ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 77 ಪ್ರತಿಶತದಷ್ಟು ಕೊವಿಡ್ ಪ್ರಕರಣಗಳನ್ನು(Covid-19) ಹತ್ತು ರಾಜ್ಯಗಳು ವರದಿ ಮಾಡಿವೆ ಎಂದು ಆರೋಗ್ಯ ಸಚಿವಾಲಯ (Union Health Ministry) ಗುರುವಾರ ತಿಳಿಸಿದೆ. ಕೊವಿಡ್ ಲಸಿಕೆಯಿಂದಾಗಿ ದೇಶದಲ್ಲಿ ಕೊವಿಡ್ ರೋಗಿಗಳಲ್ಲಿ ಕಡಿಮೆ ಆಸ್ಪತ್ರೆಗೆ ದಾಖಲು ಮತ್ತು ರೋಗದ ತೀವ್ರತೆ ಕಡಿಮೆ ಎಂದು ಸಚಿವಾಲಯ ಹೇಳಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ 3 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಆಂಧ್ರಪ್ರದೇಶ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ.ಕಂಟೇನ್ ಮೆಂಟ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಾವು ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಜನವರಿ 26ರ ಮಾಹಿತಿ ಪ್ರಕಾರ 551 ಜಿಲ್ಲೆಗಳು ಶೇ 5ಕ್ಕಿಂತ ಹೆಚ್ಚು ಪ್ರಕರಣಗಳ ಧನಾತ್ಮಕತೆಯನ್ನು ವರದಿ ಮಾಡುತ್ತಿವೆ. ಕಳೆದ ವಾರದಲ್ಲಿ ದೇಶದಾದ್ಯಂತ ಒಟ್ಟಾರೆ ಕೇಸ್ ಪಾಸಿಟಿವಿಟಿ ದರವು ಸುಮಾರು ಶೇ 17.75 ಆಗಿತ್ತು. 11 ರಾಜ್ಯಗಳಲ್ಲಿ 50,000 ಕ್ಕೂ ಹೆಚ್ಚು ಕೊವಿಡ್ ಸಕ್ರಿಯ ಪ್ರಕರಣಗಳಿವೆ, 14 ರಾಜ್ಯಗಳಲ್ಲಿ 10,000-50,000 ಸಕ್ರಿಯ ಪ್ರಕರಣಗಳು ಮತ್ತು 11 ರಾಜ್ಯಗಳಲ್ಲಿ 10,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ. ಭಾರತದಲ್ಲಿ ಒಟ್ಟಾರೆ ಕೊವಿಡ್ -19 ಪಾಸಿಟಿವಿಟಿ ದರವು ಶೇಕಡಾ 17 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಅಧಿಕಾರಿ ಲವ್ ಅಗರವಾಲ್ , ಭಾರತದಲ್ಲಿ ಒಟ್ಟಾರೆ ಪ್ರಕರಣಗಳು ಇನ್ನೂ 2 ಲಕ್ಷಕ್ಕಿಂತ ಹೆಚ್ಚಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಎನ್ ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್ ಅವರು ಈಗ ಭಾರತದಲ್ಲಿ ಒಮಿಕ್ರಾನ್ ಸಬ್-ವೇರಿಯಂಟ್ BA.2 ಹೆಚ್ಚು ಪ್ರಚಲಿತದಲ್ಲಿದೆ ಎಂದು ತಿಳಿಸಿದರು. ಈ ಹಿಂದೆ, ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಬಿಎ.1 ಹೆಚ್ಚು ಪ್ರಬಲವಾಗಿತ್ತು.
ಏತನ್ಮಧ್ಯೆ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಒಡಿಶಾ, ಹರಿಯಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ದಿನನಿತ್ಯದ ಕೇಸ್ ಲೋಡ್‌ನಲ್ಲಿ ಸ್ಥಿರವಾದ ಇಳಿಕೆ ದಾಖಲಾಗಿದೆ. ಸಚಿವಾಲಯವು ಪುಣೆ, ಎರ್ನಾಕುಲಂ ಮತ್ತು ನಾಗ್ಪುರವನ್ನು ಕಾಳಜಿಯ ಜಿಲ್ಲೆಗಳೆಂದು ಗುರುತಿಸಿದೆ.
7ನೇ ಮೇ 2021 ರಂದು ಕೊವಿಡ್-19ನ ಎರಡನೇ ಅಲೆಯ ಉತ್ತುಂಗದಲ್ಲಿ, 4,14,188 ಹೊಸ ಪ್ರಕರಣಗಳು ಮತ್ತು 3679 ಸಾವುಗಳು ಸಂಭವಿಸಿವೆ. ಕೇವಲ ಶೇ 3 ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದರು. 21 ಜನವರಿ 2022 ರಂದು 3,47,254 ಹೊಸ ಪ್ರಕರಣಗಳು ಮತ್ತು 435 ಸಾವುಗಳು ಸಂಭವಿಸಿದ. ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಈಗ ಶೇ 75 ಎಂದು ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ ಇದುವರೆಗೆ ಶೇ 95 ಮೊದಲ ಡೋಸ್ ವ್ಯಾಕ್ಸಿನೇಷನ್ ಕವರೇಜ್ ಮತ್ತು ಶೇ 74ಎರಡನೇ ಡೋಸ್ ಕವರೇಜ್ ಆಗಿದೆ. 97.03 ಲಕ್ಷ ಅರ್ಹ ಜನಸಂಖ್ಯೆಯು ‘ಮುಂಜಾಗ್ರತಾ ಡೋಸ್’ ಸ್ವೀಕರಿಸಿದೆ.
16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೊವಿಡ್-19 ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೊಂದಿರುವ 15-18 ವರ್ಷದೊಳಗಿನವರ ಲಸಿಕೆ ಸರಾಸರಿ ರಾಷ್ಟ್ರೀಯ ಸರಾಸರಿ ವ್ಯಾಕ್ಸಿನೇಷನ್‌ಗಿಂತ ಹೆಚ್ಚು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಏತನ್ಮಧ್ಯೆ, ಭಾರತದಲ್ಲಿ ಗುರುವಾರ 2,86,384 ಹೊಸ ಕೊವಿಡ್ -19 ಪ್ರಕರಣಗಳು ಮತ್ತು ಕಳೆದ 24 ಗಂಟೆಗಳಲ್ಲಿ 573 ಸಾವುಗಳು ವರದಿಯಾಗಿವೆ.
ಇದನ್ನೂ ಓದಿ: ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ಲಭ್ಯವಾಗಲಿದೆ ಕೊವಾಕ್ಸಿನ್, ಕೊವಿಶೀಲ್ಡ್ ಲಸಿಕೆ
Published On - 5:10 pm, Thu, 27 January 22