AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹ್ಸಾ ಅಮಿನಿ ಸಾವನ್ನು ವಿರೋಧಿಸಿ ಅಭಿಯಾನ ನಡೆಸುತ್ತಿರುವ ಇರಾನೀ ಮಹಿಳೆಯರು ಕೂದಲು ಕತ್ತರಿಸಿಕೊಂಡು ಹಿಜಾಬ್ ಗಳನ್ನು ಸುಡುತ್ತಿದ್ದಾರೆ!

ಆದರೆ, ಸಾವಿರಾರು ಪ್ರತಿಭಟನೆಕಾರರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಕೆಲ ವಿಡಿಯೋಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸುತ್ತಿರುವುದು ಸಹ ಕಾಣುತ್ತಿದೆ.

ಮಹ್ಸಾ ಅಮಿನಿ ಸಾವನ್ನು ವಿರೋಧಿಸಿ ಅಭಿಯಾನ ನಡೆಸುತ್ತಿರುವ ಇರಾನೀ ಮಹಿಳೆಯರು ಕೂದಲು ಕತ್ತರಿಸಿಕೊಂಡು ಹಿಜಾಬ್ ಗಳನ್ನು ಸುಡುತ್ತಿದ್ದಾರೆ!
ಪ್ರತಿಭಟಿಸುತ್ತಿರುವ ಇರಾನ್ ಮಹಿಳೆಯರು
TV9 Web
| Edited By: |

Updated on: Sep 20, 2022 | 8:03 AM

Share

ಇರಾನಿನ ಯುವತಿ 22-ವರ್ಷ-ವಯಸ್ಸಿನ ಮಹ್ಸಾ ಅಮಿನಿ (Mahsa Amini) ದಾರುಣ ಸಾವಿನ ನಂತರ ಆ ದೇಶದಲ್ಲಿ ಹಿಜಾಬ್ ಧರಿಸುವ ಕುರಿತು ವ್ಯಾಪಕ ಪ್ರತಿಭಟನೆಗಳು ಅರಂಭವಾಗಿದ್ದು ಇರಾನೀ ಮಹಿಳೆಯರು (Irani women) ಸಾರ್ವಜನಿಕವಾಗಿ ಅವುಗಳನ್ನು ಕಿತ್ತೊಗೆದು ಸುಟ್ಟು ಹಾಕುತ್ತಿದ್ದಾರೆ. ಹಿಜಾಬನ್ನು ತಲೆತುಂಬಾ ಹೊದ್ದುಕೊಂಡಿರದ ಕಾರಣಕ್ಕೆ ಇರಾನಿನ ನೈತಿಕ ಪೊಲೀಸ್ (moral police) ಅಮಿನಿ ಅವರನ್ನು ಬಂಧಿಸಿತ್ತು. ರಾಯಿಟರ್ ವರದಿಯೊಂದರ ಪ್ರಕಾರ ಅಮಿನಿ ಕಳೆದ ವಾರದ ಆರಂಭದಲ್ಲಿ ಬಂಧನಕ್ಕೊಳಗಾದ ಬಳಿಕ ಕೋಮಾಗೆ ಜಾರಿ ಶುಕ್ರವಾರದಂದು ಟೆಹ್ರಾನ್ ನಲ್ಲಿ ನಿಧನ ಹೊಂದಿದರು. ಅವರ ಸಾವು ಇರಾನ್ ನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಸೆರೆಮನೆಯಲ್ಲಿ ಆಕೆಯನ್ನು ಹೊಡೆದು ಸಾಯಿಸಲಾಯಿಗಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಪೊಲೀಸರು ಅಲ್ಲಗಳೆದಿದ್ದು ಅವರನ್ನು ಬೇರೆ ಮಹಿಳಾ ಕೈದಿಗಳೊಂದಿಗೆ ಇಡಲಾಗಿತ್ತು, ಅಸ್ವಸ್ಥಗೊಂಡ ಕಾರಣ ಮರಣ ಹೊಂದಿದರು ಎಂದು ಹೇಳಿದ್ದಾರೆ.

ಆದರೆ, ಸಾವಿರಾರು ಪ್ರತಿಭಟನೆಕಾರರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಕೆಲ ವಿಡಿಯೋಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸುತ್ತಿರುವುದು ಸಹ ಕಾಣುತ್ತಿದೆ.

