BIG NEWS: ಲೀಸೆಸ್ಟರ್‌ನಲ್ಲಿರುವ ಹಿಂದೂ ಧಾರ್ಮಿಕ ಸ್ಥಳಗಳ ಧ್ವಂಸ, ಭಾರತ ಖಂಡನೆ
ಲೀಸೆಸ್ಟರ್ ಕೋಮು ಹಿಂಸಾಚಾರಸದಲ್ಲಿ ಭಾರತವು ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಖಂಡಿಸುತ್ತದೆ, ಯುಕೆ ಲೀಸೆಸ್ಟರ್‌ನಲ್ಲಿ ಹಿಂದೂ ಧಾರ್ಮಿಕ ಆವರಣಗಳನ್ನು ಧ್ವಂಸಗೊಳಿಸಿದ್ದಾರೆ.
ಲೀಸೆಸ್ಟರ್ ಕೋಮು ಹಿಂಸಾಚಾರದಲ್ಲಿ ಭಾರತವು ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಖಂಡಿಸುತ್ತದೆ, ಯುಕೆ ಲೀಸೆಸ್ಟರ್‌ನಲ್ಲಿ ಹಿಂದೂ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅಲ್ಲಿಯ ಸರ್ಕಾರಕ್ಕೆ ಹೇಳಲಾಗಿದೆ ಎಂದು ಭಾರತ ತಿಳಿಸಿದೆ.
ಶನಿವಾರ ಯುನೈಟೆಡ್ ಕಿಂಗ್ಡಂನ ಲೀಸೆಸ್ಟರ್‌ನಲ್ಲಿ (Leicester )ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ನಡುವೆ ಗಲಭೆಯುಂಟಾಗಿದ್ದು ಪೊಲೀಸರು ಮತ್ತು ಸಮುದಾಯದ ಮುಖಂಡರು ಶಾಂತವಾಗಿರಲು ಜನತೆಗೆ ಕರೆ ನೀಡಿದ್ದಾರೆ. ಎರಡೂ ಸಮುದಾಯದ ಗುಂಪುಗಳ ನಡುವಿನ ಘರ್ಷಣೆ ತಪ್ಪಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಏಕಾಏಕಿ ಪ್ರತಿಭಟನೆ ನಡೆದಿದ್ದು ಉದ್ವಿಗ್ನ ಪರಿಸ್ಥಿತಿಯುಂಟಾಗಿದೆ ಎಂದು ಪೊಲೀಸರು ಹೇಳಿದರು. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂಸಾಚಾರ ಸೇರಿದಂತೆ ಹಲವಾರು ಘಟನೆಗಳು ಇತ್ತೀಚೆಗೆ ವರದಿ ಆಗಿತ್ತು. ನಾವು ಬೀದಿಗಳಲ್ಲಿ ನೋಡಿರುವುದು ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಹೊತ್ತಲ್ಲಿ ಸಮುದಾಯಗಳ ನಡುವೆ ವಾಗ್ವಾದ ಆಗುತ್ತದೆ. ಈ ಪಂದ್ಯಗಳಿಗೆ ಜನ ಸೇರುತ್ತಾರೆ, ಆದರೆ ಈವರೆಗೆ ಈ ರೀತಿ ಇಷ್ಟು ಕೆಟ್ಟದಾಗಿ ಏನೂ ಆಗಿರಲಿಲ್ಲ ಎಂದು ಲೀಸೆಸ್ಟರ್ ಮೂಲದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸುಲೇಮಾನ್ ನಗ್ಡಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. ನಮಗೆ ಶಾಂತಿ ಬೇಕು. ಈ ಉದ್ವಿಗ್ನತೆ ನಿಲ್ಲಬೇಕು. ಕೆಲವು ಅತೃಪ್ತ ಯುವಕರು ವಿನಾಶವನ್ನು ಉಂಟು ಮಾಡುತ್ತಿದ್ದಾರೆ. ಇದು ಕೊನೆಗೊಳ್ಳಬೇಕು ಎಂಬ ಸಂದೇಶವನ್ನು ನಾವು ನೀಡಬೇಕು ಪೋಷಕರು ವರ ಹಿರಿಯರು ಯುವ ಜನಾಂಗದೊಂದಿಗೆ ಮಾತನಾಡುವ ಮೂಲಕ ಇದನ್ನು ಮಾಡಲು ಪ್ರಯತ್ನಿಸಬೇಕು ಎಂದಿದ್ದಾರೆ.
ಲೀಸೆಸ್ಟರ್‌ನಾದ್ಯಂತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪ್ರತಿನಿಧಿಸುವ ಸಂಜೀವ್ ಪಟೇಲ್, ಶನಿವಾರ ರಾತ್ರಿ ಸಂಭವಿಸಿದ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನಾವು ನಗರದಲ್ಲಿ ಹಲವು ದಶಕಗಳಿಂದ ಸಾಮರಸ್ಯದಿಂದ ಬದುಕಿದ್ದೇವೆ. ಆದರೆ ಕಳೆದ ಕೆಲವು ವಾರಗಳಲ್ಲಿ ಜನರುಯಾವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕಿದೆ ಎಂದಿದ್ದಾರೆ.
ಇದೀಗ ಲೀಸೆಸ್ಟರ್ ಕೋಮು ಹಿಂಸಾಚಾರ ಭಾರತವು ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಖಂಡಿಸುತ್ತದೆ, ಯುಕೆ ಲೀಸೆಸ್ಟರ್‌ನಲ್ಲಿ ಹಿಂದೂ ಧಾರ್ಮಿಕ ಆವರಣಗಳನ್ನು ಧ್ವಂಸಗೊಳಿಸಿದ್ದಾರೆ. ಈ ವಿಚಾರವಾಗಿ ಭಾರತವು ವ್ಯಾಪಕವಾಗಿ ಖಂಡಿಸಿದೆ.