
ಚೆನ್ನೈ, ಆಗಸ್ಟ್ 17: ಎಸ್‌ಆರ್‌ಎಮ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಸದ್ಗುರುಗಳ (Sadhguru) ಮಣ್ಣು ಉಳಿಸಿ (Save Soil) ಅಭಿಯಾನವು ರವಿವಾರ (ಆಗಸ್ಟ್ 17) ಚೆನ್ನೈನ ಕಟ್ಟಂಕುಲತೂರ್‌ನಲ್ಲಿರುವ ಎಸ್‌ಆರ್‌ಎಮ್ ವಿಶ್ವವಿದ್ಯಾಲಯದ ಆವರಣದಲ್ಲಿ “ಅಗ್ರಿ ಸ್ಟಾರ್ಟ್-ಅಪ್ ಫೆಸ್ಟಿವಲ್ 2.0” ಎಂಬ ವಿಚಾರ ಸಂಕಿರಣವನ್ನು ಆಯೋಜಿಸಿತು. ಈ ಭವ್ಯ ಕಾರ್ಯಕ್ರಮದಲ್ಲಿ ರೈತರು, ಗೃಹಿಣಿಯರು ಮತ್ತು ಕೃಷಿ ಆಧಾರಿತ ವ್ಯವಹಾರಗಳಲ್ಲಿ ಭವ್ಯ ಭವಿಷ್ಯವನ್ನು ಕಾಣುವ ಹಂಬಲ ಹೊಂದಿರುವ ಯುವಕರು ಸೇರಿದಂತೆ 5,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೃಷಿಯನ್ನು ಲಾಭ ಪಡೆಯುವುದು ಹೇಗೆ ಮತ್ತು ಕೃಷಿ ಉದ್ಯಮ ಕೌಶಲ್ಯವನ್ನು ಬೆಳಸುವ ಬಗ್ಗೆ ಗಮನಹರಿಸಲಾಯಿತು. ಈ ಕಾರ್ಯಕ್ರಮದ ಮೂಲಕ ಅನುಭವಿ ವೃತ್ತಿಪರರಿಂದ ನೇರವಾಗಿ ಕಲಿಯಲು ಅವಕಾಶ ದೊರೆಯಿತು. ಈ ಕಾರ್ಯಕ್ರಮವು ಕೃಷಿ ಉದ್ಯಮದಕಡೆಗೆ ಕಡೆಗೆ ಗಟ್ಟಿಯಾದ ಹೆಜ್ಜೆ ಇಡಲು ಅವಕಾಶವನ್ನು ಒದಗಿಸಿತು. ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿ. ನೂರಾರು ಜನರು ಆನ್‌ಲೈನ್‌ನಲ್ಲಿ ಭಾಗವಹಿಸಿದರು. ಮತ್ತು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಮಣ್ಣು ಉಳಿಸಿ ಅಭಿಯಾನದ ಸಂಯೋಜಕ ಸ್ವಾಮಿ ಶ್ರೀಮುಖ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಚೋಳಮಂಡಲಂ ಹೂಡಿಕೆ ಮತ್ತು ಹಣಕಾಸು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನರೇಂದ್ರ ಕುಮಾರ್ ಮತ್ತು ಕೇಂದ್ರ ಕೃಷಿ ವಿಸ್ತರಣಾ ಕಚೇರಿಯ ಜಂಟಿ ನಿರ್ದೇಶಕ ಸೆಲ್ವಂ ನೀರವಿ ಸೇರಿದಂತೆ ಪ್ರಮುಖ ಗಣ್ಯರು ಈ ತರಬೇತಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಎಸ್‌ಆರ್‌ಎಮ್ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊಫೆಸರ್ ಸಿ. ಮುತ್ತಮಿಳ್ಚೆಲ್ವನ್, ಮಹತ್ವಾಕಾಂಕ್ಷಿ ಕೃಷಿ-ಉದ್ಯಮಿಗಳನ್ನು ಬೆಂಬಲಿಸುವ ಸಂಸ್ಥೆಯ ಬದ್ಧತೆಯನ್ನು ಶ್ಲಾಘಿಸಿದರು. “ನಮ್ಮ ವಿಶ್ವವಿಶ್ವವಿದ್ಯಾಲಯ ಸಂಸ್ಥಾಪಕ ಡಾ. ಪಾರಿವೆಂಧರ್ ಅವರ ಮಾರ್ಗದರ್ಶನದಲ್ಲಿ, ನಾವು ಅಚಿರಪಕ್ಕಂನಲ್ಲಿ ಕೃಷಿ ವಿಜ್ಞಾನ ಕಾಲೇಜನ್ನು ನಡೆಸುತ್ತಿದ್ದೇವೆ. ಕೃಷಿ ಆಧಾರಿತ ವ್ಯವಹಾರಗಳನ್ನು ಪ್ರಾರಂಭಿಸಲು ಬಯಸುವವರಿಗೆ, ನಾವು ಸ್ಥಳ ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತೇವೆ. ಅವರು ಎರಡೂವರೆ ವರ್ಷಗಳ ಕಾಲ ನಮ್ಮೊಂದಿಗೆ ಕೆಲಸ ಮಾಡಬಹುದು, ಈ ಅವಧಿಯಲ್ಲಿ SRM ವಿಶ್ವವಿದ್ಯಾನಿಲಯವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ.” ಎಂದು ಹೇಳಿದರು.
