
ಪಲನಾಡು: ವಿಷಾಹಾರ ಸೇವಿಸಿ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಆಂಧ್ರಪ್ರದೇಶದ ಪಲ್ನಾಡು (Palnadu, Andhra Pradesh) ಜಿಲ್ಲೆಯಲ್ಲಿ ಸಂಭವಿಸಿದೆ. ಜಿಲ್ಲೆಯ ಸಟ್ಟೇನಪಲ್ಲಿ ತಾಲೂಕಿನ ರಾಮಕೃಷ್ಣಾಪುರಂ ಗುರುಕಲ ಶಾಲೆಯಲ್ಲಿ ಆಹಾರ ಸೇವಿಸಿದ ಬಳಿಕ ಮಕ್ಕಳು ಅನಾರೋಗ್ಯಪೀಡಿತರಾಗಿದ್ದಾರೆ.
ಶಾಲೆಯಲ್ಲಿ ಮಕ್ಕಳು ಬೆಳಗ್ಗೆ ತಿಂಡಿಗೆ ಟೊಮೆಟೋ ರೈಸ್ ಮತ್ತು ಕಡಲೆಚಟ್ನಿ, ಮಧ್ಯಾಹ್ನ ಚಿಕನ್ ಊಟ ತಿಂದಿದ್ದಾರೆ. ನಂತರ ನೂರಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆ ನೋವು ಮತ್ತು ತಲೆಸುತ್ತು ಕಾಣಿಸಿತ್ತು. ಹಲವರಿಗೆ ಬೇಧಿ ಕೂಡ ಆಗಿದೆ. ಕೆಲ ಮಕ್ಕಳು ನಿತ್ರಾಣಗೊಂಡು ಪ್ರಜ್ಞಾಶೂನ್ಯರೂ ಆಗಿದ್ದರು. ಆ ಬಳಿಕ ಇವರನ್ನು ಸಟ್ಟೇನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: Jagan Plane: ಆಂಧ್ರ ಸಿಎಂ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ
ವೈದ್ಯರ ಪ್ರಕಾರ ಮಕ್ಕಳಿಗೆ ಫುಡ್ ಪಾಯ್ಸನ್ ಆಗಿದೆ. ಪ್ರಾಣಾಪಾಯ ಇಲ್ಲ. ಎಲ್ಲಾ ಅಸ್ವಸ್ಥ ಮಕ್ಕಳು ಸುರಕ್ಷಿತವಾಗಿದ್ದು, ಪೋಷಕರು ಕಳವಳ ಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ.
ಆಂಧ್ರದಲ್ಲಿ ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಫುಡ್ ಪಾಯ್ಸನಿಂಗ್ (Food Poisoning) ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ನವೆಂಬರ್ನಲ್ಲಿ ಶ್ರೀಕಾಕುಲಂ ಜಿಲ್ಲೆಯ ಎಟ್ಚೇರ್ಲಾ ಎಂಬಲ್ಲಿನ ಆರ್ಜಿಯುಕೆಟಿ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ಗಳಲ್ಲಿ ಆಹಾರ ಸೇವಿಸಿದ ಬಳಿಕ ಮುನ್ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು.
Published On - 8:48 am, Tue, 31 January 23