ಮಹಿಳೆಯರು 7 ನೇ ವಯಸ್ಸಿನ ನಂತರ ಕಡ್ಡಾಯವಾಗಿ ಧಾರ್ಮಿಕ ತಲೆಹೊದಿಕೆಗಳನ್ನು ಧರಿಸಲೇಬೇಕೆಂಬ ಕಟ್ಟಳೆಯನ್ನು ಸಾಂಕೇತಿಕವಾಗಿ ವಿರೋಧಿಸುವ ಕ್ರಮವಾಗಿ ಕೆಲ ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿಕೊಂಡು ತಮ್ಮ ಹಿಜಾಬ್ ಗಳನ್ನು ಸುಡುತ್ತಿದ್ದಾರೆ.

ಇರಾನಿನ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಮಸೀಹ್ ಅಲಿನೆಜಾದ್ ಅವರು ಟ್ವೀಟೊಂದನ್ನು ಮಾಡಿ, ‘#ಮಹ್ಸಾ_ಅಮಿನಿ ಪೊಲೀಸರಿಂದ ಹತ್ಯೆಯಾಗಿದ್ದನ್ನು ವಿರೋಧಿಸಿ ಇರಾನ್ ಮಹಿಳೆಯರು ತಮ್ಮ ಕೂದಲು ಕತ್ತರಿಸಿಕೊಂಡು ಮತ್ತು ತಮ್ಮ ಹಿಜಾಬ್ ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 7ನೇ ವಯಸ್ಸಿನಿಂದ ನಾವು ಹಿಜಾಬ್ ಧರಿಸದೆ ಹೋದರೆ ನಮಗೆ ಶಾಲೆಗೆ ಹೋಗುವ ಅವಕಾಶವಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ, ಲಿಂಗ ತಾರತಮ್ಯದ ಈ ಆಳ್ವಿಕೆಯಿಂದ ನಾವು ಬೇಸತ್ತು ಹೋಗಿದ್ದೇವೆ,’ ಅಂತ ಹೇಳಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಮಸೀಹ್ ಅಲಿನೆಜಾದ್ ಅವರು, ‘ ನಿಜವಾದ ಇರಾನ್ ನಿಮಗೆ ಇಲ್ಲಿ ಕಾಣಿಸುತ್ತದೆ. ‘#ಮಹ್ಸಾ_ಅಮಿನಿ ಶವಸಂಸ್ಕಾರದ ನಂತರ ಇರಾನಿನ ಸಾಖೆಜ್ ಎಂಬಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಮೊದಲಿಗೆ ‘ಹಿಜಾಬ್ ಪೊಲೀಸರು’ 22-ವರ್ಷ ವಯಸ್ಸಿನ ಯುವತಿಯನ್ನು ಕೊಂದರು ಮತ್ತು ಈಗ ದುಃಖತಪ್ತ ಜನರ ಮೇಲೆ ಗುಂಡು ಹಾರಿಸುತ್ತಿದ್ದಾರೆ ಮತ್ತು ಅಶ್ರುವಾಯು ಸಿಡಿಸುತ್ತಿದ್ದಾರೆ,’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆದಾರರು ತಮ್ಮ ಹಿಜಾಬ್‌ಗಳನ್ನು ತೆಗೆದು ಮಹಿಳೆಯರಿಗೆ ನೈತಿಕತೆಯ ಪೊಲೀಸ್ ಘಟಕಗಳಿಂದ ಕಠಿಣ ಶಿಕ್ಷೆಯಾಗಿ ಕಂಡುಬರುವ ವೀಡಿಯೊಗಳನ್ನು ಶೇರ್ ಮಾಡುತ್ತಿದ್ದಾರೆ.

ಇರಾನ್ ನ ಶರಿಯಾ ಅಥವಾ ಇಸ್ಲಾಮಿಕ್ ಕಟ್ಟಳೆಗಳ ಪ್ರಕಾರ ಮಹಿಳೆಯರು ತಮ್ಮ ತಲೆಗೂದಲು ಮುಚ್ಚಬೇಕು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಇದನ್ನು ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಶಿಕ್ಷಿಸಲಾಗುತ್ತದೆ, ಜುಲ್ಮಾನೆ ವಿಧಿಸಲಾಗುತ್ತದೆ ಸೆರೆಮನೆಗೂ ಕಳಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರು ಕಠಿಣ ನಿಯಮ ಮತ್ತು ‘ಅನೈತಿಕ ವರ್ತನೆ’ ಅಂತ ಪೊಲೀಸರು ಕ್ರಮ ಜರುಗಿಸುತ್ತಿದ್ದರೂ ಹಿಜಾಬ್ ಗಳನ್ನು ತ್ಯಜಿಸಿರಿ ಎಂದು ಮಹಿಳೆಯರನ್ನು ಆಗ್ರಹಿಸುತ್ತಿದ್ದಾರೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