ಗುರುನಾನಕ್​​ ಥಾಯ್ಲೆಂಡ್‌ಗೆ ಹೋಗಿದ್ದರು ಎಂದ ರಾಹುಲ್​​​; ಇದೆಲ್ಲ ಎಲ್ಲಿ ಓದಿದ್ದು? ಎಂದು ಕೇಳಿದ ಬಿಜೆಪಿ

ಗುರುನಾನಕ್ ಜಿಗೆ ಹೋಲಿಸಿದರೆ ನಾವು ಏನೂ ನಡೆಯಲಿಲ್ಲ. ಗುರುನಾನಕ್ ಜಿ ಅವರು ಮೆಕ್ಕಾ, ಸೌದಿ ಅರೇಬಿಯಾಕ್ಕೆ ಹೋಗಿದ್ದರು, ಅವರು ಥಾಯ್ಲೆಂಡ್ ಗೆ ಹೋಗಿದ್ದರು, ಅವರು ಶ್ರೀಲಂಕಾಕ್ಕೆ ಹೋಗಿದ್ದರು ಎಂದು ನಾನು ಎಲ್ಲೋ ಓದಿದ್ದೇನೆ. ಹಾಗಾಗಿ ಈ ದಿಗ್ಗಜರು ನಾವು ಹುಟ್ಟುವುದಕ್ಕಿಂತ ಮುನ್ನ ಭಾರತ್ ಜೋಡೋ ಮಾಡಿದರು ಅಲ್ಲವೇ?.

ಗುರುನಾನಕ್​​ ಥಾಯ್ಲೆಂಡ್‌ಗೆ ಹೋಗಿದ್ದರು ಎಂದ ರಾಹುಲ್​​​; ಇದೆಲ್ಲ ಎಲ್ಲಿ ಓದಿದ್ದು? ಎಂದು ಕೇಳಿದ ಬಿಜೆಪಿ
ರಾಹುಲ್ ಗಾಂಧಿ

Updated on: Jun 01, 2023 | 1:17 PM

ಗುರುನಾನಕ್ ಥಾಯ್ಲೆಂಡ್‌ಗೆ (Thailand) ಹೋಗಿದ್ದರು ಎಂಬ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ (BJP) ಸಿಖ್ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಕಾಂಗ್ರೆಸ್ (Congress) ನಾಯಕರಿಗೆ ಈ ಮಾಹಿತಿ ಎಲ್ಲಿಂದ ಸಿಕ್ಕಿದ್ದು ಎಂದು ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸಿರ್ಸಾ, ನಿಮ್ಮ ಮೂರ್ಖತನವನ್ನು ನಾವೆಷ್ಟು ಕ್ಷಮಿಸಬೇಕು? ಗುರುನಾನಕ್ ಥಾಯ್ಲೆಂಡ್‌ಗೆ ಹೋದರು ಎಂದು ನೀವು ಎಲ್ಲಿ ಓದಿದ್ದೀರಿ? ಧರ್ಮದ ವಿಷಯದಲ್ಲಿ ನೀವು ಸಂವೇದನಾಶೀಲ ಬುದ್ಧಿವಂತ ವ್ಯಕ್ತಿಯಂತೆ ಮಾತನಾಡಬೇಕು ಎಂದು ನಿರೀಕ್ಷಿಸಬಾರದಿತ್ತು ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ನಡೆದ ಸಮಾವೇಶವೊಂದರಲ್ಲಿ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ ಕುರಿತು ಮಾತನಾಡುತ್ತಿದ್ದಾಗ, ಗುರುನಾನಕ್ ಮತ್ತು ಅವರ ಬೋಧನೆಗಳನ್ನು ಉಲ್ಲೇಖಿಸಿದ್ದಾರೆ. ಗುರುನಾನಕ್ ಜಿಗೆ ಹೋಲಿಸಿದರೆ ನಾವು ಏನೂ ನಡೆಯಲಿಲ್ಲ. ಗುರುನಾನಕ್ ಜಿ ಅವರು ಮೆಕ್ಕಾ, ಸೌದಿ ಅರೇಬಿಯಾಕ್ಕೆ ಹೋಗಿದ್ದರು, ಅವರು ಥಾಯ್ಲೆಂಡ್ ಗೆ ಹೋಗಿದ್ದರು, ಅವರು ಶ್ರೀಲಂಕಾಕ್ಕೆ ಹೋಗಿದ್ದರು ಎಂದು ನಾನು ಎಲ್ಲೋ ಓದಿದ್ದೇನೆ. ಹಾಗಾಗಿ ಈ ದಿಗ್ಗಜರು ನಾವು ಹುಟ್ಟುವುದಕ್ಕಿಂತ ಮುನ್ನ ಭಾರತ್ ಜೋಡೋ ಮಾಡಿದರು ಅಲ್ಲವೇ?. ಹಾಗೆಯೇ ಕರ್ನಾಟಕದ ನನ್ನ ಗೆಳೆಯರಿಗೆ ಬಸವಣ್ಣ ಜೀ, ಕೇರಳದ ನನ್ನ ಗೆಳೆಯರಿಗೆ ನಾರಾಯಣಗುರು ಜೀ ಇದ್ದಾರೆ ಎಂದು ಹೇಳಬಲ್ಲೆ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ಈ ದಿಗ್ಗಜರು ಇದ್ದಾರೆ.ಇನ್ನೊಬ್ಬರ ಮಾತನ್ನು ಗೌರವದಿಂದ ಆಲಿಸು ಎಂದು ಹೇಳಿದ್ದರು ಆದಿ ಶಂಕರಾಚಾರ್ಯರು ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಗುರುನಾನಕ್ ಅವರ ಉದಾಸಿಗಳನ್ನು (ಧಾರ್ಮಿಕ ಪ್ರಯಾಣ) ಭಾರತ್ ಜೋಡೋ ಯಾತ್ರೆಯೊಂದಿಗೆ ಹೋಲಿಸಿದ ರಾಹುಲ್ ಗಾಂಧಿಯವರ ಹೇಳಿಕೆಗೆ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ವಕ್ತಾರ ಆರ್ ಪಿ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಸೋಲಿಸಲು ಕರ್ನಾಟಕ ತಂತ್ರವೇ ಮಾದರಿ: ರಾಹುಲ್ ಗಾಂಧಿ

