Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ

| Updated By: Lakshmi Hegde

Updated on: Jun 23, 2021 | 9:03 AM

ನಿನ್ನೆ 53 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಅದರಲ್ಲಿ 47,55,674 ಜನರಿಗೆ ಮೊದಲ ಡೋಸ್​ ಆಗಿದ್ದು, ಉಳಿದ 6,31,277 ಮಂದಿಗೆ ಎರಡನೇ ಡೋಸ್​ ನೀಡಲಾಗಿದೆ.

Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಜೂನ್​ 21ರಿಂದ ಕೇಂದ್ರ ಸರ್ಕಾರದ ಹೊಸ ಲಸಿಕೆ ನೀತಿ ಜಾರಿಯಾಗಿದೆ. ದೇಶಾದ್ಯಂತ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್​ ನೀಡಲಾಗುತ್ತಿದೆ. ಈ ನೀತಿ ಜಾರಿಗೆ ಬಂದ ಮೊದಲ ದಿನ ಅಂದರೆ ಸೋಮವಾರ ಬರೋಬ್ಬರಿ 88 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ದಾಖಲೆ ಸೃಷ್ಟಿಸಲಾಗಿತ್ತು. ಆದರೆ ಎರಡನೇ ದಿನ ಅಂದರೆ ಮಂಗಳವಾರ ಈ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ ರಾತ್ರಿ 11.59ರ ಹೊತ್ತಿನ ಕೊವಿನ್​ ಆ್ಯಪ್​ ಡಾಟಾ ಅನ್ವಯ ಮಂಗಳವಾರ 53,86,951 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಮೊನ್ನೆಗಿಂತ..ನಿನ್ನೆಗೆ ಸುಮಾರು 30 ಲಕ್ಷ ಕಡಿಮೆಯಾಗಿದೆ.

ನಿನ್ನೆ 53 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಅದರಲ್ಲಿ 47,55,674 ಜನರಿಗೆ ಮೊದಲ ಡೋಸ್​ ಆಗಿದ್ದು, ಉಳಿದ 6,31,277 ಮಂದಿಗೆ ಎರಡನೇ ಡೋಸ್​ ನೀಡಲಾಗಿದೆ. ನಿನ್ನೆ ಒಟ್ಟಾರೆ 59 ಜನರಿಗೆ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿದ್ದು ವರದಿಯಾಗಿದೆ. ಇನ್ನು ಮಂಗಳವಾರ 28,55,609 ಪುರುಷರು ಹಾಗೂ 25,30,203 ಮಹಿಳೆಯರು ಲಸಿಕೆ ಪಡೆದಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್​, ಸೋಮವಾರದ ದಾಖಲೆ ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿದ್ದರು. ಅಂದು ಶೇ.46ರಷ್ಟು ಮಹಿಳೆಯರು ಮತ್ತು ಶೇ.53 ರಷ್ಟು ಪುರುಷರು ಲಸಿಕೆ ಪಡೆದಿದ್ದಾರೆ. ನಾವು ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ಮೂರನೆ ಅಲೆ ಸನಿಹವಾಗುತ್ತಿದೆ.. ಆದ್ರೆ ರಾಜ್ಯದಲ್ಲಿ ಮಕ್ಕಳಿಗೆ ಚಿಕಿತ್ಸೆಗೆ ವೈದ್ಯರ ಕೊರತೆ.. 6 ಸಾವಿರ ಮಕ್ಕಳಿಗೆ ಒಬ್ಬ ವೈದ್ಯ