ಉತ್ತರಾಖಂಡದಲ್ಲಿ ಆಪರೇಷನ್ ಕಾಲನೇಮಿ; ಬಾಂಗ್ಲಾದೇಶಿ ಪ್ರಜೆ ಸೇರಿದಂತೆ 300ಕ್ಕೂ ಹೆಚ್ಚು ನಕಲಿ ಸಾಧುಗಳ ಬಂಧನ
ಆಪರೇಷನ್ ಕಾಲನೇಮಿ ಅಡಿಯಲ್ಲಿ ಉತ್ತರಾಖಂಡದಲ್ಲಿ 300ಕ್ಕೂ ಹೆಚ್ಚು ನಕಲಿ ಬಾಬಾಗಳು ಅಥವಾ ಸ್ವಯಂ ಘೋಷಿತ ದೇವಮಾನವರನ್ನು ಬಂಧಿಸಲಾಗಿದೆ. ಆಧ್ಯಾತ್ಮಿಕ ನಾಯಕರಾಗಿ ನಟಿಸುತ್ತಾ ವಂಚನೆಗಳನ್ನು ಮಾಡುತ್ತಿದ್ದ ಬಾಂಗ್ಲಾದೇಶಿ ಪ್ರಜೆ ಸೇರಿದಂತೆ ಹಲವು ಬಾಬಾಗಳನ್ನು ಈ ಕಾರ್ಯಾಚರಣೆಯ ಮೂಲಕ ಪತ್ತೆಹಚ್ಚಲಾಗಿದೆ. ಉತ್ತರಾಖಂಡ ಪೊಲೀಸರು ಇಲ್ಲಿಯವರೆಗೆ 4,000ಕ್ಕೂ ಹೆಚ್ಚು ಆಧ್ಯಾತ್ಮಿಕ ನಾಯಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ.

ಡೆಹ್ರಾಡೂನ್, ಆಗಸ್ಟ್ 26: ಆಧ್ಯಾತ್ಮದ ಹೆಸರಿನಲ್ಲಿ ಜನರನ್ನು ವಂಚನೆ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಉತ್ತರಾಖಂಡದಲ್ಲಿ ಪತ್ತೆಹಚ್ಚಲಾಗಿದೆ. ಉತ್ತರಾಖಂಡದ (Uttarakhand) ಪೊಲೀಸರು ಧಾರ್ಮಿಕ ವ್ಯಕ್ತಿಗಳಾಗಿ ನಟಿಸುವ ವಂಚಕರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಲಾದ ವಿಶೇಷ ಅಭಿಯಾನವಾದ ಆಪರೇಷನ್ ಕಾಲನೇಮಿ ಅಡಿಯಲ್ಲಿ 300ಕ್ಕೂ ಹೆಚ್ಚು ನಕಲಿ ದೇವಮಾನವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಂಗ್ಲಾದೇಶಿ ಪ್ರಜೆಯೂ ಸೇರಿದ್ದಾರೆ.
ಆಪರೇಷನ್ ಕಾಲನೇಮಿ ಕಾರ್ಯಾಚರಣೆಯಡಿಯಲ್ಲಿ ಉತ್ತರಾಖಂಡದ ಪೊಲೀಸರು ಮೋಸ ಮಾಡುತ್ತಿದ್ದ, ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದ್ದ ಮತ್ತು ಅವರ ಗುರುತನ್ನು ಮರೆಮಾಡುತ್ತಿದ್ದ 4,000ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಿದ್ದಾರೆ. ಹರಿದ್ವಾರ ಪೊಲೀಸ್ ಪಿಆರ್‌ಒ, ಡಿಎಸ್ ಕೊಹ್ಲಿ 4,000ಕ್ಕೂ ಹೆಚ್ಚು ಸಾಧುಗಳನ್ನು ಪರಿಶೀಲಿಸಿದ ನಂತರ ಒಟ್ಟು 315 “ನಕಲಿ ಬಾಬಾ”ಗಳನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ವ್ಯಕ್ತಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಂಡುಬಂದಿದೆ.
