ಪಹಲ್ಗಾಮ್ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಆಪರೇಷನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್(Operation Mahadev) ನಡೆಸಿ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ಶ್ರೀನಗರದ ದಾಚೀಗಾಮ್ನಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹತ್ಯೆಗೈಯ್ಯಲಾಯಿತು. ಈ ಮೂವರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದೆ.

ನವದೆಹಲಿ, ಜುಲೈ 29: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್(Operation Mahadev) ನಡೆಸಿ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ಶ್ರೀನಗರದ ದಾಚೀಗಾಮ್ನಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹತ್ಯೆಗೈಯ್ಯಲಾಯಿತು. ಈ ಮೂವರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದೆ.
ಸೇನೆಯು ತಡರಾತ್ರಿಯವರೆಗೂ ಅವರ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ, ಆದರೆ ಸೇನಾ ಮೂಲಗಳ ಪ್ರಕಾರ, ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಸುಲೇಮಾನ್ ಅಲಿಯಾಸ್ ಆಸಿಫ್.ಇತರ ಇಬ್ಬರನ್ನು ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ.
ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಜಿಬ್ರಾನ್ ಭಾಗಿಯಾಗಿದ್ದ.ಎನ್‌ಕೌಂಟರ್ ಸ್ಥಳದಿಂದ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್, ಎರಡು ಎಕೆ ಸರಣಿಯ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಚೀಗಾಮ್ ಅರಣ್ಯ ಪ್ರದೇಶವು ಶ್ರೀನಗರದಿಂದ 25 ಕಿ.ಮೀ ದೂರದಲ್ಲಿದೆ.
ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಸ್ಯಾಟಲೈಟ್ ಫೋನ್‌ಗಳನ್ನು ಬಳಸುತ್ತಿರುವ ಬಗ್ಗೆ ವಿಶೇಷ ಪಡೆ 4 ಪ್ಯಾರಾ ಮತ್ತು 24 ರಾಷ್ಟ್ರೀಯ ರೈಫಲ್ಸ್ (RR) ಗೆ ಸೂಚನೆಗಳು ಬಂದಿದ್ದವು.ಕೂಡಲೇ ಆಪರೇಷನ್ ಮಹಾದೇವ್ ಪ್ರಾರಂಭಿಸಲಾಯಿತು. ಪ್ರದೇಶವನ್ನು ಸುತ್ತುವರಿಯಲಾಯಿತು. ಭಯೋತ್ಪಾದಕರ ಉಪಸ್ಥಿತಿ ದೃಢಪಡಿಸಿದ ನಂತರ, ಹೆಚ್ಚುವರಿ ಪಡೆಗಳನ್ನು ಕರೆಸಲಾಯಿತು ಮತ್ತು ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಸುತ್ತುವರಿದಿದ್ದರು.
ತಮ್ಮನ್ನು ಸುತ್ತುವರೆದಿರುವುದನ್ನು ನೋಡಿ, ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದರು. ಎನ್‌ಕೌಂಟರ್‌ನಲ್ಲಿ ಎರಡೂ ಕಡೆಯಿಂದ ಭಾರೀ ಗುಂಡಿನ ದಾಳಿ ನಡೆಯಿತು, ಇದರಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದರು. ಭಯೋತ್ಪಾದಕರು ಅವರ ಧರ್ಮವನ್ನು ಕೇಳಿ ಬಳಿಕ ಅವರನ್ನು ಕೊಲೆ ಮಾಡಲಾಗಿತ್ತು.
ಮತ್ತಷ್ಟು ಓದಿ: Operation Mahadev: ಶ್ರೀನಗರದಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಸೇರಿ ಮೂರು ಉಗ್ರರ ಹತ್ಯೆ
ಆಪರೇಷನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ? ಶ್ರೀನಗರದಲ್ಲಿ ಮಹಾದೇವ್ ಎಂಬ ಶಿಖರವಿದೆ ಇದು ಜಬರ್ವಾನ್‌ನ ಮುಖ್ಯ ಶಿಖರವಾಗಿದೆ. ಇದನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಲಿಡ್ವಾಸ್ ಮತ್ತು ಮುಲ್ನಾರ್, ಎರಡೂ ಇಲ್ಲಿಂದ ಗೋಚರಿಸುತ್ತವೆ. ಆದ್ದರಿಂದ ಕಾರ್ಯಾಚರಣೆಗೆ ಆಪರೇಷನ್ ಮಹಾದೇವ್ ಎಂದು ಹೆಸರಿಸಲಾಯಿತು. ಶಿವನು ಅಮರನಾಥ ಗುಹೆಯನ್ನು ತಲುಪಲು ಈ ಮಾರ್ಗವನ್ನು ತೆಗೆದುಕೊಂಡಿದ್ದ ಎನ್ನಲಾಗಿದೆ.