NABARD ನ ಜನರಲ್ ಮ್ಯಾನೇಜರ್ ಹರಿ ಕೃಷ್ಣನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷಿ ಉದ್ಯಮಗಳಿಗೆ ನೀಡುವ ಸಂಸ್ಥೆಯ ಹಣಕಾಸು ಯೋಜನೆಗಳ ಬಗ್ಗೆ ತಿಳಿಸಿದರು. “ಮಧುರೈನ ಕೃಷಿ-ಉದ್ಯಮ ಇನ್ಕ್ಯುಬೇಷನ್ ಫೋರಮ್ (MABIF) ಮೂಲಕ, ದಕ್ಷಿಣ ತಮಿಳುನಾಡಿನಲ್ಲಿನ ಗ್ರಾಮೀಣದಲ್ಲಿನ ಸಣ್ಣ ಪ್ರಮಾಣದ ಕೃಷಿ ಉದ್ಯಮಿಗಳಿಗೆ ಮತ್ತು ಮಹಿಳೆಯರಿಗೆ ಉಪಕರಣಗಳನ್ನು ಒದಗಿಸುವ ಮೂಲಕ ಮತ್ತು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸಹಾಯ ಮಾಡುವ ಮೂಲಕ ಬೆಂಬಲ ನೀಡುತ್ತೇವೆ. ಅದೇ ರೀತಿ, NABKISSAN ಉದಯೋನ್ಮುಖ ನವೋದ್ಯಮಗಳಿಗೆ ಸಾಲಗಳನ್ನು ನೀಡುತ್ತದೆ. ಆದರೆ, Agri Sure ಸಂಪೂರ್ಣವಾಗಿ ಸ್ಥಾಪಿತವಾದ ಕಂಪನಿಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಒದಗಿಸುತ್ತದೆ. NABARD ಈಶಾದ ಮಣ್ಣಿ ಉಳಿಸಿ ಅಭಿಯಾನದಲ್ಲಿ ಸಹಯೋಗ ಹೊಂದುತ್ತದೆ” ಎಂದು ಹೇಳಿದರು.
ಮಧುರೈ ಥಾಣಾ ಆಹಾರ ಉತ್ಪನ್ನಗಳ ಮಾಲೀಕರಾದ ಧನಲಕ್ಷ್ಮಿ ವಿಘ್ನೇಶ್, “ನಾವು ಸಾಂಪ್ರದಾಯಿಕ ಅಕ್ಕಿಯನ್ನು ಬಳಸಿಕೊಂಡು ಮಧುಮೇಹಿಗಳಿಗೆ ವಿಶೇಷ ಪೌಷ್ಟಿಕಾಂಶ-ಭರಿತ ಹಿಟ್ಟನ್ನು ಅಭಿವೃದ್ಧಿಪಡಿಸಿದ್ದೇವೆ. ಇದೀಗ ನಾವು 100 ಕ್ಕೂ ಹೆಚ್ಚು ಆಹಾರ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ. ಆಹಾರವನ್ನು ಔಷಧಿಯಾಗಿ ಪರಿಗಣಿಸುವುದನ್ನು ನಾವು ಮರೆತಿದ್ದೇವೆ ಮತ್ತು ನಾವು ಆ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಮಧುರೈನಲ್ಲಿ ಪ್ರಾರಂಭಿಸಿ, ನಾವು ಈಗ ಎಂಟು ದೇಶಗಳಿಗೆ ರಫ್ತು ಮಾಡುತ್ತೇವೆ. ಮಾಸಿಕ 10 ಲಕ್ಷ ಆದಾಯವನ್ನು” ಗಳಿಸುತ್ತೇವೆ ಎಂದು ಹೇಳಿದರು.
