ಆಪರೇಷನ್ ಸಿಂಧೂರ್: 3 ನಿಮಿಷಗಳಲ್ಲಿ ಭಾರತೀಯ ಸೇನೆ 13 ಶತ್ರು ನೆಲೆಗಳನ್ನು ಧ್ವಂಸಗೊಳಿಸಿತ್ತು: ಸೇನಾ ಅಧಿಕಾರಿ

ಭಾರತವು ಕೇವಲ 3 ನಿಮಿಷಗಳಲ್ಲಿ 13 ಶತ್ರು ನೆಲೆಗಳನ್ನು ನಾಶಪಡಿಸಿತ್ತು ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್​ಡಿಟಿವಿ ವರದಿಗಾರರು ಆ ಸ್ಥಳಕ್ಕೆ ಭೇಟಿ ನೀಡಿದ್ದಾಗ, ಅಧಿಕಾರಿಯೊಬ್ಬರು ಮಾತನಾಡಿ, ಮೇ 6ರ ಮಧ್ಯರಾತ್ರಿ ನೀವು ಈಗ ನಿಂತಿರುವ ಇದೇ ಸ್ಥಳದಲ್ಲಿ ಶತ್ರುಗಳು ಎರಡು ಮಾರ್ಟರ್ ಬಾಂಬ್‌ಗಳನ್ನು ಹಾರಿಸಿದ್ದರು. ಶತ್ರುಗಳು ನಮಗೆ ಗುಂಡು ಹಾರಿಸಿದ ಮೂರು ನಿಮಿಷಗಳಲ್ಲಿ, ನಾವು ಶತ್ರುಗಳ 13 ಪೋಸ್ಟ್‌ಗಳನ್ನು (ಬಂಕರ್‌ಗಳು) ನಾಶಪಡಿಸಿದ್ದೆವು ಎಂದಿದ್ದಾರೆ.

ಆಪರೇಷನ್ ಸಿಂಧೂರ್: 3 ನಿಮಿಷಗಳಲ್ಲಿ ಭಾರತೀಯ ಸೇನೆ 13 ಶತ್ರು ನೆಲೆಗಳನ್ನು ಧ್ವಂಸಗೊಳಿಸಿತ್ತು: ಸೇನಾ ಅಧಿಕಾರಿ
ಭಾರತೀಯ ಸೇನೆ
Image Credit source: Hindustan Times

Updated on: May 21, 2025 | 11:28 AM

ನವದೆಹಲಿ, ಮೇ 21: ಪಾಕಿಸ್ತಾನ(Pakistan)ದ ಗುಂಡಿನ ದಾಳಿಗೆ ಭಾರತೀಯ ಸೇನೆ(Indian Army)ಯು ಪ್ರತಿ ದಾಳಿ ನಡೆಸಿ ಕೇವಲ 3 ನಿಮಿಷಗಳಲ್ಲಿ 13 ಶತ್ರುಗಳ ನೆಲೆಗಳನ್ನು ಧ್ವಂಸಗೊಳಿಸಿತ್ತು ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್​ಡಿಟಿವಿ ಈ ಕುರಿತು ವರದಿ ಮಾಡಿದೆ. ಎನ್​ಡಿಟಿವಿ ವರದಿಗಾರರು ಆ ಸ್ಥಳಕ್ಕೆ ಭೇಟಿ ನೀಡಿದ್ದಾಗ, ಅಧಿಕಾರಿಯೊಬ್ಬರು ಮಾತನಾಡಿ, ಮೇ 6ರ ಮಧ್ಯರಾತ್ರಿ ನೀವು ಈಗ ನಿಂತಿರುವ ಇದೇ ಸ್ಥಳದಲ್ಲಿ ಶತ್ರುಗಳು ಎರಡು ಮಾರ್ಟರ್ ಬಾಂಬ್‌ಗಳನ್ನು ಹಾರಿಸಿದ್ದರು. ಶತ್ರುಗಳು ನಮಗೆ ಗುಂಡು ಹಾರಿಸಿದ ಮೂರು ನಿಮಿಷಗಳಲ್ಲಿ, ನಾವು ಶತ್ರುಗಳ 13 ಪೋಸ್ಟ್‌ಗಳನ್ನು (ಬಂಕರ್‌ಗಳು) ನಾಶಪಡಿಸಿದ್ದೆವು ಎಂದಿದ್ದಾರೆ.

ಪ್ರತಿಯೊಬ್ಬ ಸೈನಿಕರೂ ಸಿದ್ಧರಿದ್ದರು, ಕಮಾಂಡರ್ ಹಾಗೂ ಉನ್ನತ ಕೇಂದ್ರ ಕಚೇರಿಯ ಆದೇಶಕ್ಕಾಗಿ ಕಾಯುತ್ತಿದ್ದರು, ಬಂದ ಕೂಡಲೇ ಶತ್ರುಗಳ ಮೇಲೆ ಪ್ರತಿದಾಳಿ ನಡೆಸಲಾಯಿತು. ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಂತಹ ಯಾವುದೇ ಆಕ್ರಮಣ ನಡೆದರೆ ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಎಚ್ಚರಿಕೆಯ ಸ್ಥಿತಿಯಲ್ಲಿರುತ್ತವೆ.

ಮೇ 6 ಮತ್ತು 7 ರ ಮಧ್ಯರಾತ್ರಿ ಶತ್ರು ಮಾಡಿದ ತಪ್ಪಿಗೆ, ಮತ್ತೆ ಇಂತಹ ಕೃತ್ಯ ಎಸಗುವ ಮೊದಲು 100 ಬಾರಿ ಯೋಚಿಸುವ ರೀತಿಯಲ್ಲಿ ಅವರಿಗೆ ಶಿಕ್ಷೆ ಕೊಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೇ 7 ರ ಬೆಳಗಿನ ಜಾವ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಎಂಬ ಕಾರ್ಯಾಚರಣೆಯ ಮೂಲಕ ಕೇಂದ್ರೀಕೃತ, ನಿಖರವಾದ ದಾಳಿಗಳನ್ನು ನಡೆಸಿತು.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಮತ್ತಷ್ಟು ಓದಿ: ಭಾರತ ಆಯ್ತು ಈಗ ಅಫ್ಘಾನಿಸ್ತಾನವೂ ನೀರು ನಿಲ್ಲಿಸಿದ್ರೆ ಪಾಕ್ ಸ್ಥಿತಿ ಅಧೋಗತಿ

ಈ ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ಈ ಸೇನಾ ಕಾರ್ಯಾಚರಣೆ ನಡೆಸಲಾಯಿತು.

ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಆಪರೇಷನ್ ಸಿಂಧೂರ್ ನಂತರ, ಭಾರತ ಮತ್ತು ಪಾಕಿಸ್ತಾನ ನಾಲ್ಕು ದಿನಗಳ ಸಂಘರ್ಷದಲ್ಲಿ ತೊಡಗಿದ್ದವು, ಮೇ 10 ರಂದು ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದಕ್ಕೆ ಬರಲಾಯಿತು.

ಇದೀಗ ಭಾರತವು ಜಗತ್ತಿನ ಮುಂದೆ ಪಾಕಿಸ್ತಾನ ಮುಖವಾಡ ಕಳಚಲು ಸರ್ವಪಪಕ್ಷ ಸಂಸದರ ನಿಯೋಗವನ್ನು ವಿಶ್ವದಅದ್ಯಂತ ಕಳುಹಿಸುತ್ತಿದೆ. ಒಟ್ಟು 7 ನಿಯೋಗಗಳನ್ನು ರಚಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