ಇದನ್ನೂ ಓದಿ: ಮೇಘಸ್ಫೋಟದಿಂದ ಜಮ್ಮು ಕಾಶ್ಮೀರದ ದೋಡಾದಲ್ಲಿ 4 ಜನ ಸಾವು, ಮನೆಗಳಿಗೆ ಹಾನಿ
ಹರಿದ್ವಾರ, ಡೆಹ್ರಾಡೂನ್ ಮತ್ತು ಉಧಮ್ ಸಿಂಗ್ ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅಲ್ಲಿ ಅನೇಕ ಸ್ವಯಂಘೋಷಿತ ಬಾಬಾಗಳು ಶಿಬಿರಗಳು ಮತ್ತು ಆಶ್ರಮಗಳನ್ನು ಸ್ಥಾಪಿಸಿದ್ದರು. ಈ ವ್ಯಕ್ತಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಪವಾಡಗಳು, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಆಶೀರ್ವಾದಗಳ ಸುಳ್ಳು ಭರವಸೆಗಳ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.
छद्म वेशधारियों की पहचान उजागर कर रहा ऑपरेशन कालनेमि…#OperationKaalnemi pic.twitter.com/puPPVWeowF
— Pushkar Singh Dhami (@pushkardhami) July 22, 2025
ಬಂಧಿತ ಈ ನಕಲಿ ಸಾಧುಗಳಲ್ಲಿ ಹರಿದ್ವಾರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ವೈದ್ಯನಂತೆ ನಟಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆಯೂ ಸೇರಿದ್ದಾನೆ. ಗಡಿಯಾಚೆಗಿನ ಚಟುವಟಿಕೆಗಳು ಮತ್ತು ವೀಸಾ ಉಲ್ಲಂಘನೆಗಳಿಗೆ ಸಂಬಂಧಿಸಿದ ಆರೋಪಗಳಿಗಾಗಿ ಈಗ ಅವರನ್ನು ತನಿಖೆ ಮಾಡಲಾಗುತ್ತಿದೆ. ಈ ಬಂಧಿತ ಸಾಧುಗಳಿಗೆ ಯಾವುದೇ ಧಾರ್ಮಿಕ ಅಥವಾ ಆಧ್ಯಾತ್ಮಿಕ ಅರ್ಹತೆಗಳಿರಲಿಲ್ಲ ಎಂಬುದು ದೃಢಪಟ್ಟಿದೆ. ಕೆಲವರು ಹಣಕಾಸಿನ ವಂಚನೆಯಲ್ಲಿ ಭಾಗಿಯಾಗಿದ್ದರೆ, ಇತರರ ಮೇಲೆ ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ದುರ್ಬಲ ವ್ಯಕ್ತಿಗಳನ್ನು ಶೋಷಿಸಿದ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ: ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಕರ್ನಾಟಕದ ಮೂಲದ ನಾಗಸಾಧು ಸಾವು
ಆಪರೇಷನ್ ಕಾಲನೇಮಿ ಎಂಬ ಹೆಸರು ಪೌರಾಣಿಕ ರಾಕ್ಷಸ ಕಾಲನೇಮಿಯಿಂದ ಪ್ರೇರಿತವಾಗಿದೆ. ಅವನು ಇತರರನ್ನು ದಾರಿ ತಪ್ಪಿಸಲು ಮತ್ತು ಹಾನಿ ಮಾಡಲು ವೇಷ ಧರಿಸುತ್ತಿದ್ದ. ಇಲ್ಲಿಯವರೆಗೆ, ಪೊಲೀಸರು 4,000ಕ್ಕೂ ಹೆಚ್ಚು ಆಧ್ಯಾತ್ಮಿಕ ನಾಯಕರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಕ್ರಮವು ಹಲವಾರು ಅನಧಿಕೃತ ಆಶ್ರಮಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಮುಚ್ಚಲು ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Tue, 26 August 25




