ಹೈದರಾಬಾದ್: ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ (OLECTRA) ಮತ್ತು ಇವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ (EVEY) ಒಕ್ಕೂಟವು 123 ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಥಾಣೆ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್‌ನಿಂದ ಆರ್ಡರ್ ಸ್ವೀಕರಿಸಿದೆ. ಈ ಬಸ್‌ಗಳನ್ನು 15 ವರ್ಷಗಳ ಅವಧಿಗೆ ಒಟ್ಟು ವೆಚ್ಚದ ಒಪ್ಪಂದ (GCC) / OPEX ಮಾದರಿಯ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತದೆ. ಆರ್ಡರ್ ಮೌಲ್ಯ ರೂ.185 ಕೋಟಿ ಆಗಿದೆ. ಇವಿ ಟ್ರಾನ್ಸ್ ಒಲೆಕ್ಟ್ರಾ ಗ್ರೀನ್‌ಟೆಕ್‌ನಿಂದ ಎಲೆಕ್ಟ್ರಿಕ್ ಬಸ್‌ಗಳನ್ನು ಸಂಗ್ರಹಿಸಿ 9 ತಿಂಗಳಲ್ಲಿ ವಿತರಿಸಲಿದೆ. ಈ 123 ಇ-ಬಸ್‌ಗಳ ಪೈಕಿ 55 (45 ಹವಾನಿಯಂತ್ರಿತ ಮತ್ತು 10 ನಾನ್-ಎಸಿ) 12 ಮೀಟರ್ ಬಸ್‌ಗಳಾಗಿವೆ. ಇತರ 68 ಇ-ಬಸ್‌ಗಳು (26 ಹವಾನಿಯಂತ್ರಿತ, 42 ನಾನ್-ಎಸಿ) 9-ಮೀಟರ್ ನದ್ದಾಗಿದೆ. 12-ಮೀಟರ್ ಬಸ್‌ಗಳು 200 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, 39 ಆಸನ ಸಾಮರ್ಥ್ಯ ಮತ್ತು ಚಾಲಕನನ್ನು ಹೊಂದಿರುತ್ತದೆ. 9 ಮೀಟರ್‌ಗಳ ಬಸ್‌ಗಳು 160 ಕಿಲೋಮೀಟರ್‌ಗಳನ್ನು ಹೊಂದಿದ್ದು, 31 ಆಸನ ಸಾಮರ್ಥ್ಯ ಮತ್ತು ಚಾಲಕನನ್ನು ಹೊಂದಿರುತ್ತದೆ. ಈ ಲಿಥಿಯಂ-ಐಯಾನ್ ಬ್ಯಾಟರಿ ಬಸ್‌ಗಳನ್ನು ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
ಒಲೆಕ್ಟ್ರಾ ಗ್ರೀನ್ಟೆಕ್ ಒಪ್ಪಂದದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಂಪನಿ ಮತ್ತು ಇವಿ ಟ್ರಾನ್ಸ್ ನಡುವಿನ ಈ ವಹಿವಾಟುಗಳನ್ನು ಸಂಬಂಧಿತ ಪಕ್ಷದ ವಹಿವಾಟುಗಳೆಂದು ಪರಿಗಣಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ ವಿ ಪ್ರದೀಪ್, ಮಹಾರಾಷ್ಟ್ರ ರಾಜ್ಯದಿಂದ ಮತ್ತೊಂದು ಆರ್ಡರ್ ಪಡೆಯಲು ನಾವು ಸಂತೋಷಪಡುತ್ತೇವೆ. ಇದರೊಂದಿಗೆ ನಮ್ಮ ಉಪಸ್ಥಿತಿಯು ಮತ್ತೊಂದು ನಗರವಾದ ಥಾಣೆಗೆ ವಿಸ್ತರಿಸಿತು. ನಾವು ಈಗಾಗಲೇ ಪುಣೆ, ಮುಂಬೈ ಮತ್ತು ನಾಗ್ಪುರದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರವೊಂದರಲ್ಲೇ, ನಮ್ಮ ಒಲೆಕ್ಟ್ರಾ ಇ-ಬಸ್‌ಗಳು ಮೂರು ಕೋಟಿ ಕಿಲೋಮೀಟರ್‌ಗಳನ್ನು ದಾಟಿವೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ನಮ್ಮ ಇ-ಬಸ್‌ಗಳು ಭಾರತದ ಎಲ್ಲಾ ಮೂಲೆಗಳಲ್ಲಿ ಸಂಚರಿಸುತ್ತಿವೆ . ಒಲೆಕ್ಟ್ರಾ ಇ-ಬಸ್‌ಗಳು ಭಾರತೀಯ ರಸ್ತೆಗಳಲ್ಲಿ ಏಳು ಕೋಟಿ ಕಿಲೋಮೀಟರ್‌ಗಳಷ್ಟು ಸಂಚರಿಸಿವೆ ಎಂದಿದ್ದಾರೆ.
ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ (ಎಂಇಐಎಲ್‌ನ ಸಮೂಹ ಕಂಪನಿ) ಬಗ್ಗೆ
2000 ರಲ್ಲಿ ಸ್ಥಾಪಿತವಾದ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ MEIL ಗ್ರೂಪ್ ನ ಭಾಗವಾಗಿದೆ. ಇದು 2015 ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸಿತು. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಸಿಲಿಕೋನ್ ರಬ್ಬರ್/ಕಂಪೋಸಿಟ್ ಇನ್ಸುಲೇಟರ್ ಗಳ ಭಾರತದಲ್ಲಿನ ಅತಿದೊಡ್ಡ ಉತ್ಪಾದನಾ ಸಂಸ್ಥೆಯಾಗಿದೆ.
Published On - 7:41 pm, Mon, 19 September 22