
ನವದೆಹಲಿ, ಮೇ 7: ಬಾಲಾಕೋಟ್ ಏರ್ಸ್ಟ್ರೈಕ್ ನಡೆದಾಗ, ಹಾಗೂ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಪಾಕಿಸ್ತಾನದಲ್ಲಿ ಏನೂ ಆಗೇ ಇಲ್ಲ ಎಂದು ಹೇಳಲಾಗಿತ್ತು. ಈ ಬಾರಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಈಗಾಗಲೇ ಸಾಕ್ಷ್ಯಗಳು ದೊರಕಿವೆ. ಪಾಕಿಸ್ತಾನದ ಹಲವು ಮಾಧ್ಯಮಗಳಲ್ಲಿ ದೃಶ್ಯಗಳು ಪ್ರಸಾರವಾಗಿವೆ. ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮವಾದ ಸಿಎಎನ್ನ ವರದಿಗಾರರೊಬ್ಬರು ಖುದ್ದಾಗಿ ಇದನ್ನು ವರದಿ ಮಾಡಿದ್ದಾರೆ.
ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲೇ ಬಹಳ ಜನರು ಸ್ಫೋಟಗಳ ಶಬ್ದವನ್ನು ಕೇಳಿದ್ದಾರೆ. ಇಲ್ಲಿಂದ 100 ಕಿಮೀ ದೂರದಲ್ಲಿರುವ ತಮ್ಮ ಕ್ಯಾಮರಾಮ್ಯಾನ್ (ಜಾವೆದ್) ಅವರ ಮನೆ ಅಲುಗಾಡಿತ್ತು ಎಂದು ಸಿಎನ್ಎನ್ ವರದಿಗಾರರು ಹೇಳಿದ್ದಾರೆ. ಪಾಕಿಸ್ತಾನೀಯರು ತಮ್ಮ ಮೊಬೈಲ್ಗಳಲ್ಲಿ ಕೆಲ ದಾಳಿ ಮತ್ತು ಸ್ಫೋಟ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳೂ ಕೂಡ ಇಂಟರ್ನೆಟ್ನಲ್ಲಿ ಲಭ್ಯ ಇವೆ.
ಇದನ್ನೂ ಓದಿ: ಅಭಿ ಪಿಕ್ಚರ್ ಬಾಕಿ ಹೈ ಎಂದ ಮನೋಜ್ ನರವನೆ; ದೊಡ್ಡ ಪ್ರಹಾರದ ಮುನ್ಸೂಚನೆ ಕೊಟ್ಟರಾ ಮಾಜಿ ಸೇನಾ ಮುಖ್ಯಸ್ಥ?
ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ ಕೂಡ ಭಾರತದ ವೈಮಾನಿಕ ದಾಳಿಯನ್ನು ತಳ್ಳಿ ಹಾಕಿಲ್ಲ. ಆದರೆ, ಉಗ್ರರ ನೆಲೆಗಳ ಮೇಲೆ ದಾಳಿಯಾಗಿಲ್ಲ ಎಂದಷ್ಟೇ ಹೇಳುತ್ತಿವೆ.

ಪಾಕಿಸ್ತಾನದ ಮಾಧ್ಯಮ ವಿಭಾಗವು ಹೇಳಿಕೆ ನೀಡಿದ್ದು, ಪಂಜಾಬ್ ಪ್ರಾಂತ್ಯದ ಬಹವಾಲಪುರ್, ಮುಜಾಫರಬಾದ್ನ ಕೋಟ್ಲಿ ಮತ್ತು ಪಾಕ್ ಆಡಳಿತದ ಕಾಶ್ಮೀರದ ಮುಜಾಫರ್ಬಾದ್ನ ಮೂರು ಸ್ಥಗಳ ಮೇಲೆ ವಾಯು ದಾಳಿ ನಡೆದಿದೆ ಎಂದು ಹೇಳಿಕೆ ನೀಡಿದೆ. ಇದು ಭಾರತದಿಂದ ಆಪರೇಷನ್ ಸಿಂದೂರ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷ್ಯ.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ
ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸಂಯೋಜಿತವಾಗಿ ನಡೆಸಿದ ಆಪರೇಷನ್ ಸಿಂದೂರದಲ್ಲಿ ಭಾರತದ ವಿಮಾನಗಳು ಪಾಕ್ ಪ್ರದೇಶಕ್ಕೆ ನುಗ್ಗಿ 9 ಸ್ಥಳಗಳ ಮೇಲೆ ಸ್ಟ್ರೈಕ್ ಮಾಡಿವೆ. ಆಪರೇಷನ್ ಸಿಂದೂರ ಯಶಸ್ವಿಯಾಗಿದೆ ಎಂದು ಸೇನೆ ಹೇಳಿಕೊಂಡಿದೆ. ಆದರೆ, ಭಾರತದ ಆಪರೇಷನ್ ಸಿಂಧೂರಕ್ಕೆ ಪಾಕಿಸ್ತಾನವೂ ತಕ್ಕ ಉತ್ತರ ನೀಡಲಿದೆ. ಯಾವಾಗ, ಹೇಗೆ ಎಂಬುದನ್ನು ಈಗ ಹೇಳುವುದಿಲ್ಲ ಎಂದು ಪಾಕ್ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Wed, 7 May 25