ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ನಾಗರಿಕ ಸೇವಾ ಆಯೋಗ ಪರೀಕ್ಷೆಗೆ ಹಾಜರಾಗದೆ ಉತ್ತೀರ್ಣರಾಗಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ವಿಚಾರಕ್ಕೆ ಅಂಜಲಿ ಬಿರ್ಲಾ ಸಿಟ್ಟಾಗಿದ್ದಾರೆ.
ಟ್ರೋಲ್ ಮಾಡುವುದನ್ನು ತಡೆಯಲು ಒಂದು ಕಾನೂನು ತರಬೇಕು. ಸುಳ್ಳು ಸುದ್ದಿ ಹರಡುವವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು. ಸುಳ್ಳುಸುದ್ದಿಗೆ ಇಂದು ನಾನು ಸಂತ್ರಸ್ಥೆ ಆಗಿದ್ದೇನೆ. ನಾಳೆ ಮತ್ತೊಬ್ಬರು ಸಂತ್ರಸ್ಥರಾಗಬಹುದು ಎಂದು ಹೇಳಿದ್ದಾರೆ.
ನಾನು ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ನನ್ನ ಬಗ್ಗೆ ಹರಿದಾಡಿದ ಟ್ರೋಲ್ಗಳು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿವೆ. ನಾನು ನನ್ನ ಜೀವನದಲ್ಲಿ ಪ್ರಾಮಾಣಿಕಳಾಗಿದ್ದೇನೆ. ಆಪ್ತರಿಗೆ ನನ್ನ ಪರಿಶ್ರಮದ ಅರಿವಿದೆ ಎಂದು ಅಂಜಲಿ ಹೇಳಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಗಳನ್ನು ಕ್ರಮಬದ್ಧವಾಗಿ ಮಾಡಲಾಗುತ್ತದೆ. ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣರಾದರಷ್ಟೇ ನೀವು ಅಧಿಕಾರಿ ಆಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಪರೀಕ್ಷೆ ಬರೆದೇ ಪಾಸ್ ಆಗಿದ್ದೇನೆ ಎಂದು ಒತ್ತಿ ಹೇಳಿದ್ದಾರೆ.
ಅಂಜಲಿ ಬಿರ್ಲಾ ಮೂರು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಂಜಲಿ ಬಗ್ಗೆ ಸುಳ್ಳು ಸುದ್ದಿ ಹರಿದಾಡಿತ್ತು. ತಂದೆಯ ಪ್ರಭಾವ ಬಳಸಿ ಅಂಜಲಿ ಪರೀಕ್ಷೆ ಪಾಸಾಗಿದ್ದಾರೆ ಎನ್ನುವ ಪೋಸ್ಟ್ಗಳು ಕಾಣಿಸಿಕೊಂಡಿದ್ದವು.
ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್ಬುಕ್ನಿಂದ ಹೊಸ ಅಸ್ತ್ರ