ದೆಹಲಿ: ಭಾನುವಾರದವರೆಗೆ ದೇಶದಲ್ಲಿ 95 ಕೋಟಿಗೂ ಹೆಚ್ಚು ಕೊರೊನಾವೈರಸ್ ಲಸಿಕೆಗಳನ್ನು(coronavirus vaccines) ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya)ಟ್ವಿಟರ್ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು ಭಾರತವು 100 ಕೋಟಿ ಕೊವಿಡ್ -19 ಲಸಿಕೆಗಳನ್ನು ನೀಡಲು ಹತ್ತಿರವಾಗಿದೆ ಎಂದು ಹೇಳಿದರು. “ವಿಶ್ವದ ಅತಿದೊಡ್ಡ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನವು ಭರದಿಂದ ಸಾಗಿದೆ. ಭಾರತವು 95 ಕೋಟಿ ಕೊವಿಡ್ 19 ಲಸಿಕೆ ಡೋಸ್‌ಗಳ ನೀಡಿಕೆ ಪೂರ್ಣಗೊಳಿಸಿದೆ. 100 ಕೋಟಿ ಲಸಿಕೆ ಡೋಸ್‌ಗಳ ನಿರ್ವಹಣೆ ವೇಗವಾಗಿ ಸಾಗುತ್ತಿದೆ. ಶೀಘ್ರವಾಗಿ ಲಸಿಕೆ ಪಡೆಯಿರಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಿ!”ಎಂದು ಹೇಳಿದ್ದಾರೆ.
ಈ ಮೊದಲು 96 ಕೋಟಿ ಕೊವಿಡ್ ಲಸಿಕೆ ಡೋಸ್‌ಗಳನ್ನು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಒಟ್ಟು 8,28,73,425 ಉಳಿದವು ಮತ್ತು ಬಳಕೆಯಾಗದ ಲಸಿಕೆ ಪ್ರಮಾಣಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿದೆ ಎಂದು ಅದು ಹೇಳಿದೆ.
World’s largest successful vaccination drive in full swing! ?
✅ India completes administration of 95 crore #COVID19 vaccine doses.
? Marching rapidly towards administering 100 crore vaccine doses.
Get vaccinated quickly and encourage your friends & family to do the same! pic.twitter.com/yp2MLLQMuo
— Dr Mansukh Mandaviya (@mansukhmandviya) October 10, 2021
ಕೇಂದ್ರ ಸರ್ಕಾರವು ವೇಗವನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಕೊವಿಡ್ -19 ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Coronavirus cases in India ಭಾರತದಲ್ಲಿ 18,166 ಹೊಸ ಕೊವಿಡ್ ಪ್ರಕರಣ ಪತ್ತೆ, 24 ಮಂದಿ ಸಾವು
Published On - 5:38 pm, Sun, 10 October 21