ಜನಸಾಮಾನ್ಯರಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನ ಮತ್ತು ಮಾನವೀಯತೆಯನ್ನು ಹರಡುವ ಉದ್ದೇಶದಿಂದ ಮತ್ತು ಸತ್ಯವನ್ನು ವಿವರಿಸುವ ಉದ್ದೇಶದಿಂದ ನಡೆಸಲಾದ ಗುರುನಾನಕ್ ದೇವ್ ಜಿ ಅವರ ಉದಾಸಿ ಜತೆ ಜೋಡೋ ಯಾತ್ರೆಯನ್ನು ಹೋಲಿಸಿರುವ ರಾಹುಲ್ ಹೇಳಿಕೆಗೆ SGPCA ಅಮೃತಸರ ಅಥವಾ ಇತರ ಸಿಖ್ ಧರ್ಮಗುರುಗಳು ಪ್ರತಿಕ್ರಿಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಸಿಂಗ್.

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಆರ್‌ಎಸ್‌ಎಸ್-ಸಂಯೋಜಿತ ಪ್ರಕಟಣೆಯಾದ ಆರ್ಗನೈಸರ್‌ನಿಂದ ಆಯ್ದ ಭಾಗವನ್ನು ತೋರಿಸಿದ್ದು ನೋಡಿಲ್ಲಿ ಇದು ಗುರುನಾನಕ್, ಮೂರನೇ ಉದಾಸಿಯಲ್ಲಿ ಥಾಯ್ಲೆಂಡ್ ಹೋಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ರಾಹುಲ್ ಭಾಷಣ; ಕಾಂಗ್ರೆಸ್- ಬಿಜೆಪಿ ಜಟಾಪಟಿ

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸೆಂಗೋಲ್ ವಿಷಯವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಮುಂತಾದ ನೈಜ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅದದಕ್ಕಾಗಿಯೇ ಅವರು ರಾಜದಂಡದ ಕೆಲಸವನ್ನು ಮಾಡಬೇಕಾಯಿತು ಎಂದು ರಾಹುಲ್ ಹೇಳಿದ್ದಾರೆ. ಪ್ರಧಾನಿ ಮೋದಿಯವರನ್ನು ವ್ಯಂಗ್ಯವಾಡಿದ ರಾಹುಲ್ ಗಾಂಧಿ, ದೇಶವನ್ನು ಒಂದು ಗುಂಪಿನ ಜನರು ನಡೆಸುತ್ತಿದ್ದಾರೆ, ಅವರು ಎಲ್ಲವನ್ನೂ ತಿಳಿದಿದ್ದಾರೆ ಮತ್ತು ಪ್ರಧಾನಿ ಮೋದಿ ದೇವರೊಂದಿಗೆ ಕುಳಿತುಕೊಂಡರೆ, ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ದೇವರಿಗೇ ವಿವರಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಮಾಜಿ ಸಂಸದ ರಾಹುಲ್​ ಗಾಂಧಿಯನ್ನು ಹುಡುಕುತ್ತಿದ್ದೀರಾ, ಹಾಗಾದ್ರೆ ಅಮೆರಿಕವನ್ನು ಸಂಪರ್ಕಿಸಿ: ಸ್ಮೃತಿ ಇರಾನಿ

ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ದೇಶವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.. 2019 ರ ಮೋದಿ ಸರ್ ನೇಮ್ ಪ್ರಕರಣದಲ್ಲಿ ದೋಷಾರೋಪಣೆಯ ನಂತರ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡ ನಂತರ ರಾಹುಲ್ ಗಾಂಧಿಯವರ ಮೊದಲ ಅಧಿಕೃತ ವಿದೇಶಿ ಭೇಟಿ ಇದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