AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Mahadev: ಶ್ರೀನಗರದಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್​​ ಮೈಂಡ್ ಹಾಶಿಮ್ ಸೇರಿ ಮೂರು ಉಗ್ರರ ಹತ್ಯೆ

ಆಪರೇಷನ್ ಮಹಾದೇವ್(Operation Mahadev)​ ಅಡಿಯಲ್ಲಿ ಭಾರತೀಯ ಸೇನೆಯು ಪಹಲ್ಗಾಮ್ ದಾಳಿ(Pahalgam Attack)ಕೋರರಲ್ಲಿ ಮೂವರನ್ನು ಹತ್ಯೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಸುತ್ತುವರೆದಿದ್ದ ಸೇನೆಯು ಮೂವರು ಭಯೋತ್ಪಾದಕರನ್ನು ಕೊಂದಿದೆ.ಭಯೋತ್ಪಾದಕರನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಆಪರೇಷನ್ ಮಹಾದೇವ್ ಆರಂಭಿಸಿರುವ ಭದ್ರತಾ ಪಡೆಗಳು ಉಗ್ರರನ್ನು ಸದೆಬಡಿಯುತ್ತಿದೆ. ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದ ಮೂವರು ಭಯೋತ್ಪಾದಕರನ್ನು ಭಾರತೀಯ ಪಡೆಗಳು ಕೊಂದಿವೆ.

Operation Mahadev: ಶ್ರೀನಗರದಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್​​ ಮೈಂಡ್ ಹಾಶಿಮ್ ಸೇರಿ  ಮೂರು ಉಗ್ರರ ಹತ್ಯೆ
ಪಹಲ್ಗಾಮ್ ದಾಳಿ
ನಯನಾ ರಾಜೀವ್
|

Updated on:Jul 28, 2025 | 2:49 PM

Share

ಶ್ರೀನಗರ, ಜುಲೈ 28: ಆಪರೇಷನ್ ಮಹಾದೇವ್(Operation Mahadev)​ ಅಡಿಯಲ್ಲಿ ಭಾರತೀಯ ಸೇನೆಯು ಪಹಲ್ಗಾಮ್ ದಾಳಿ(Pahalgam Attack)ಕೋರರಲ್ಲಿ ಮೂವರನ್ನು ಹತ್ಯೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.  ಶ್ರೀನಗರದಲ್ಲಿ ಉಗ್ರರನ್ನು ಸದೆಬಡಿಯಲಾಗಿದೆ.  ದಾಳಿಯ ಮಾಸ್ಟರ್​ಮೈಂಡ್ ಹಾಶಿಮ್ ಮೂಸಾ ಸೇರಿ ಮೂವರನ್ನು ಹತ್ಯೆಗೈಯಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಸುತ್ತುವರೆದಿದ್ದ ಸೇನೆಯು ಮೂವರು ಭಯೋತ್ಪಾದಕರನ್ನು ಕೊಂದಿದೆ. ಭಯೋತ್ಪಾದಕರನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಆಪರೇಷನ್ ಮಹಾದೇವ್ ಆರಂಭಿಸಿರುವ ಭದ್ರತಾ ಪಡೆಗಳು ಉಗ್ರರನ್ನು ಸದೆಬಡಿಯುತ್ತಿದೆ.

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದ ಮೂವರು ಭಯೋತ್ಪಾದಕರನ್ನು ಭಾರತೀಯ ಪಡೆಗಳು ಕೊಂದಿವೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರಾದ ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ. ಪಹಲ್ಗಾಮ್ ಘಟನೆಯ ನಂತರ, ಸೇನೆಯು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಅವರ ತಲೆಗೆ ತಲಾ 20 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.

ಈ ಸಂದರ್ಭದಲ್ಲಿ, ಅವರ ಚಲನವಲನಗಳನ್ನು ಗುರುತಿಸಿದ ಸೇನೆಯು ಭಯೋತ್ಪಾದಕರನ್ನು ಸುತ್ತುವರೆದಿತ್ತು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ, 26/11 ಮುಂಬೈ ದಾಳಿಯಂತೆಯೇ ಎಲ್​ಇಟಿ-ಐಎಸ್​ಐ ಜಂಟಿ ಯೋಜನೆಯಾಗಿತ್ತು

ಭಾರತ ಆಪರೇಷನ್ ಸಿಂಧೂರ್ ಎಂಬ ಪ್ರತಿದಾಳಿ ನಡೆಸಿತು. ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು.

ಈ ದಾಳಿಯ ಜವಾಬ್ದಾರಿಯನ್ನು ಆರಂಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ (LET)ದ ಒಂದು ಭಾಗವೆಂದು ಪರಿಗಣಿಸಲಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿತು. ನಂತರ ಅದು ಈ ದಾಳಿಯಲ್ಲಿ ಯಾವುದೇ ಪಾತ್ರವಿರುವುದನ್ನು ನಿರಾಕರಿಸಿತು.

ಉಗ್ರರು ಏನಾದರು ಎನ್ನುವ ಪ್ರಶ್ನೆಗೆ ಸಿಕ್ಕಿದೆ ಉತ್ತರ ಕಾಂಗ್ರೆಸ್​​ನ ಹಿರಿಯ ನಾಯಕ ಪಿ ಚಿದಂಬರಂ, ಪಹಲ್ಗಾಮ್​ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದರು.  ಪಹಲ್ಗಾಮ್​ನಲ್ಲಿ ದಾಳಿ ನಡೆಸಿದವರು ಪಾಕಿಸ್ತಾನದವರು ಎಂದು ನೀವು ಹೇಗೆ ಹೇಳುತ್ತೀರಿ. ಅವರು ದೇಶೀಯ ಭಯೋತ್ಪಾದಕರು ಕೂಡ ಆಗಿರಬಹುದಲ್ಲವೇ?. ದಾಳಿ ನಡೆಸಿರುವ ಉಗ್ರರ ಬಗ್ಗೆ ಏನಾದರೂ ಸುಳಿವಿದೆಯೇ ಅವರು ಎಲ್ಲಿಗೆ ಹೋಗಿದ್ದಾರೆ ಎನ್ನುವುದನ್ನು ಯಾರೂ ಹೇಳುತ್ತಿಲ್ಲ ಎಂದಿದ್ದರು. ಎಂದಿನಂತೆ ಕಾಂಗ್ರೆಸ್​ ತನ್ನ ಚಾಳಿ ಮುಂದುವರೆಸಿದ್ದು ಮತ್ತೆ ಶತ್ರುಗಳಿಗೆ ಬೆಂಬಲವಾಗಿ ನಿಂತಿದೆ.  ಉಗ್ರರ ಕಥೆ ಏನಾಗಿದೆ ಎಂಬುದಕ್ಕೆ ಉತ್ತರ ಈ ಸಿಕ್ಕಿದೆ. ಉಗ್ರರ ಪೈಕಿ ಮೂವರು ಎನ್​​ಕೌಂಟರ್​​ಗೆ ಬಲಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:06 pm, Mon, 28 July 25

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