Operation Sindoor: ಆಪರೇಷನ್ ಸಿಂಧೂರ್ ಪರಿಣಾಮ, ಭಾರತದ ವಿವಿಧೆಡೆ ವಿಮಾನ ಸಂಚಾರ ವ್ಯತ್ಯಯ; ಇಲ್ಲಿದೆ ಮಾಹಿತಿ

ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಕಾರ್ಯಚರಣೆ ಮೂಲಕ ಪಿಒಕೆಯ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ. ಏತನ್ಮಧ್ಯೆ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಬಂದ್ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ಇಂದಿನ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇನ್ನೂ ಎಲ್ಲೆಲ್ಲ ವಿಮಾನಗಳು ರದ್ದಾಗಿವೆ ಎಂಬ ಮಾಹಿತಿ ಇಲ್ಲಿದೆ.

Operation Sindoor: ಆಪರೇಷನ್ ಸಿಂಧೂರ್ ಪರಿಣಾಮ, ಭಾರತದ ವಿವಿಧೆಡೆ ವಿಮಾನ ಸಂಚಾರ ವ್ಯತ್ಯಯ; ಇಲ್ಲಿದೆ ಮಾಹಿತಿ
ಇಂಡಿಗೋ ವಿಮಾನ (ಸಾಂದರ್ಭಿಕ ಚಿತ್ರ)
Image Credit source: PTI

Updated on: May 07, 2025 | 8:13 AM

ನವದೆಹಲಿ, ಮೇ 7: ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ (Operation Sindoor)  ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ವೈಮಾನಿಕ ದಾಳಿ ನಡೆಸಿವೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ದಾಳಿಯ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಏತನ್ಮಧ್ಯೆ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಮುಚ್ಚಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ. ಇಂದಿನ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ಏತನ್ಮಧ್ಯೆ, ಇಂಡಿಗೊ ಏರ್​ಲೈನ್ಸ್ ಕೂಡ ಪ್ರಯಾಣ ಪ್ರಕಟಣೆ ಹೊರಡಿಸಿದೆ. ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಮಾನ ನಿಲ್ದಾಣ ತಲುಪುವ ಮೊದಲು ಪ್ರಯಾಣಿಕರು ಇಂಡಿಗೊದ ವೆಬ್‌ಸೈಟ್‌ನಲ್ಲಿ ಅಪ್​ಡೇಟ್​​ಗಳನ್ನು ತಿಳಿದುಕೊಮಡು ಬರಬೇಕು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಬಿಕಾನೆರ್‌ಗೆ ತೆರಳಿದ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ವೈಮಾನಿಕ ನಿರ್ಬಂಧಗಳು ಪರಿಣಾಮ ಬೀರುತ್ತವೆ ಎಂದು ಇಂಡಿಗೋ ಏರ್‌ಲೈನ್ಸ್ ಎಕ್ಸ್​ ಪೋಸ್ಟ್​​ನಲ್ಲಿ ಮಾಹಿತಿ ನೀಡಿದೆ. ವಿಮಾನ ನಿಲ್ದಾಣಕ್ಕೆ ಬರುವ ಮೊದಲು ಏರ್​ಲೈನ್ಸ್​ನ ಅಧಿಕೃತ ವೆಬ್​ಸೈಟ್​​ನಲ್ಲಿ ಪರಿಶೀಲಿಸಲು ವಿನಂತಿಸುತ್ತೇವೆ . ಮಂಗಳವಾರ ಸಂಜೆ ಭಾರತ ಸರ್ಕಾರವು ಪಾಕಿಸ್ತಾನ ಗಡಿಯಲ್ಲಿ ವೈಮಾನಿಕ ಕಾರ್ಯಾಚರಣೆಗಾಗಿ ನೋಟಾಮ್ (NOTAM) ಹೊರಡಿಸಿತ್ತು ಎಂದು ಇಂಡಿಗೋ ತಿಳಿಸಿದೆ.

ಇದನ್ನೂ ಓದಿ
ಜೈ ಹಿಂದ್, ಜಸ್ಟೀಸ್ ಸರ್ವ್ಡ್: ಆಪರೇಷನ್ ಬೆನ್ನಲ್ಲೇ ಭಾರತೀಯ ಸೇನೆ ಪೋಸ್ಟ್
ಆಪರೇಷನ್ ಸಿಂಧೂರ್: ಪ್ರಧಾನಿ ಮೋದಿ ನಿರಂತರ ಮೇಲ್ವಿಚಾರಣೆ
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?
ಆಪರೇಷನ್ ಸಿಂಧೂರ್, ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ

ಇದನ್ನೂ ಓದಿ: ಆಪರೇಷನ್ ಸಿಂಧೂರ್ ಎಂದರೇನು? ಪಾಕ್​ ನಿದ್ರೆಗೆಡಿಸಿದ ಭಾರತದ ದಾಳಿಗೆ ಈ ಹೆಸರಿಟ್ಟಿದ್ದೇಕೆ?

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯು ಹೇಡಿತನದ ದಾಳಿ ನಡೆಸಿ ಅಮಾಯಕ 26 ಮಂದಿಯ ಹತ್ಯೆ ಮಾಡಿತ್ತು. ಭಯೋತ್ಪಾದಕರು ಧರ್ಮವನ್ನು ಕೇಳಿ ಪುರುಷರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರು. ಇದಾದ 15 ದಿನಗಳ ನಂತರ, ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುದಾಣಗಳ ಮೇಲೆ ವಾಯುದಾಳಿ ನಡೆಸಿದೆ. ಭಾರತದ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಗಳು ನಾಶವಾಗಿವೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 am, Wed, 7 May 25