ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ಇಂದು ಬೆಳಿಗ್ಗೆ ಕ್ರೈಸ್ತ ಧರ್ಮದ ಜನರಿಗೆ ಎಕ್ಸ್ನಲ್ಲಿ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದರು. ಇದರ ಜತೆಗೆ ರಾಷ್ಟ್ರಪತಿ ಕೂಡ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದೀಗ ಕ್ರಿಸ್ಮಸ್ ಪ್ರಯುಕ್ತ ದೆಹಲಿಯ 7 ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿ ಕ್ರಿಸ್ಮಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕ್ರೈಸ್ತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಕೆಲವು ವರ್ಷಗಳ ಹಿಂದೆ ಪೋಪ್ ಅವರನ್ನು ಭೇಟಿಯಾಗಿದ್ದೆ, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದೇವು. ಇನ್ನು ಇಂದು ಯೇಸ್ ಅವರು ಜನಿಸಿದ ದಿನ, ಇದೊಂದು ಪ್ರಮುಖ ದಿನವಾಗಿದೆ. ಹಾಗಾಗಿ ಇದನ್ನು ಕ್ರಿಸ್ಮಸ್ ಎಂದು ಆಚರಣೆ ಮಾಡುತ್ತೇವೆ.
ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರವನ್ನು ನಂಬುತ್ತೇವೆ. ನಮ್ಮ ಸರ್ಕಾರದ ಎಲ್ಲ ಯೋಜನೆಗಳು ಸಕಾಲದಲ್ಲಿ ಎಲ್ಲರಿಗೂ ತಲುಪುವಂತೆ ಮಾಡಿದ್ದೇವೆ. ಅದರಿಂದ ಯಾರು ವಂಚಿತರಾಗಬಾರದು ಎಂದು ಹೇಳಿದರು.
My request to the Christian community, especially those associated with health and education. pic.twitter.com/XfGQnWLthN
— Narendra Modi (@narendramodi) December 25, 2023
ಇಂದು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಯೋಜನಗಳು ಕ್ರಿಶ್ಚಿಯನ್ ಸಮುದಾಯದ ಅನೇಕ ಜನರನ್ನು, ವಿಶೇಷವಾಗಿ ಬಡವರು ಮತ್ತು ವಂಚಿತರನ್ನು ತಲುಪುತ್ತಿದೆ ಎಂದರು. ಯೇಸು ಕ್ರಿಸ್ತನು ಸಹಾನುಭೂತಿ ಮತ್ತು ಸೇವೆಯ ಮೌಲ್ಯಗಳನ್ನು ಜೀವಿಸಿದರು. ಎಲ್ಲರಿಗೂ ನ್ಯಾಯವಿರುವ ಸಮಾಜವನ್ನು ರಚಿಸಲು ಅವರು ಶ್ರಮಿಸಿದರು.
ಇದನ್ನೂ ಓದಿ: ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು
ಭಾರತ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವತ್ತ ಸಾಗುತ್ತಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯೊಂದಿಗೆ ಸರ್ಕಾರವು ತನ್ನ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ಅದಕ್ಕೆ ವೇಗವನ್ನು ಕೇಂದ್ರ ಸರ್ಕಾರ ನೀಡಿದೆ. ಕ್ರಿಸ್ಮಸ್ಗೆ ಉಡುಗೊರೆ ನೀಡುವ ಕ್ರಮ ಇದೆ. ಹಾಗಾಗಿ ನಾವು ಮುಂದಿನ ಪೀಳಿಗೆಗೆ ಒಳ್ಳೆಯ ಮತ್ತು ಉತ್ತಮವಾದ ಉಡುಗೊರೆಯನ್ನು ನೀಡಬೇಕಿದೆ, ಅವರಿಗೊಂದು ಉತ್ತಮ ಹಾದಿಯನ್ನು ಮತ್ತು ಮಾರ್ಗದರ್ಶವನ್ನು ನೀಡಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Mon, 25 December 23