ಸಿ ಚೇಂಜ್ ಬಿಸಿನೆಸ್ ಕನ್ಸಲ್ಟಿಂಗ್‌ನ ಸಂಸ್ಥಾಪಕ ಎಂ.ಕೆ. ಆನಂದ್ ಅವರು ಮಾತನಾಡಿ, “ಜಾಗತಿಕವಾಗಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಆರ್ಥಿಕ ಬೆಳವಣಿಗೆಗೆ ಶೇ 50 ರಷ್ಟು ಕೊಡುಗೆ ನೀಡುತ್ತವೆ” ಎಂದು ಹೇಳಿದರು. ಭಾರತದಲ್ಲಿ, ಅವರು ಒಟ್ಟು ಉತ್ಪಾದನೆಯ ಶೇ 30 ರಷ್ಟ ಹೊಂದಿದ್ದು, ಎಂಎಸ್ಎಮಿಗಳನ್ನು ಆರ್ಥಿಕತೆಯ ಬೆನ್ನೆಲುಬಾಗಿ ಮಾಡುತ್ತೇವೆ. ನವೋದ್ಯಮಿಗಳು ಉದ್ಯಮವನ್ನು ಪ್ರಾರಂಭಿಸುವ ಮೊದಲು ತಮ್ಮ ವಿಶಿಷ್ಟ ಸಾಮರ್ಥ್ಯ, ಮಾರುಕಟ್ಟೆ ಮೌಲ್ಯ, ವ್ಯವಹಾರ ತಂತ್ರ, ಹಣಕಾಸು ಸಂಪನ್ಮೂಲಗಳು, ವಿಶ್ವಾಸಾರ್ಹ ಕಚ್ಚಾ ವಸ್ತುಗಳ ಪೂರೈಕೆದಾರರನ್ನು ಗುರುತಿಸಬೇಕು. ಹೊಸ ಉದ್ಯಮಿಗಳಿಗಾಗಿ 10 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿವೆ. ” ಎಂದು ತಿಳಿಸಿದರು.
ಪಾಮ್ ಎರಾ ಫುಡ್ಸ್‌ನ ಕಣ್ಣನ್ ಹರಿ, ಚೆನ್ನೈನ ಮೈ ಹಾರ್ವೆಸ್ಟ್ ಫಾರ್ಮ್ಸ್‌ನ ಅರ್ಚನಾ ಸ್ಟಾಲಿನ್, ಪೆರಿಯಾಕುಲಂ ತೋಟಗಾರಿಕಾ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ವಸಂತನ್ ಸೆಲ್ವಂ, ಕೃಷಿ ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸುವ ಮತ್ತು ಸ್ಕೇಲಿಂಗ್ ಮಾಡುವ ತಂತ್ರಗಳನ್ನು ತಿಳಿಸಿದರು. ಮತ್ತು ಜಾಗತಿಕ ಗುಣಮಟ್ಟದ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ ಕುರಿತು ಮಧುರೈ ಮೂಲದ ಪ್ಯಾಕೇಜಿಂಗ್ ತಜ್ಞ ಅಶ್ವಿನ್ ಕುಮಾರ್ ಅವರು ಅಮೂಲ್ಯವಾದ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ಮತ್ತು ಸಣ್ಣ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುವ 100 ಕ್ಕೂ ಹೆಚ್ಚು ಮಳಿಗೆಗಳು ಇದ್ದವು.
ಸದ್ಗುರುಗಳು ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನವು ಮಣ್ಣಿನ ಅವನತಿಯನ್ನು ತಡೆಯಲು ಮತ್ತು ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು ಜಾಗತಿಕ ಉಪಕ್ರಮವಾಗಿದೆ. ಇದರ ರೈತ-ಕೇಂದ್ರಿತ ಕಾರ್ಯಕ್ರಮಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ, ನೀರಿನ ಧಾರಣವನ್ನು ಹೆಚ್ಚಿಸುವ, ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಬಹು-ಬೆಳೆ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಇದು ಹೆಚ್ಚಿನ ಇಳುವರಿ, ಕಡಿಮೆ ವೆಚ್ಚಗಳು ಮತ್ತು ಹೆಚ್ಚಿನ ಲಾಭದಾಯಕತೆಗೆ ಕಾರಣವಾಗುತ್ತದೆ.
ಈ ಅಭಿಯಾನದ ಅಡಿಯಲ್ಲಿ, ಕಳೆದ 15 ವರ್ಷಗಳಲ್ಲಿ 35,000 ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದ್ದು, 10,000 ಕ್ಕೂ ಹೆಚ್ಚು ರೈತರು ನೈಸರ್ಗಿಕ ಕೃಷಿಯತ್ತ ವಾಲಿದ್ದಾರೆ. ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳ ಮೂಲಕ, ಈ ಉಪಕ್ರಮವು ರೈತರಿಗೆ ಮಾರುಕಟ್ಟೆ ಮತ್ತು ಸ್ವಾವಲಂಬಿ ಉದ್ಯಮಿಗಳಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ.
Published On - 8:29 pm, Sun, 17 August 25