ಆಪರೇಷನ್ ಮಹಾದೇವ್ ಹೇಗೆ ನಡೆಯಿತು? ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿ ನಡೆದ ನಂತರ, ಕಾಶ್ಮೀರದ ಭದ್ರತಾ ಸಿಬ್ಬಂದಿ ಉಗ್ರರ ಹುಡುಕಾಟದಲ್ಲಿದ್ದರು. ಸುಮಾರು 14 ದಿನಗಳ ಹಿಂದೆ, ಅವರಿಗೆ ಅನುಮಾನಾಸ್ಪದ ಸಂವಹನ ಸಾಧನದ ಮೂಲಕ ಸುಳಿವು ಸಿಕ್ಕಿತ್ತು. ಚೀನಾದ ಅಲ್ಟ್ರಾ-ಹೈ-ಫ್ರೀಕ್ವೆನ್ಸಿ ರೇಡಿಯೋ ಸಂವಹನ ವ್ಯವಸ್ಥೆಯು ಸಕ್ರಿಯವಾಗಿರುವುದನ್ನು ಪಡೆಗಳು ಕಂಡುಹಿಡಿದವು.ಎಲ್‌ಇಟಿ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳಿಗಾಗಿ ಚೀನೀ ರೇಡಿಯೊವನ್ನು ಬಳಸುತ್ತದೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿಯೂ ಇದನ್ನು ಬಳಸಲಾಗಿದೆ ಎಂದು ವರದಿಯಾಗಿದೆ.
ಭಯೋತ್ಪಾದಕರು ಸುಮಾರು ಎರಡು ದಿನಗಳ ಕಾಲ ಸಂವಹನ ಸಾಧನವನ್ನು ಸಕ್ರಿಯಗೊಳಿಸಿದಾಗ, ಭದ್ರತಾ ಅಧಿಕಾರಿಗಳಿಗೆ ಅವರ ಸ್ಥಳವನ್ನು ಗುರುತಿಸಲು ಸಹಾಯವಾಯಿತು. ಅವರು ದಾಚೀಗಾಮ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು ಮತ್ತು ಸ್ಥಳೀಯ ಅಲೆಮಾರಿಗಳ ಸಹಾಯದಿಂದ, ಪಡೆಗಳು ಅವರ ಸ್ಥಳವನ್ನು ಗುರುತಿಸಲು ಸಾಧ್ಯವಾಯಿತು.
ನವೆಂಬರ್ 10, 2024 ರಂದು ದಾಚೀಗಾಮ್‌ನ ಅದೇ ಪ್ರದೇಶದಲ್ಲಿ ಒಂದು ಎನ್‌ಕೌಂಟರ್ ಕೂಡ ನಡೆದಿತ್ತು. ನಂತರ ಭಯೋತ್ಪಾದಕರು ಪರ್ವತ ಪ್ರದೇಶದ ಲಾಭ ಪಡೆದು ಪರಾರಿಯಾಗಿದ್ದರು. ಡಿಸೆಂಬರ್ 3, 2024 ರಂದು ಮತ್ತೆ ಎನ್‌ಕೌಂಟರ್ ನಡೆಯಿತು ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಜುನೈದ್ ಭಟ್ ಹತ್ಯೆ ಮಾಡಲಾಯಿತು.ಅಕ್ಟೋಬರ್ 20, 2024 ರಂದು ಗಂಡರ್ಬಾಲ್‌ನಲ್ಲಿ ಸುರಂಗ ನಿರ್ಮಾಣ ಸ್ಥಳದ ಬಳಿ ನಡೆದ ದಾಳಿಯಲ್ಲಿ ಜುನೈದ್ ಭಾಗಿಯಾಗಿದ್ದ.
ಸೇನೆ ಭಯೋತ್ಪಾದಕರನ್ನು ಕೊಲ್ಲುತ್ತದೆ ಎಂದು ನನಗೆ ತಿಳಿದಿತ್ತು: ನರ್ವಾಲ್ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ತಂದೆ ರಾಜೇಶ್ ನರ್ವಾಲ್ ಮಾತನಾಡಿ, ಸೈನ್ಯ, ಅರೆಸೈನಿಕ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯ ಧೈರ್ಯಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ. ಅವರು ತಮ್ಮ ಜೀವದ ಬಗ್ಗೆ ಕಾಳಜಿ ವಹಿಸದೆ ಭಯೋತ್ಪಾದಕರನ್ನು ಬೇಟೆಯಾಡಿದರು, ಅದು ಸುಲಭದ ಕೆಲಸವಲ್ಲ. ಇದು ನಮ್ಮ ಸೈನ್ಯಕ್ಕೆ ಸಿಕ್ಕ ದೊಡ್ಡ ಯಶಸ್ಸು. ನಮ್ಮ ಸೈನ್ಯವು ಒಂದು ದಿನ ಅವರನ್ನು ಕೊಲ್ಲುತ್ತದೆ ಎಂದು ನಾನು ಮೊದಲೇ ಹೇಳಿದ್ದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




