ್ರ: ಜಮ್ಮು, ಕಾಶ್ಮೀರದಲ್ಲಿ ಎನ್ಡಿಎ 68 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 12 ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.