ಚೆನ್ನೈಗೆ ಮರಳಿದ ಬಳಿಕ ಎಲ್ಲಿಗೆ ಹೋಗ್ತಾರೆ ಶಶಿಕಲಾ? ಜಯಲಲಿತಾ ನಿವಾಸಕ್ಕಂತೂ ಕಾಲಿಡುವಂತಿಲ್ಲ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:05 PM

ಶಶಿಕಲಾ ಚೆನ್ನೈಗೆ ಮರಳಿದ ಬಳಿಕ ವಾಸವಾಗಿರಲು ಒಟ್ಟು ಐದು ಸ್ಥಳಗಳನ್ನು ಅವರ ಕುಟುಂಬ ಗುರುತಿಸಿಟ್ಟಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಚೆನ್ನೈಗೆ ಮರಳಿದ ಬಳಿಕ ಎಲ್ಲಿಗೆ ಹೋಗ್ತಾರೆ ಶಶಿಕಲಾ? ಜಯಲಲಿತಾ ನಿವಾಸಕ್ಕಂತೂ ಕಾಲಿಡುವಂತಿಲ್ಲ!
ವಿ.ಕೆ.ಶಶಿಕಲಾ
Follow us on

ಚೆನ್ನೈ: ಜಯಲಲಿತಾ ಆಪ್ತೆ ಶಶಿಶಕಲಾ ಸೆರೆವಾಸದ ಅವಧಿ ಇಂದು ಮುಕ್ತಾಯವಾಗಿದೆ. ಆದರೆ ಶಶಿಕಲಾ ಇನ್ನೂ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಅವರಿಗೆ ಸದ್ಯ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಕೆಲವು ಕಾಲ ಅವರು ಕರ್ನಾಟಕದಲ್ಲೇ ಇರಲಿದ್ದಾರೆ.

ಆದರೆ ಕರ್ನಾಟಕದಿಂದ ಮರಳಿ ತಮಿಳುನಾಡಿಗೆ ಹೋದ ಬಳಿಕ ಶಶಿಕಲಾ ಎಲ್ಲಿಗೆ ಹೋಗಲಿದ್ದಾರೆ ಎಂಬ ಪ್ರಶ್ನೆಯೂ ಉದ್ಭವ ಆಗಲಿದೆ. ಮಾಜಿ ಸಿಎಂ ಜಯಲಲಿತಾ ನಿವಾಸವಾದ ವೇದ ನಿಲಯಂನ್ನು ಅಲ್ಲಿನ ಸರ್ಕಾರ ಈಗಾಗಲೇ ಸ್ವಾಧೀನ ಪಡಿಸಿಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿದೆ. ಅಲ್ಲದೆ, ಜನವರಿ 28ರಿಂದ ಅದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ. ಅಲ್ಲಿನ್ನು ವಾಸ ಸಾಧ್ಯವೇ ಇಲ್ಲ.

ಶಶಿಕಲಾ ಚೆನ್ನೈಗೆ ಮರಳಿದ ಬಳಿಕ ವಾಸವಾಗಿರಲು ಒಟ್ಟು ಐದು ಸ್ಥಳಗಳನ್ನು ಅವರ ಕುಟುಂಬ ಗುರುತಿಸಿಟ್ಟಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಅದರಲ್ಲೂ ಶಶಿಕಲಾ ಸಂಬಂಧಿ, ಸದ್ಯ ಪರಪ್ಪನ ಅಗ್ರಹಾರದಲ್ಲಿಯೇ ಇರುವ ಜೆ.ಇಳವರಸಿ ಪುತ್ರಿ ಕೃಷ್ಣಪ್ರಿಯಾ ಅವರ ಪಕ್ಕದ ಮನೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ 2016ರಲ್ಲಿ ಜೈಲು ಸೇರಿದ್ದ ಶಶಿಕಲಾ, 2017ರಲ್ಲಿ ಪೆರೋಲ್​ ಪಡೆದು 5ದಿನ ಕೃಷ್ಣಪ್ರಿಯಾ ಮನೆಯಲ್ಲೇ ವಾಸವಾಗಿದ್ದರು.

ವಿಕ್ಟೋರಿಯಾ ಆಸ್ಪತ್ರೆ ಮುಂದೆ ಜನ ಜಮಾವಣೆ.. ಇಂದೇ ಬಿಡುಗಡೆ ಆಗ್ತಾರಾ ವಿ.ಕೆ. ಶಶಿಕಲಾ?

Published On - 1:42 pm, Wed, 27 January 21